

ಬೆಂಗಳೂರು: ಶುಕ್ರವಾರ ಕಲಾಪ ಆರಂಭವಾಗುತ್ತಿದ್ದಂತೆ ಹಾಸ್ಯಮಯ ಪ್ರಸಂಗವೊಂದು ನಡೆಯಿತು. ಕಾನೂನು ಸಚಿವ ಮಾಧುಸ್ವಾಮಿ ಪ್ರತಿಪಕ್ಷ ನಾಯಕರನ್ನು ಉದ್ದೇಶಿಸಿ ವಿಧೇಯಕದ ಬಗ್ಗೆ ಹೇಳಿದರು.
ಆದರೆ ಸಿದ್ದರಾಮಯ್ಯ ತಮ್ಮ ಪಾಡಿಗೆ ತಾವಿದ್ದರು. ಇದನ್ನು ಗಮನಿಸಿದ ಸಚಿವರು, ಇಷ್ಟವಾಗಿದ್ದು ನಿಧಾನವಾಗಿ ಹೇಳಿದರೂ ಕೇಳುತ್ತೆ. ಇಷ್ಟವಾಗದ್ದು ಜೋರಾಗಿ ಹೇಳಿದರೂ ಕೇಳುವುದಿಲ್ಲ, ಅಲ್ಲವೇ ಎಂದು ಸಿದ್ದರಾಮಯ್ಯರ ಕಾಲೆಳೆದರು. ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ನನಗೆ ಹಾಗಿಲ್ಲ, ನಿಮಗೆ ಈ ರೀತಿ ಅಭ್ಯಾಸ ಇದೆಯೇ ಎಂದು ನವಿರಾಗಿಯೇ ಕುಟುಕಿದರು.
ಮಧ್ಯೆ ಪ್ರವೇಶಿಸಿದ ಸಚಿವ ಸಿ.ಟಿ. ರವಿ, ಇಷ್ಟವಾದ ವಿಷಯ ಪಿಸುಮಾತಲ್ಲಿ ಹೇಳಿದರೂ ಸಿದ್ದರಾಮಯ್ಯರಿಗೆ ಕೇಳಿಸುತ್ತದೆ ಎಂದರು. ನೀವು ಬಹಳ ದೊಡ್ಡ ವಿರೋಧಿ. ರಾಜಕೀಯವಾಗಿ, ವೈಯಕ್ತಿಕವಾಗಿ ಅಲ್ಲ. ನಿನ್ನ ಮಾತನ್ನೂ ಕೇಳಿಸಿಕೊಳ್ಳುವೆ ಎಂದು ಸಿದ್ದರಾಮಯ್ಯರವಿ ಕುರಿತು ಹೇಳಿದಾಗ ಕಲಾಪ ನಗೆಗಡಲಲ್ಲಿ ತೇಲಿತು.