ಅಂಬಾನಿ ಮದುವೆ ಸಮಾರಂಭ ಮಗಿಸಿ ದಿಢೀರ್​ ಆಸ್ಪತ್ರೆಗೆ ದಾಖಲಾದ ಜಾನ್ವಿ ಕಪೂರ್​​…!

jfinalllsss
Published on

ಮೊನ್ನೆ ಮೊನ್ನೆಯಷ್ಟೇ ಅನಂತ್​ಅಂಬಾನಿ-ರಾಧಿಕಾ ಮರ್ಚೆಂಟ್​ಮದುವೆಯಲ್ಲಿ ಜಾಹ್ನವಿ ಕಪೂರ್ ಕಣ್ಮನ ಸೆಳೆದಿದ್ದರು. ಗೋಲ್ಡನ್ ಡ್ರೆಸ್‌ನಲ್ಲಿ ಮಿರ ಮಿರ ಮಿಂಚಿದ್ದರು. ಆ ನಂತರ ಅದ್ಧೂರಿ ಮದುವೆಯನ್ನು ಮುಗಿಸಿಕೊಂಡು ಜಾಹ್ನವಿ ಕಪೂರ್ ಚೆನ್ನೈಗೆ ತೆರಳಿದ್ದರು. ತದನಂದರಲ್ಲಿ ಜಾನ್ವಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಜಾಹ್ನವಿ ಕಪೂರ್ ಚೆನ್ನೈನಲ್ಲಿ ಸೀ ಫುಡ್​ಸೇವಿಸಿದ್ದಾರೆ ಎನ್ನಲಾಗಿದೆ. ಅದರಿಂದಲೇ ಜಾನ್ವಿ ಕಪೂರ್​ಅವರಿಗೆ ಫುಡ್​ಪಾಯ್ಸನ್​ಆಗಿದೆ. ಇನ್ನೂ ಅನಾರೋಗ್ಯದಿಂದ ಚೆನ್ನೈ ನಿವಾಸದಲ್ಲಿ ಇರುವಾಗಲೇ ಅವರು ಕುಸಿದು ಬಿದ್ದರು ಎನ್ನುವ ವಿಚಾರವೂ ಇದೆ.
ಜಾಹ್ನವಿ ಕಪೂರ್ ಸದ್ಯಕ್ಕೆ ಆಸ್ಪತ್ರೆಗೆ ದಾಖಲಾಗಿರುವ ವಿಚಾರ ನಿಜಾ ಎಂದು ಹೇಳಿರುವ ಜಾಹ್ನವಿ ಕಪೂರ್ ತಂದೆ ಬೋನಿ ಕಪೂರ್ ಇನ್ನೊಂದೆರಡು ದಿನದಲ್ಲಿ ಆಸ್ಪತ್ರೆಯಿಂದ ಜಾಹ್ನವಿ ಕಪೂರ್ ಅವರನ್ನು ಡಿಸ್ಚಾರ್ಜ್​ ಮಾಡಲಾಗುತ್ತೆ ಎಂದು ತಿಳಿಸಿದ್ದಾರೆ.

ಜಾನ್ವಿ ಕಪೂರ್ ಬುಧವಾರದಿಂದ ಅಸ್ವಸ್ಥರಾಗಿದ್ದರು ಎನ್ನಲಾಗ್ತಿದೆ. ಆದರೆ ಗುರುವಾರದಂದು ಆಕೆಗೆ ಹೆಚ್ಚು ಸುಸ್ತಾಗಿದ್ದರಂತೆ. ವಿಕ್ನೆಸ್ ನಿಂದ ಬಳಲುತ್ತಿದ್ದ ನಂತರ ಇವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು.ಅನಾರೋಗ್ಯದ ಕಾರಣ ನಟಿ ತಮ್ಮ ಎಲ್ಲಾ ಶೂಟಿಂಗ್ ರದ್ದುಗೊಳಿಸಿದ್ದಾರೆ. ಜಾನ್ವಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಕೆಯ ಆರೋಗ್ಯ ಸುಧಾರಿಸಿದೆ. ಜಾನ್ವಿ ಶುಕ್ರವಾರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಲಿದ್ದಾರೆ ಎನ್ನಲಾಗಿದೆ.

ಜುಲೈ 15 ರಂದು ಉಲ್ಜ್ ಚಿತ್ರದ ಪ್ರಚಾರ ಕಾರ್ಯಕ್ರಮದಲ್ಲೂ ಜಾನ್ವಿ ಕಾಣಿಸಿಕೊಂಡರು. ನಿರಂತರ ಕೆಲಸ ಮತ್ತು ಓಡಾಟದಿಂದ ನಟಿ ಧಣಿದಿದ್ದಾರೆ ಎನ್ನಲಾಗ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net