ಅಂಧರಿಗೆ ಆಸರೆಯಾಯಿತು ಜಗ್ಗೇಶ್-ಪರಿಮಳ ನಿಲಯ

Jaggesh
Published on

ಬೆಂಗಳೂರು: ಸರಿಯಾದ ಸೂರಿಲ್ಲದೆ ಸಂಕಷ್ಟದಲ್ಲಿದ್ದ ಅಂಧ ಗಾಯಕಿಯರಿಗೆ ಈ ಹಿಂದೆ ನಟ ಜಗ್ಗೇಶ್ ನೀಡಿದ್ದ ಭರವಸೆಯಂತೆ ‘ಗೃಹಭಾಗ್ಯ’ ಲಭಿಸಿದೆ. ಮಾತ್ರವಲ್ಲ, ಗುರುವಾರ ಜಗ್ಗೇಶ್ ದಂಪತಿಯೇ ಖುದ್ದು ತೆರಳಿ ಗೃಹಪ್ರವೇಶದಲ್ಲಿ ಭಾಗಿಯಾಗಿದ್ದಾರೆ.

ಜೀ ಕನ್ನಡ ವಾಹಿನಿಯ ‘ಸರಿಗಮಪ’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅಂಧರಾದ ತುಮಕೂರು ಜಿಲ್ಲೆಯಡಿು ಮಧುಗಿರಿ ತಾಲೂಕಿನ ಡಿ.ವಿ.ಹಳ್ಳಿ ನಿವಾಸಿ ಗೌರಮ್ಮ, ರತ್ಮಮ್ಮ, ಮಂಜಮ್ಮ ಅವರ ಕಷ್ಟಕ್ಕೆ ಮರುಗಿದ್ದ ಜಗ್ಗೇಶ್, ಅವರಿಗೆ ಮನೆ ಕಟ್ಟಿಸಿಕೊಡುವ ಭರವಸೆ ನೀಡಿದ್ದರು. ಈ ಮನೆಗೆ ಜಗ್ಗೇಶ್-ಪರಿಮಳ ನಿಲಯ ಎಂದು ಹೆಸರಿಡಲಾಗಿದ್ದು, ಜಗ್ಗೇಶ್ ದಂಪತಿ ಉದ್ಘಾಟಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net