EVM ಬಗ್ಗೆ ಕಳವಳ ವ್ಯಕ್ತಪಡಿಸಿದ ಜಗನ್​ಮೋಹನ್​ ರೆಡ್ಡಿ.. ಬ್ಯಾಲೆಟ್​ ಮತದಾನಕ್ಕೆ ಒತ್ತಾಯ!

EVM
Published on

ಹೈದರಾಬಾದ್​: ವಿದ್ಯುತ್ಮಾನ ಮತಯಂತ್ರಗಳ(EVM) ಕಾರ್ಯ ನಿರ್ವಹಣೆ ಬಗ್ಗೆ ಅನುಮಾನವಿದ್ದು, ರಾಷ್ಟ್ರದ್ಯಾಂತ ಇದರ ಬಗ್ಗೆ ಕಳವಳವಿದೆ ಎಂದು ಆಂಧ್ರಪ್ರದೇಶದ ಮಾಜಿ ಸಿಎಂ ಮತ್ತು ವೈಎಸ್​ಆರ್​ ಕಾಂಗ್ರೆಸ್​ ಪಕ್ಷದ ಅಧ್ಯಕ್ಷ ವೈ.ಎಸ್​.ಜಗನ್​ ಮೋಹನ್​ ರೆಡ್ಡಿ ಹೇಳಿದ್ದಾರೆ.

75ನೇ ಸಂವಿಧಾನ ದಿನಾಚಾರಣೆಯ ಅಂಗವಾಗಿ ತಮ್ಮ ಎಕ್ಸ್​(ಈ ಹಿಂದಿನ ಟ್ವೀಟ್ಟರ್​) ಖಾತೆಯಲ್ಲಿ ಬರೆದುಕೊಂಡಿರುವ ಅವರು, ಎಲ್ಲರಿಗೂ ಶುಭಾಶಯ ತಿಳಿಸುವುದರ ಮೂಲಕ ಇವಿಎಂ ಮತ ಯಂತ್ರಗಳ ಕಾರ್ಯ ವೈಖರಿ ಬಗ್ಗೆ ಉಲ್ಲೇಖಿಸಿರುವ ಅವರು, ರಾಷ್ಟ್ರ ಮತ್ತು ರಾಜ್ಯಗಳಲ್ಲಿ ನಡೆಯುವ ಚುನಾವಣೆಗಳಲ್ಲಿ ಬ್ಯಾಲೆಟ್​ ಪೆಪರ್​ಗಳನ್ನು ಬಳಸುವಂತೆ ಒತ್ತಾಯಿಸಿದ್ದಾರೆ.

''ನಮ್ಮ ಸಾರ್ವಭೌಮ, ಸಮಾಜವಾದಿ, ಜ್ಯಾತ್ಯತೀತ, ಪ್ರಜಾಸತ್ತಾತ್ಮಾಕ ಗಣರಾಜ್ಯವು ನಮಗೆ ನ್ಯಾಯ, ಸಮಾನತೆ, ಸ್ವಾತಂತ್ರ್ಯ ಮತ್ತು ಭ್ರಾತೃತ್ವವನ್ನು ಖಾತರಿಪಡಿಸುತ್ತದೆ. ನಾವು 75ನೇ ಸಂವಿಧಾನ ದಿನವನ್ನು ಆಚರಿಸುತ್ತಿರುವಾಗ, ಆದರ ಮಹತ್ವವನ್ನು ಪ್ರತಿಬಿಂಬಿಸೋಣ ಮತ್ತು ಅದರ ಮಾರ್ಗದರ್ಶಿ ತತ್ವಗಳಿಗೆ ನಮ್ಮ ಅಚಲ ಬದ್ಧತೆ ಪುನರುಚ್ಚರಿಸೋಣ'' ಎಂದು ಬರೆದುಕೊಂಡಿದ್ದಾರೆ.

ಮುಂದುವರೆದು, '' ಪ್ರಜಾಪ್ರಭುತ್ವದ ಮೂಲಧಾರವೆಂದರೆ ಸಾರ್ವಜನಿಕ ಪ್ರತಿನಿಧಿಗಳನ್ನು ಆಯ್ಕೆ ಮಾಡುವುದು. ಇವಿಎಂ ಮತ ಯಂತ್ರಗಳ ಕಾರ್ಯನಿರ್ವಹಣೆ ಬಗ್ಗೆ ರಾಷ್ಟ್ರದ್ಯಂತ ಇವಿಎಂಗಳ ಸತ್ಯಾಸತ್ಯೆಯ ಪ್ರಶ್ನೆ ಎದ್ದಿದೆ. ಮತ್ತು ಪ್ರಪಂಚಾದದ್ಯಾಂತ ಬಹುಪಾಲು ದೇಶಗಳಲ್ಲಿ ಆಚರಣೆಯಲ್ಲಿರುವಂತೆ ಬ್ಯಾಲೆಟ್​ ಪೇಪರ್​ ಮತದಾನಕ್ಕೆ ನಾವು ಏಕೆ ಮುಂದುವರೆಯಬಾರದು'' ಎಂದು ವೈ.ಎಸ್​. ಜಗನ್​ ಪ್ರಶ್ನಿಸಿದ್ದಾರೆ.

ಪ್ರಜಾಪ್ರಭುತ್ವ ಪ್ರಚಲಿತವಾಗಿರುವುದಲ್ಲದೆ ಅದು ಪ್ರವರ್ಧಮಾನಕ್ಕೆ ಬರಬೇಕು. ವಾಕ್​ ಸ್ವತಂತ್ರ್ಯವನ್ನು ಹತ್ತಿಕ್ಕುವ ಪ್ರಯತ್ನಗಳು ಆಗುತ್ತಿವೆ ಎಂದು ಹೇಳಿದ್ದಾರೆ, (ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net