Muda Scam| ಸಿಎಂ ವಿರುದ್ಧದ ಅರ್ಜಿ ವಿಚಾರಣೆ ಡಿ.10ಕ್ಕೆ ಮುಂದೂಡಿದ ಹೈಕೋರ್ಟ್

cm siddaramaiah
Published on

ಬೆಂಗಳೂರು: ಮುಡಾ ಬದಲಿ ನಿವೇಶನ ಹಂಚಿಕೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಕ್ಕೆ (Muda Scam) ಸಂಬಂಧಿಸಿದಂತೆ ಸಿಬಿಐ ತನಿಖೆಗೆ ಕೋರಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆಯನ್ನು ಹೈಕೋರ್ಟ್​ ಡಿಸೆಂಬರ್​ 10ಕ್ಕೆ ಮುಂದೂಡಿದೆ.

ಸಿಬಿಐ ತನಿಖೆಗೆ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠವು, ವಾದ-ಪ್ರತಿವಾದವನ್ನು ಆಲಿಸಿದ ಬಳಿಕ ಡಿಸೆಂಬರ್​ 10ರಂದು ಮುಂದಿನ ವಿಚಾರಣೆಯಮನ್ನು ಡಿಸೆಂಬರ್​ 10 ನಡೆಸುವುದಾಗಿ ಹೇಳಿದ್ದಾರೆ.

ಮುಡಾ ಹಗರಣದ ತನಿಖಾ ಪ್ರಗತಿ ವರದಿಯನ್ನು ಇಂದು (ನ.26) ಸಲ್ಲಿಸುವಂತೆ ಹೈಕೋರ್ಟ್ ಲೋಕಾಯುಕ್ತರಿಗೆ ಸೂಚನೆ ನೀಡಿತ್ತು. ಈ ಆದೇಶವನ್ನೂ ಪ್ರಶ್ನಿಸಿ ಜಮೀನು ಮಾಲೀಕ ದೇವರಾಜು ಅರ್ಜಿ ಸಲ್ಲಿಸಿದ್ದಾರೆ. ಹಾಗೇ, ಹಗರಣ ತನಿಖೆಗೆ ರಾಜ್ಯಪಾಲರು ನೀಡಿದ್ದ ಅನುಮತಿಯನ್ನು ಹೈಕೋರ್ಟ್​ ಎತ್ತಿ ಹಿಡಿದಿತ್ತು. ಹೈಕೋರ್ಟ್ ಈ ತೀರ್ಪನ್ನೂ ಪ್ರಶ್ನಿಸಿ ದೇವರಾಜು ಅರ್ಜಿ ಸಲ್ಲಿಸಿದ್ದಾರೆ. ಈ ಎರಡೂ ಅರ್ಜಿ ವಿಚಾರಣೆಯನ್ನು ಡಿಸೆಂಬರ್​ 5 ರಂದು ನಡೆಸುವುದಾಗಿ ಹೈಕೋರ್ಟ್ ವಿಭಾಗೀಯ ಪೀಠ ಈ ವೇಳೆ​​ ಹೇಳಿದೆ.

Siddaramaiah Gehlot

ಲೋಕಾಯುಕ್ತ ಪೊಲೀಸರು ತನಿಖಾ ವರದಿಯನ್ನು ಹೈಕೋರ್ಟ್​ಗೆ ಡಿಸೆಂಬರ್​ 10ರಂದು ವರದಿ ಸಲ್ಲಿಸಲಿದ್ದಾರೆ. ಇನ್ನು, ಮುಡಾ ಹರಗಣದ ತನಿಖೆಯನ್ನು ಸಿಬಿಐಗೆ ನೀಡುವಂತೆ ದೂರುದಾರ ಸ್ನೇಹಮಯಿ ಕೃಷ್ಣ ಅವರು ಸಲ್ಲಿಸಿದ್ದ ರಿಟ್​ ಅರ್ಜಿ ವಿಚಾರಣೆಯನ್ನು ಹೈಕೋರ್ಟ್​ ಡಿಸೆಂಬರ್​ 10ರಂದು ನಡೆಸಲಿದೆ.

ಪ್ರಕರಣದ ಹಿನ್ನೆಲೆ 

ಲೇಔಟ್ ನಿರ್ಮಾಣಕ್ಕಾಗಿ ಕೆಸರೆ ಗ್ರಾಮದ 462ನೇ ಸರ್ವೇ ನಂಬರ್​ನಲ್ಲಿರುವ 3 ಎಕರೆ 16 ಗುಂಟೆ ಜಾಗವನ್ನು ಮುಡಾ ತನ್ನ ಸುಪರ್ದಿಗೆ ತಗೆದುಕೊಂಡಿತ್ತು. ಆದರೆ, ಸ್ವಾಧೀನಪಡಿಸಿಕೊಳ್ಳುವಾಗ ತಮಗೆ ಮಾಹಿತಿ ನೀಡಿಲ್ಲ. ಹಾಗಾಗಿ, ತಮಗೆ ಪರಿಹಾರ ನೀಡಬೇಕೆಂದು ಅರ್ಜಿ ಸಲ್ಲಿಸಿದ್ದ ಪಾರ್ವತಿ ಸಿದ್ದರಾಮಯ್ಯನವರು ಮುಡಾ ಕಡೆಯಿಂದ ಪರಿಹಾರದ ರೂಪವಾಗಿ 2021ರಲ್ಲಿ ಮೈಸೂರಿನ ವಿಜಯನಗರದ ಮೂರನೇ ಹಂತದಲ್ಲಿ ಬೆಲೆಬಾಳುವ 14 ಸೈಟುಗಳನ್ನು ಖರೀದಿಸಿದ್ದರು. ಅವರ ಹೆಸರಿಗೆ ಆ ಸೈಟುಗಳ ಖಾತೆಯನ್ನೂ ಮಾಡಿಸಿಕೊಡಲಾಗಿತ್ತು.

ಪರಿಹಾರ ರೂಪವಾಗಿ ಅವರಿಗೆ ಸೈಟುಗಳನ್ನು ಕೊಟ್ಟು ಅವರಿಗೆ ಖಾತೆಯನ್ನೂ ಮಾಡಿಸಿರುವ ಮುಡಾ, ಇತ್ತ, ಬಡಾವಣೆಗಾಗಿ ತಾನು ವಶಪಡಿಸಿಕೊಂಡಿದ್ದ ಭೂಮಿಯ ಮಾಲೀಕತ್ವವನ್ನು ತಿದ್ದುಪಡಿ ಮಾಡಿಯೇ ಇಲ್ಲ. ಅದರಿಂದಾಗಿ, ವಶಪಡಿಸಿಕೊಂಡು ಬಡಾವಣೆ ನಿರ್ಮಿಸಲಾಗಿರುವ ಭೂಮಿಯ ಮಾಲೀಕತ್ವ ಇನ್ನೂ ಪಾರ್ವತಿಯವರ ಹೆಸರಿನಲ್ಲೇ ಇದೆ. ಕಾರ್ಡ್ಸ್ ಆಫ್ ರೈಟ್ಸ್‌ನಲ್ಲಿ, ಆರ್​ಟಿಸಿ ದಾಖಲೆಗಳಲ್ಲಿ ಈಗಲೂ ಪಾರ್ವತಿಯವರ ಹೆಸರಿದ್ದು, ಈ ವಿಚಾರ ರಾಜ್ಯ ರಾಜಕಾರಣದಲ್ಲಿ ದೊಡ್ಡ ಗದ್ದಲವನ್ನೇ ಎಬ್ಬಿಸಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net