ಅಟ್ರಾಸಿಟಿ ತಡೆ ಕಾಯ್ದೆ ತಿದ್ದುಪಡಿ ಕ್ರಮದ ಬಗ್ಗೆ ಸುಪ್ರೀಂ ಕೋರ್ಟ್​ ತೀರ್ಪಿಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರತಿಕ್ರಿಯಿಸಿದ್ದು ಹೀಗೆ..

Rahul Gandhi 8 Jan 20
Published on

ನವದೆಹಲಿ: ಎಸ್​ಸಿ/ಎಸ್​ಟಿ ಅಟ್ರಾಸಿಟಿ ತಡೆ ಕಾಯ್ದೆ ತಿದ್ದುಪಡಿಯ ಕೇಂದ್ರ ಸರ್ಕಾರದ ಕ್ರಮವನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದ ಬೆನ್ನಲ್ಲೇ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರತಿಕ್ರಿಯಿಸಿದ್ದು ಹೀಗೆ..

ಕೇಂದ್ರ ಸರ್ಕಾರದ ಎಸ್​ಸಿ/ಎಸ್​ಟಿ (ಪ್ರಿವೆನ್ಶನ್ ಆಫ್ ಅಟ್ರಾಸಿಟೀಸ್​) ಅಮೆಂಡಮೆಂಟ್ ಆ್ಯಕ್ಟ್​ ಆಫ್ 2018 ಅನ್ನು ಸುಪ್ರೀಂ ಕೋರ್ಟ್​ ನ್ಯಾಯಪೀಠ ಸೋಮವಾರ ಎತ್ತಿ ಹಿಡಿದಿದೆ. ಕೇಂದ್ರ ಸರ್ಕಾರದ ಕ್ರಮ ಸರಿಯಾಗಿದೆ ಎಂದ ನ್ಯಾಯಪೀಠ ಕೆಲವೊಂದು ಸಲಹೆಗಳನ್ನು ನೀಡಿದೆ. ಇದರೊಂದಿಗೆ ಸುಪ್ರೀಂ ಕೋರ್ಟ್​ನ ಹಳೆಯ ತೀರ್ಪಿನಿಂದ ಬಿಗಿಯಾಗಿದ್ದ ಅಟ್ರಾಸಿಟೀಸ್ ಕಾಯ್ದೆ ಈಗ ಸಡಿಲವಾಗಿದ್ದು, ಏಕಾಕಿಯಾಗಿ ಯಾವ ಅಧಿಕಾರಿಯನ್ನೂ ಬಂಧಿಸುವಂತಿಲ್ಲ. ಬದಲಾಗಿ ಆರೋಪ ಎದುರಾದಾಗ ಈ ಬಗ್ಗೆ ವಿಚಾರಣೆ ನಡೆಸಿ ಸಾಕ್ಷ್ಯಗಳ ಆಧಾರದ ಮೇಲೆ ಬಂಧನಕ್ಕೆ ಅನುಮತಿ ಪಡೆದು ಮುಂದುವರಿಯಬಹುದಾಗಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ, ಮೀಸಲಾತಿಯನ್ನು ಅಳಿಸಿ ಹಾಕುವುದು ಆರೆಸ್ಸೆಸ್​ ಮತ್ತು ಬಿಜೆಪಿಯವರ ವಂಶವಾಹಿಯಲ್ಲೇ ಅಡಗಿದೆ. ಮೋದೀಜಿ ಅಥವಾ ಮೋಹನ್ ಭಾಗವತ್ ಜೀ ಅವರು ಎಷ್ಟೇ ಕನಸು ಕಂಡರೂ ನಾವು ಮೀಸಲಾತಿ ಇಲ್ಲದಂತೆ ಮಾಡಲು ಯಾವತ್ತಿಗೂ ಬಿಡುವುದಿಲ್ಲ ಎಂದು ಎಚ್ಚರಿಸಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net