ನಾನು ಕೇವಲ ಒಂದು ಭಾಗಕ್ಕೆ ಸೀಮಿತವಾಗಿಲ್ಲ..ಟಿಕೆಟ್ ಸಿಗುವ ವಿಶ್ವಾಸ ಇದೆ: ಜಗದೀಶ್ ಶೆಟ್ಟರ್

Jagadish Shettar
Published on

ಬೆಂಗಳೂರು: ನಾನು ಕೇವಲ ಒಂದು ಭಾಗಕ್ಕೆ ಸೀಮಿತ ಆಗಿಲ್ಲ. ಕಿತ್ತೂರು ಕರ್ನಾಟಕದ ಎಲ್ಲಾ ಭಾಗಕ್ಕೆ ಶೆಟ್ಟರ್ ಅವಶ್ಯಕತೆ ಇದೆ ಅನ್ನೋದನ್ನು ನಾಯಕರಿಗೆ ಮನವರಿಕೆ ಮಾಡಿಕೊಟ್ಟಿದ್ದೇನೆ. ದೆಹಲಿ ಭೇಟಿಯ ವಿಚಾರವನ್ನ ಯಡಿಯೂರಪ್ಪ ಅವರಿಗೆ ತಿಳಿಸಿದ್ದೇನೆ. ಅವರು ಸಹ ನಿಮಗೆ ಟಿಕೇಟ್ ಸಿಗಲಿದೆ ಎಂದು ಹೇಳಿದ್ದಾರೆಂದು  ಮಾಜಿ ಸಿಎಂ ಜಗದೀಶ್‌ ಶೆಟ್ಟರ್‌ ಹೇಳಿದ್ದಾರೆ.

ಮಾಜಿ ಸಿಎಂ ಜಗದೀಶ್‌ ಶೆಟ್ಟರ್‌ಗೆ ಈ ಬಾರಿ ಬಿಜೆಪಿಯಿಂದ ಟಿಕೆಟ್‌ ಸಿಗಲ್ಲ‌. ಹೀಗಾಗಿ ಈ ವಿಚಾರವಾಗಿ ಅವರು ಬೇಸರಗೊಂಡಿದ್ದರು. ಎರಡನೇ ಪಟ್ಟಿಯಲ್ಲೂ ಶೆಟ್ಟರ್ ಅವರ ಹೆಸರು ಮಿಸ್ ಆಗಿದೆ. ನಿನ್ನೆ ದೆಹಲಿಗೆ ತೆರಳಿದ್ದ ಶೆಟ್ಟರ್ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ.

ಬಿಎಸ್​​ವೈ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಜಗದೀಶ್ ಶೆಟ್ಟರ್ ಅವರು, ಜಗದೀಶ್ ಶೆಟ್ಟರ್ ಕೇವಲ ಒಂದು ಭಾಗಕ್ಕೆ ಸೀಮಿತ ಆಗಿಲ್ಲ. ಕಿತ್ತೂರು ಕರ್ನಾಟಕದ ಎಲ್ಲಾ ಭಾಗಕ್ಕೆ ಶೆಟ್ಟರ್ ಅವಶ್ಯಕತೆ ಇದೆ ಅನ್ನೋದನ್ನು ನಾಯಕರಿಗೆ ಮನವರಿಕೆ ಮಾಡಿಕೊಟ್ಟಿದ್ದೇನೆ. ದೆಹಲಿ ಮೀಟಿಂಗ್ ಬಗ್ಗೆ ಯಡಿಯೂರಪ್ಪ ಅವರಿಗೆ ತಿಳಿಸಬೇಕಿತ್ತು ಹೀಗಾಗಿ ಇಲ್ಲಿಗೆ ಬಂದಿದ್ದೇನೆ ಎಂದು ಹೇಳಿದ್ದಾರೆ.

ನಮ್ಮ ನಾಯಕರು ದೆಹಲಿಗೆ ಕರೆದಿದ್ದರು. ಹೀಗಾಗಿ ನಾನು ದೆಹಲಿಗೆ ಹೋಗಿದ್ದೇನು. ಈ ವೇಳೆ ನಡ್ಡಾ ಅವರನ್ನು ಭೇಟಿ ಮಾಡಿದ್ದೇನೆ. ಅವರಿಗೆ ಎಲ್ಲ ವಿಚಾರವನ್ನ ತಿಳಿಸಿದ್ದೇನೆ. ಅವರಿಂದ ಪಾಸಿಟಿವ್ ರೆಸ್ಪಾನ್ಸ್ ಬಂದಿದೆ. ಎಲ್ಲರ ಜೊತೆ ಮಾತನಾಡಿ ತಿಳಿಸುತ್ತೇನೆ ಎಂದು ಹೇಳಿದ್ದಾರೆ. ಸದ್ಯದ ಪರಿಸ್ಥಿತಿಯನ್ನು ಅವರಿಗೆ ವಿವರಿಸಿದ್ದೇನೆ ಎಂದಿದ್ದಾರೆ.

ಯಡಿಯೂರಪ್ಪ ಅವರು ರಾಷ್ಟ್ರೀಯ ಅಧ್ಯಕ್ಷ, ಅಮಿತ್ ಷಾ ಎಲ್ಲರ ಜತೆ ಮಾತನಾಡಿದ್ದೇನೆ. ನಿಮಗೆ ಟಿಕೇಟ್ ಸಿಗಲಿದೆ ಎಂದು ಹೇಳಿದ್ದಾರೆ. ಎಲ್ಲಾ ಒಳ್ಳೆಯದಾಗುವ ವಿಶ್ವಾಸ ಇದೆ. ಟಿಕೆಟ್ ಸಿಗಲಿದೆ ಎಂಬ ವಿಶ್ವಾಸ ಶೆಟ್ಟರ್​​ ವ್ಯಕ್ತಪಡಿಸಿದ್ದಾರೆ.

-

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net