

ತಮಿಳುನಾಡು: ಕಾಲಿವುಡ್ ಸೂಪರ್ಸ್ಟಾರ್, ಅಭಿಮಾನಿಗಳ ನೆಚ್ಚಿನ ತಲೈವಾ, ರಜನಿಕಾಂತ್ ಅಭಿನಯದ 'ಜೈಲರ್' ಇದೀಗ ಜಾಗತಿಕವಾಗಿ ಬ್ಲಾಕ್ಬಸ್ಟರ್ ಹಿಟ್ ಚಿತ್ರವಾಗಿ ಹೊರಹೊಮ್ಮಿದೆ. ಆಗಸ್ಟ್ 10, 2023 ರಂದು ವಿಶ್ವದಾದ್ಯಂತ ಏಕಕಾಲಕ್ಕೆ ಬಹುತೇಕ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ, ಇಂದು ಬಾಕ್ಸ್ ಆಫೀಸ್ ಕಲೆಕ್ಷನ್ನಲ್ಲಿ ದಾಖಲೆ ಬರೆಯುತ್ತಿದೆ.
ನೆಲ್ಸನ್ ದಿಲೀಪ್ಕುಮಾರ್ ನಿರ್ದೇಶನದ 'ಜೈಲರ್' ಚಿತ್ರದ ನಿರ್ಮಾಣ ಸಂಸ್ಥೆ ಸನ್ ಪಿಕ್ಚರ್ಸ್, ಮೊದಲ ವಾರದ ಬಾಕ್ಸ್ ಆಫೀಸ್ ಗಳಿಕೆಯನ್ನು ಅಧಿಕೃತವಾಗಿ ಘೋಷಿಸಿದೆ. ಜಾಗತಿಕವಾಗಿ ಇಲ್ಲಿಯವರೆಗೆ 375.40 ಕೋಟಿ ರೂ. ಮೊತ್ತವನ್ನು ಚಿತ್ರ ಗಳಿಸಿದೆ. ಇದು ಕೇವಲ ಸದ್ಯದ ವರದಿಯಾಗಿದೆ. ಚಿತ್ರಮಂದಿರಗಳಲ್ಲಿ ಪ್ರದರ್ಶನ ಹೆಚ್ಚುತ್ತಿರುವ ಹಿನ್ನಲೆ ಅಂಕಿ-ಅಂಶವು ನವೀಕರಣಗೊಳ್ಳಲಿದೆ ಎಂದು ಚಿತ್ರತಂಡ ತಿಳಿಸಿದೆ.
ಸದ್ಯ ಸಿನಿಪ್ರೇಕ್ಷಕರನ್ನು ಮನರಂಜಿಸುವಲ್ಲಿ ಯಶಸ್ವಿಯಾದ ಜೈಲರ್ ಚಿತ್ರದಲ್ಲಿ, ತಲೈವಾ ರಜನಿಕಾಂತ್ ಮತ್ತು ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಅವರ ಪಾತ್ರಗಳು ಪ್ರೇಕ್ಷಕರ ಹುಬ್ಬೇರುವಂತೆ ಮಾಡಿದೆ. ಇಬ್ಬರ ನಟನೆಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ಚಿತ್ರದಲ್ಲಿ ವಿನಾಯಕನ್, ತಮನ್ನಾ ಭಾಟಿಯಾ, ರಮ್ಯಾ ಕೃಷ್ಣನ್, ಮೋಹನ್ ಲಾಲ್, ಜಾಕಿ ಶ್ರಾಫ್, ಮಿರ್ನಾ ಮೆನನ್, ಸುನಿಲ್ ಮತ್ತು ಯೋಗಿ ಬಾಬು ಮತ್ತಿತರರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ,(ಏಜೆನ್ಸೀಸ್).