

ನವದೆಹಲಿ: ಸುಮಾರು ಮೂರು ಲಕ್ಷದಷ್ಟು ಉದ್ಯೋಗಿಗಳನ್ನು ಹೊಂದಿರುವ ವಿಶ್ವದ ಅತಿದೊಡ್ಡ ಐಟಿ ಕಂಪನಿ ಕಾಗ್ನಿಜೆಂಟ್ ಟೆಕ್ನಾಲಜಿ ಸಲ್ಯೂಷನ್ಸ್ ಕಾರ್ಪೊರೇಷನ್ ಹ್ಯಾಕರ್‌ಗಳ ಕೈಗೆ ಸಿಲುಕಿ ನಲುಗುತ್ತಿದೆಯೆ?
ಹೌದು ಎನ್ನುತ್ತಿದೆ ಕಂಪನಿ. ಅನಾಮಧೇಯ ಹ್ಯಾಕರ್‌ಗಳು ತಮ್ಮ ಕಂಪನಿಯ ಮಾಹಿತಿಗಳನ್ನು ಕದ್ದಿದ್ದು, ಅವರು ಬೇಡಿಕೆ ಒಡ್ಡಿದಷ್ಟು ಹಣವನ್ನು ನೀಡದೇ ಹೋದಲ್ಲಿ, ಕಂಪನಿಯ ಮಾಹಿತಿಗಳನ್ನು ಸೋರಿಕೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಕಂಪನಿ ಹೇಳಿಕೊಂಡಿದೆ. ‘ಮೇಜ್ ರಾನ್ಸಮ್‌ವೇರ್ ಗ್ರೂಪ್’ ಎನ್ನುವುದು ದುರುದ್ದೇಶಪೂರ್ವಕ ಪ್ರೋಗ್ರಾಮಿಂಗ್ ಬಳಸಿ ತಮ್ಮ ಕಂಪನಿಯ ಮಾಹಿತಿಗಳನ್ನು ಕದಿಯಲಾಗಿದೆ. ಮೇಜ್ ರಾನ್ಸಮ್‌ವೇರ್ ಎನ್ನುವುದು ಯಾವುದೇ ಒಂದು ಕಂಪನಿಯ ಫೈಲ್‌ಗಳ ಮೇಲೆ ಹಿಡಿತ ಸಾಧಿಸಲು ಹ್ಯಾಕರ್‌ಗಳು ಬಳಸುವ ತಂತ್ರಾಂಶ ಆಗಿದೆ. ಇದರ ಆಧಾರದ ಮೇಲೆ ತಮ್ಮೆಲ್ಲ ಮಾಹಿತಿಗಳನ್ನು ಕದಿಯಲಾಗಿದ್ದು,. ಅದನ್ನು ವಾಪಸ್ ಕೊಡಲು ಭಾರಿ ಮೊತ್ತದ ಬೇಡಿಕೆ ಒಡ್ಡಲಾಗುತ್ತಿದೆ ಎಂದು ಕಂಪನಿ ಹೇಳಿಕೊಂಡಿದೆ.
.ನಮ್ಮ ಕಂಪನಿಯ ಆಂತರಿಕ ಮತ್ತು ಭದ್ರತಾ ವ್ಯವಸ್ಥೆಗಳನ್ನು ಒಳಗೊಂಡಿರುವ ಮಾಹಿತಿಗಳನ್ನು ಹ್ಯಾಕ್ ಮಾಡಲಾಗಿದೆ. ಇದರಿಂದ ನಮ್ಮ ಗ್ರಾಹಕರಿಗೆ ಬಹಳ ಸಮಸ್ಯೆ ಆಗುತ್ತಿದೆ. "ನಮ್ಮ ಆಂತರಿಕ ಭದ್ರತಾ ತಂಡಗಳು, ಪ್ರಮುಖ ಸೈಬರ್ ರಕ್ಷಣಾ ಸಂಸ್ಥೆಗಳು ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿವೆ. ಆದರೆ ಸದ್ಯದ ಮಟ್ಟಿಗೆ ಇದರಿಂದ ನಮ್ಮ ಗ್ರಾಹಕರಿಗೆ ಭಾರಿ ಸಮಸ್ಯೆ ಉಂಟಾಗಿದ್ದು, ನಾವು ಸದಾ ಗ್ರಾಹಕರ ಸಂಪರ್ಕದಲ್ಲಿ ಇರುವುವುದಾಗಿ ಕಂಪನಿ ಹೇಳಿದೆ.
‘ಮೇಜ್‌ಗೆ ಸಂಪರ್ಕ ಹೊಂದಿರುವ ಹ್ಯಾಕರ್‌ಗಳು ಕಾಗ್ನಿಜೆಂಟ್ ಮೇಲಿನ ದಾಳಿಯಲ್ಲಿ ಭಾಗಿಯಾಗಿರುವುದನ್ನು ನಿರಾಕರಿಸಿದ್ದಾರೆ ಎಂದು ಕಂಪ್ಯೂಟರ್ ಸೆಕ್ಯುರಿಟಿ ಬ್ಲಾಗ್ ಬ್ಲೀಪಿಂಗ್ ಕಂಪ್ಯೂಟರ್ ಹೇಳಿದೆ. ಆದರೂ ’ಎಮಿಸಾಫ್ಟ್‘ನ ವಿಶ್ಲೇಷಕ ಬ್ರೆಟ್ ಕ್ಯಾಲೋವ್ ಅವರ ಪ್ರಕಾರ ಈ ಹೇಳಿಕೆ ಸಂಪೂರ್ಣ ನಂಬಲಾಗದು.
ವಿವಿಧ ಮಾಧ್ಯಮಗಳ ವರದಿಗಳ ಪ್ರಕಾರ, ‘ಮೇಜ್ ರಾನ್ಸಮ್‌ವೇರ್ ಗ್ರೂಪ್’ನ ಲಿಸ್ಟ್‌ನಲ್ಲಿ ಪೆನ್ಸಕೋಲಾ ನಗರ, ಸೈಬರ್ ಸೆಕ್ಯುರಿಟಿ ವಿಮಾ ಪೂರೈಕೆದಾರ ಚುಬ್ ಲಿಮಿಟೆಡ್ ಮತ್ತು ಕೆನಡಾದ ನಿರ್ಮಾಣ ಕಂಪನಿ ಬರ್ಡ್ ಕನ್‌ಸ್ಟ್ರಕ್ಷನ್ ಇಂಕ್ ಕಂಪನಿಗಳೂ ಸೇರಿವೆ. ಅಂದರೆ ಈ ಕಂಪನಿಗಳ ಮಾಹಿತಿಗಳನ್ನೂ ಕದಿಯಾಗಿದೆ. ಈ ಮೂರು ಕಂಪನಿಗಳ ಫೈಲ್‌ಗಳನ್ನು ತನ್ನ ವೆಬ್‌ಸೈಟ್‌ನಲ್ಲಿ ಪೋಸ್ಟ್ ಮಾಡುವುದಾಗಿ ಅದು ಹೇಳಿಕೊಂಡಿದೆ.
ಈ ಬೆದರಿಕೆ ಬರುವ ಸಾಧ್ಯತೆಗಳ ಕುರಿತು ಜನವರಿಯಲ್ಲಿ , ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ ಎಚ್ಚರಿಕೆ ನೀಡಿತ್ತು ಎನ್ನಲಾಗಿದೆ. ಸೈಬರ್ ಸೆಕ್ಯುರಿಟಿ ಸಂಸ್ಥೆ ಮ್ಯಾಕ್‌ಫೀ ಪ್ರಕಾರ, ಈ ಕಂಪನಿಗಳು ಹ್ಯಾಕರಗಳು ಬೇಡಿಕೆ ಒಡ್ಡಿರುವ ಮೊತ್ತವನ್ನು ನೀಡಲು ನಿರಾಕರಿಸಿದರೆ ಅವರು, ಅಂತರ್ಜಾಲದಲ್ಲಿ ಮಾಹಿತಿಯನ್ನು ಬಿಡುಗಡೆ ಮಾಡುವ ಸಾಧ್ಯತೆಗಳಿವೆ.( ಏಜೆನ್ಸೀಸ್)