

ಬೆಂಗಳೂರು: ಈ ಹಿಂದೆ ಕಾಂಗ್ರೆಸ್ ಸರ್ಕಾರದ ವಿರುದ್ಧ ಹಲವು ಹೇಳಿಕೆಗಳನ್ನು ನೀಡಿದ್ದ
ಚಿಂತಕ ಚಕ್ರವರ್ತಿ ಸೂಲಿಬೆಲೆ(Chakravarthy Sulibele) ಅವರಿಗೆ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್(MB Patil) ಅವರು ಎಚ್ಚರಿಕೆಯೊಂದನ್ನು ನೀಡಿದ್ದರು.
ಚಕ್ರವರ್ತಿ ಸೂಲಿಬೆಲೆ ಅವರಿಗೆ ಇನ್ನು ಮುಂದೆ ಆಟ ನಡೆಯದು, ಗಲಾಟೆ ಮಾಡಿದರೆ ಜೈಲೇ ಗತಿ ಎಂದು ಎಚ್ಚರಿಕೆಯನ್ನು ರವಾನಿಸಿದ್ದರು. ಎಂ.ಬಿ ಪಾಟೀಲ್ ಅವರ ಈ ಹೇಳಿಕೆಗೆ ನಟ ಜಗ್ಗೇಶ್(Actor Jaggesh) ಅವರು ಇದೀಗ ಟ್ವೀಟ್(Tweet) ಮೂಲಕ ತಿರುಗೇಟು ನೀಡಿದ್ದಾರೆ.
"ಸೂಲಿಬೆಲೆ ಅವರು ಯಾವ ಅಧಿಕಾರದ ಹಿಂದೆ ಹೋಗದೆ ಸಾಂಸ್ಕೃತಿಕ, ತತ್ವ ವಿಚಾರ, ಕೆರೆಕಟ್ಟೆ ಪುನರ್ಜೀವನ, ಪ್ರವಚನದಂತ ಸಾತ್ವಿಕ ಚಿಂತಕ. ಅವರನ್ನು ಜೈಲಿಗೆ ಹಾಕುವೆ ಎಂದರೆ, ಅಲ್ಲಿಗೆ ಗೆದ್ದು ತಿಂಗಳಿಗೆ ಈ ಮಾತು ಸನ್ಮಾನ್ಯ ಎಂ.ಬಿ. ಪಾಟೀಲ್ ಬಾಯಲ್ಲಿ! ಮಾನ್ಯರೆ ಕಾನೂನು ನಿಮ್ಮ ಜೇಬಲ್ಲಿ ಇದೆಯ? ಕೋಟಿ ಸಂಖ್ಯೆಯ ಭುಜಕೊಡುವ ಶಕ್ತಿ ಜೀವಂತವಿದೆ ಅವರ ಬೆನ್ನಿಗೆ!" ಎಂದು ಟ್ವೀಟ್ ಮಾಡಿ ಪ್ರತಿಕ್ರಿಯಿಸಿದ್ದಾರೆ.