ನಟ ಸೋನು ಸೂದ್ ಮನೆಗೆ ಐಟಿ ಅಧಿಕಾರಿಗಳು!

sonusood
Published on

ಮುಂಬೈ: ಕರೊನಾ ಸಮಯದಲ್ಲಿ ಸಾವಿರಾರು ಜನರಿಗೆ ಸಹಾಯ ಮಾಡಿ ಅಭಿಮಾನ ಗಳಿಸಿರುವ ನಟ ಸೋನು ಸೂದ್​ ಅವರ ಆದಾಯ ಮೂಲ ಮತ್ತು ಖರ್ಚಿನ ವೈಖರಿ ಬಗ್ಗೆ ಇದೀಗ ಐಟಿ ಅಧಿಕಾರಿಗಳ ದೃಷ್ಟಿ ಬಿದ್ದಿದೆ. ಸೋನು ಸೂದ್​ ಅವರ ಮುಂಬೈನ ಕಾಸಾ ಬ್ಲಾಂಕಾ ನಿವಾಸಕ್ಕೆ ಭೇಟಿ ನೀಡುವುದರೊಂದಿಗೆ, ಅವರಿಗೆ ಸಂಬಂಧಿಸಿದ ಇತರ 6 ಸ್ಥಳಗಳನ್ನು ಆದಾಯ ತೆರಿಗೆ ಇಲಾಖೆಯ ತಂಡ ಸರ್ವೇ ಮಾಡುತ್ತಿದೆ ಎನ್ನಲಾಗಿದೆ.

ಐಟಿ ಅಧಿಕಾರಿಗಳ ಈ ಭೇಟಿಯು ಐಟಿ ದಾಳಿಯಲ್ಲ. ಬದಲಿಗೆ ಸೂದ್​ ಅವರ ಆದಾಯಗಳ ಮೂಲಗಳ ಬಗ್ಗೆ ಮತ್ತು ಅವರು ಅದನ್ನು ಎಲ್ಲೆಲ್ಲಿ ವ್ಯಯಿಸುತ್ತಿದ್ದಾರೆ ಎಂಬ ಬಗ್ಗೆ ಮಾಹಿತಿ ಕಲೆ ಹಾಕುವ ಪ್ರಯತ್ನವಷ್ಟೇ ಆಗಿದೆ ಎಂದು ಮೂಲಗಳು ತಿಳಿಸಿವೆ. ಕರೊನಾ ಸಮಯದಲ್ಲಿ ಹಲವಾರು ಜನರಿಗೆ ಧನಸಹಾಯ ಮಾಡಿರುವ ಸೂದ್​, ಎಲ್ಲೆಲ್ಲಿಂದ ಹಣ ಪಡೆದರು ಮತ್ತು ಹೇಗೆಲ್ಲಾ ಅದನ್ನು ಖರ್ಚು ಮಾಡಿದರು ಎಂಬುದರ ಸಮೀಕ್ಷೆ ನಡೆಯುತ್ತಿದೆ ಎನ್ನಲಾಗಿದೆ.

ಸೋನು ಸೂದ್​ ಅವರು ದೆಹಲಿ ಸರ್ಕಾರದ ಶಾಲಾ ಮಕ್ಕಳ ಪ್ರೋತ್ಸಾಹ ಯೋಜನೆಯ ಬ್ರ್ಯಾಂಡ್​ ಅಂಬಾಸಿಡಾರ್​ ಆದ ಬೆನ್ನಲ್ಲೇ ಈ ಬೆಳವಣಿಗೆಯಾಗಿರುವುದು ಕುತೂಹಲ ಮೂಡಿಸಿದೆ. ಇತ್ತೀಚೆಗೆ ದೆಹಲಿ ಸಿಎಂ ಹಾಗೂ ಆಮ್​ ಆದ್ಮಿ ಪಾರ್ಟಿಯ ಮುಖ್ಯಸ್ಥ ಅರವಿಂದ್​ ಕೇಜ್ರಿವಾಲ್​ ಅವರನ್ನು ಭೇಟಿ ಮಾಡಿದ್ದ ಸೋನು ಸೂದ್​, ರಾಜಕೀಯ ಕ್ಷೇತ್ರಕ್ಕೆ ಕಾಲಿಡಬಹುದೆಂಬ ಊಹೆಗಳೂ ಹರಿದಾಡುತ್ತಿವೆ ಎನ್ನಲಾಗಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net