ನಿಮ್ಮ ಶ್ರೀರಾಮುಲು ಮಾತಾಡ್ತಿದ್ದೀನಿ...

page 7 2
Published on

ನಮಸ್ಕಾರ್ರೀ.., ನಿಮ್ಮ ಶ್ರೀರಾಮುಲು ಮಾತನಾಡ್ತಿದ್ದೀನಿ.., ಹೇಳ್ರಿ...

ಇದು ಅಪ್ಪಟ ಶ್ರೀರಾಮುಲು ಸ್ಟೈಲ್.

ವಿಜಯವಾಣಿ ಫೋನ್ -ಇನ್ ಕಾರ್ಯಕ್ರಮದಲ್ಲಿ ಜನರ ಪ್ರಶ್ನೆಗಳಿಗೆ ಉತ್ತರಿಸಲು ಫೋನ್ ರಿಸೀವ್ ಮಾಡುತ್ತಿದ್ದ ಆರೋಗ್ಯ ಸಚಿವ ಶ್ರೀರಾಮುಲು, ಪ್ರತಿಯೊಬ್ಬರ ಪ್ರಶ್ನೆಗಳಿಗೂ ತಾಳ್ಮೆಯಿಂದಲೇ ಉತ್ತರಿಸಿದರು. ಮಧ್ಯಾಹ್ನ 3ಗಂಟೆಗೆ ಪ್ರಾರಂಭವಾದ ಕರೆಗಳಿಗೆ ಒಂದೂವರೆ ಗಂಟೆ ಕಾಲ ಬಿಡುವಿಲ್ಲದೆ ಉತ್ತರಿಸಿದರು. ರಾಜ್ಯದ ವಿವಿಧೆಡೆಯಿಂದ ಬಂದ ಕರೆಗಳಲ್ಲಿ ಸಚಿವರ ಕಾರ್ಯ ವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದ ಅಭಿಮಾನಿಗಳ ದಂಡೇ ಇತ್ತು. ಕರೊನಾದಿಂದ ಹಿಡಿದು ಕುಗ್ರಾಮದ ಆಸ್ಪತ್ರೆ ಸಮಸ್ಯೆ ತನಕ ಬಂದ ಪ್ರಶ್ನೆಗಳಿಗೆ ಉತ್ತರಿಸಿದ ರಾಮುಲು ಅವರಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆೆಯನ್ನು ಸಮರ್ಥವಾಗಿ ನಿಭಾಯಿಸುತ್ತಿರುವ ಅಭಿಮಾನದ ಜತೆಗೆ ಆತ್ಮತೃಪ್ತಿಯೂ ಬೆಸೆದುಕೊಂಡಿತ್ತು.

ಆರೋಗ್ಯ ಇಲಾಖೆಯೊಳಗೆ ವೈದ್ಯಕೀಯವೂ ಇರಲಿ: ಆರೋಗ್ಯ ಇಲಾಖೆ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಗಳೆರಡೂ ಒಂದೇ ಆಗಬೇಕಿದೆ. ಬಹಳ ಹಿಂದೆ ಎರಡೂ ಒಟ್ಟಿಗೆ ಇದ್ದವು. ಈಗ ಪ್ರತ್ಯೇಕ ಇರುವ ಕಾರಣ ಪ್ರಮುಖ ತೀರ್ಮಾನ ತೆಗೆದುಕೊಳ್ಳುವುದು ಕಷ್ಟವಾಗುತ್ತಿದೆ. ವೈದ್ಯಕೀಯ ಶಿಕ್ಷಣ ಇಲಾಖೆ ಸಿಬ್ಬಂದಿಗೆ ಹೆಚ್ಚು ವೇತನ, ಆರೋಗ್ಯ ಇಲಾಖೆಯವರಿಗೆ ಕಡಿಮೆ ವೇತನದ ತಾರತಮ್ಯವಿದ್ದು, ಇದನ್ನು ಹೋಗಲಾಡಿಸಲು ಕ್ರಮ ಕೈಗೊಳ್ಳಲಾಗಿದೆ. ಈ ಇಲಾಖೆ ಒಟ್ಟಾಗಿರಲಿ ಎಂಬುದು ನನ್ನ ಅಭಿಪ್ರಾಯವಾಗಿದ್ದು, ಈ ಬಗ್ಗೆ ಸಿಎಂ ಜತೆಗೆ ರ್ಚಚಿಸಲಾಗುವುದು ಎಂದು ಶ್ರೀರಾಮುಲು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net