ಶಿಕ್ಷಕರ ಮೇಲಿದೆ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಹೊಣೆ

06bhr 2
ಬಾಳೆಹೊನ್ನೂರಲ್ಲಿ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆಯಲ್ಲಿ ಶಿಕ್ಷಕ ಕೆ.ಎಂ.ರಾಘವೇಂದ್ರ, ಸಿ.ವಿ.ಸುನೀಲ್, ಎಚ್.ಪಿ.ಕಾರ್ತಿಕ್, ದುರ್ಗಾಚರಣ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.ಅಜಿತ್,ರಚನ್, ನಿಖಿಲ್, ಲಿಖಿತ್ ಇದ್ದರು.
Published on

ಬಾಳೆಹೊನ್ನೂರು: ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಹೊಣೆ ಶಿಕ್ಷಕರ ಮೇಲಿದೆ ಎಂದು ಜೇಸಿಐ ಅಧ್ಯಕ್ಷ ಬಿ.ಎಸ್.ಅಜಿತ್ ಹೇಳಿದರು.
ಜೇಸಿಐನಿಂದ ಮಂಗಳವಾರ ಆಯೋಜಿಸಿದ್ದ ಗುರುವಂದನಾ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ವಿದ್ಯಾರ್ಥಿಗಳ ಏಳ್ಗೆಯ ಮಹತ್ತರವಾದ ಜವಾಬ್ದಾರಿ ಶಿಕ್ಷಕರ ಮೇಲಿದೆ. ಆಧುನಿಕ ಶಿಕ್ಷಣ ಪದ್ಧತಿಗೆ ಅನುಸಾರವಾಗಿ ವಿದ್ಯಾರ್ಥಿಗಳಿಗೆ ವಿನೂತನ ಮಾದರಿ ಶಿಕ್ಷಣ ನೀಡಲು ಶಿಕ್ಷಕರು ಗಮನಹರಿಸಬೇಕು ಎಂದರು.
ಡಾ.ರಾಧಾಕೃಷ್ಣರವರಿಗೆ ಕರ್ತವ್ಯದ ಮೇಲಿದ್ಧ ಬದ್ಧತೆ ಹಾಗೂ ಶ್ರದ್ಧೆಯಿಂದಾಗಿ ಅವರು ಶಿಕ್ಷಕ ವೃತ್ತಿಯಿಂದ ರಾಷ್ಟ್ರಪತಿ ಸ್ಥಾನಕ್ಕೆ ತಲುಪಿದರು. ಶಿಕ್ಷಕರು ಸಮಾಜಕ್ಕೆ ಆದರ್ಶಪ್ರಾಯರಾಗಿರ ಬೇಕು. ಮಾನವೀಯತೆ ಮೌಲ್ಯ ಕಳೆದುಕೊಳ್ಳುತ್ತಿರುವ ಈ ದಿನಗಳಲ್ಲಿ ಶಿಕ್ಷಕರ ಜವಾಬ್ದಾರಿ ಮಹತ್ವದ್ದಾಗಿದೆ ಎಂದರು.
ಜೇಸಿ ನಿಕಟಪೂರ್ವ ಅಧ್ಯಕ್ಷ ರಚನ್ ಜೆ.ಹುಯಿಗೆರೆ ಮಾತನಾಡಿ, ವಿದ್ಯೆ ಕಲಿಸಿದ ಗುರುಗಳಿಗೆ ಗೌರವ ಸಲ್ಲಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರು ನೀಡುವ ಶಿಕ್ಷಣ ನಮ್ಮ ಭವಿಷ್ಯ ರೂಪಿಸಲಿದೆ. ವಿದ್ಯಾರ್ಥಿ ಜೀವನದಲ್ಲಿ ನಾವು ತಪ್ಪು ಮಾಡಿದಾಗ ನಮ್ಮನ್ನು ಶಿಕ್ಷಿಸಿ ಉತ್ತಮ ಮಾರ್ಗದಲ್ಲಿ ನಡೆಯುವಂತೆ ಶಿಕ್ಷಕರು ದಾರಿ ತೋರಿಸಿರುತ್ತಾರೆ. ಅದರಿಂದಲೇ ನಾವು ಇಂದು ಉತ್ತಮ ಸ್ಥಾನಮಾನ, ಉನ್ನತ ಜೀವನ ನಡೆಸಲು ಸಾಧ್ಯವಾಗಿದೆ. ಬದುಕಿಗೆ ಗುರಿ ತೋರಿಸಿಕೊಟ್ಟ ಶಿಕ್ಷಕರನ್ನು ಎಂದಿಗೂ ಮರೆಯಬಾರದು ಎಂದರು.
ಶಿಕ್ಷಕರಾದ ಸುರೇಂದ್ರ, ಕೆ.ಎಂ.ರಾಘವೇಂದ್ರ, ಸಿ.ವಿ.ಸುನೀಲ್, ಎಚ್.ಪಿ.ಕಾರ್ತಿಕ್, ದುರ್ಗಾಚರಣ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಜೇಸಿ ಕಾರ್ಯದರ್ಶಿ ನಿಖಿಲ್ ಕಾನ್ಕೆರೆ, ಜ್ಯೂನಿಯರ್ ಜೇಸಿ ಅಧ್ಯಕ್ಷ ಕೆ.ಆರ್.ಲಿಖಿತ್ ಮತ್ತಿತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net