ಸ್ತ್ರೀ ಶಿಕ್ಷಣ ಕಡ್ಡಾಯ ಗೊಳಿಸಿದವರು ತಾತಯ್ಯ

20
Published on

ಮೈಸೂರು: ಶತಮಾನದ ಹಿಂದೆಯೇ ಮಹಿಳೆಯರಿಗೆ ಕಡ್ಡಾಯ ಶಿಕ್ಷಣ ಸಿಗಬೇಕೆಂದು ಮೈಸೂರು ಸಂಸ್ಥಾನದಲ್ಲಿ ಮಹಿಳಾ ಶಿಕ್ಷಣ ಸಂಸ್ಥೆಗಳ ಸ್ಥಾಪನೆ ಯೋಜನೆ ರೂಪಿಸಿದವರು ತಾತಯ್ಯನವರು ಎಂದು ಶಾಸಕ ಟಿ.ಎಸ್.ಶ್ರೀವತ್ಸ ಸ್ಮರಿಸಿದರು.

ನಗರಪಾಲಿಕೆಯಿಂದ ಅನಾಥಾಲಯ ಹಳೇ ವಿದ್ಯಾರ್ಥಿಗಳ ಸಂಘದ ಸಂಯುಕ್ತಾಶ್ರಯದಲ್ಲಿ ಗುರುವಾರ ನಗರದ ಬಸ್ ನಿಲ್ದಾಣದ ಮುಂಭಾಗದ ತಾತಯ್ಯ ಉದ್ಯಾನವನದಲ್ಲಿ ಆಯೋಜಿಸಿದ್ದ ತಾತಯ್ಯ ಅವರ 180 ನೇ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಮಾಜದಲ್ಲಿ ಸಮಾನತೆ ಮಹಿಳಾ ಪ್ರಾತಿನಿಧ್ಯ ಮೌಲ್ಯಯುತವಾದ ವಾತಾವರಣ ಹೆಚ್ಚಾಗಲು ಶೈಕ್ಷಣಿಕ ಸಾಂಸ್ಕೃತಿಕ ಯೋಜನೆಯ ಮುನ್ನುಡಿ ಬರೆದವರು ಮಗ್ಗೆ ವೆಂಕಟಕೃಷ್ಣಯ್ಯ ತಾತಯ್ಯ. ಮಹಾತ್ಮ ಗಾಂಧೀಜಿ ಅವರು ಮೈಸೂರಿಗೆ ಬಂದಾಗ ತಾತಯ್ಯ ಅವರನ್ನು ದಿ ಓಲ್ಡ್ ಮ್ಯಾನ್ ಆಫ್ ಮೈಸೂರ್ ಎಂಪೈರ್ ವೃದ್ಧ ಪಿತಾಮಹ ಎಂದು ಬಣ್ಣಿಸಿದ್ದರು ಎಂದು ಸ್ಮರಿಸಿದರು.

ಹಳೇ ವಿದ್ಯಾರ್ಥಿಗಳ ಸಂಘದ ಕಾರ್ಯದರ್ಶಿ ಸುಂದರೇಶನ್, ಮುಖಂಡರಾದ ಕೆ. ರಾಘುರಾಂ ವಾಜಪೇಯಿ, ಜೋಗಿ ಮಂಜು ಅಜಯ್ ಶಾಸ್ತ್ರಿ, ವಿಕ್ರಂ ಅಯ್ಯಂಗಾರ್, ಹೇಮಲತಾ, ಸೌಭಾಗ್ಯಮೂರ್ತಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net