ಹಿರಿಯರ ಕೊಡುಗೆಗಳನ್ನು ಉಳಿಸುವುದು ನಮ್ಮೆಲ್ಲರ ಕರ್ತವ್ಯ

12BTP01
??????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????
Published on

ಬೆಟ್ಟದಪುರ: ಹಿರಿಯರು ಗ್ರಾಮಗಳ ಅಭಿವೃದ್ಧಿಗಾಗಿ ಹಳ್ಳಿಗೊಂದು ಶಾಲೆ, ದೇವಸ್ಥಾನ ಸೇರಿದಂತೆ ಕೆರೆಗಳನ್ನು ನಿರ್ಮಾಣ ಮಾಡಿದ್ದಾರೆ. ಅವುಗಳನ್ನು ರಕ್ಷಿಸಿ, ಉಳಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯ ಎಂದು ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೊಡಗು ಜಿಲ್ಲಾ ನಿರ್ದೇಶಕಿ ಲೀಲಾವತಿ ಸಲಹೆ ನೀಡಿದರು.


ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬೆಟ್ಟದಪುರ ವಲಯದ ವತಿಯಿಂದ ಭುವನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಹಯೋಗದೊಂದಿಗೆ ಪುನಶ್ಚೇತನಗೊಂಡಿರುವ ಕೊಣಸೂರು ಗ್ರಾಮದ ಚೆನ್ನಯ್ಯನಕಟ್ಟೆ ಕೆರೆಯನ್ನು ಬುಧವಾರ ಗ್ರಾಮಸ್ಥರಿಗೆ ಹಸ್ತಾಂತರ ಮಾಡಿದ ಬಳಿಕ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಬಹಳಷ್ಟು ಕೆರೆಗಳಿವೆ. ಆದರೆ ಈಗ ಒಂದು ಕೆರೆಯೂ ಕಾಣದಂತಾಗಿದೆ. ಇದರಿಂದ ಮಳೆ ಬಂದ ಸಂದರ್ಭದಲ್ಲಿ ಆ ನಗರದಲ್ಲಿ ಮನೆಗಳಿಗೆ ನೀರು ನುಗ್ಗುವ ಮೂಲಕ ಹಲವಾರು ಅವಾಂತರಗಳಿಗೆ ಕಾರಣವಾಗುತ್ತದೆ ಎಂದರು.


ಡಾ.ವೀರೇಂದ್ರ ಹೆಗ್ಗಡೆ ಅವರು ಜನರಿಗೆ ಆರ್ಥಿಕವಾಗಿ ಸಹಕಾರ ನೀಡುವುದು ಮಾತ್ರವಲ್ಲದೆ, ಅನೇಕ ರೀತಿಯ ಸಾಮಾಜಿಕ ಕಳಕಳಿಯ ಕೆಲಸಗಳನ್ನು ಸಮುದಾಯ ಪರವಾಗಿ ಮಾಡುತ್ತ ಬಂದಿದ್ದಾರೆ. ಹಸ್ತಾಂತರ ಮಾಡಿರುವ ಈ ಕೆರೆಯನ್ನು ಸ್ವಚ್ಛತೆಯಿಂದ ನೋಡಿಕೊಳ್ಳುವ ಹಾಗೂ ಗಿಡ ಮರಗಳನ್ನು ರಕ್ಷಿಸಿ ಬೆಳಸುವ ಜವಾಬ್ದಾರಿ ನಿಮ್ಮದಾಗಿದೆ ಎಂದು ಗ್ರಾಮಸ್ಥರು ಹಾಗೂ ಕೆರೆ ಅಭಿವೃದ್ಧಿ ಸಮಿತಿಗೆ ಸಲಹೆ ನೀಡಿದರು.


ಕೆರೆಯ ಸುತ್ತ ವಿವಿಧ ಹಣ್ಣಿನ ಗಿಡಗಳನ್ನು ಗಣ್ಯರು ನೆಟ್ಟು ನೀರೆರೆದರು.
ಕೊಡಗು ಜಿಲ್ಲಾ ಜನಜಾಗೃತಿ ವೇದಿಕೆ ಉಪಾಧ್ಯಕ್ಷ ಬಿ.ಜೆ.ದೇವರಾಜು, ಜಿಪಂ ಮಾಜಿ ಸದಸ್ಯ ಕೆ.ಸಿ.ರಾಜಶೇಖರಯ್ಯ, ಗ್ರಾಮದ ಮುಖಂಡ ಶಿವಪ್ಪ, ಪಿಡಿಒ ದೇವರಾಜೇಗೌಡ, ಗ್ರಾಪಂ ಸದಸ್ಯ ಪವಿತ್ರಾ, ಕೊಣಸೂರು ಡೇರಿ ಅಧ್ಯಕ್ಷೆ ರುದ್ರಾಣಿ, ಸಂಘಗಳ ಒಕ್ಕೂಟದ ಅಧ್ಯಕ್ಷೆ ಮಹದೇವಮ್ಮ, ಯೋಜನಾಧಿಕಾರಿ ಸಂತೋಷ್, ಕೃಷಿ ಮೇಲ್ವಿಚಾರಕ ವಿನಾಯಕ್‌ಪೂಜಾರ್, ಚಪ್ಪರದಹಳ್ಳಿ ವಲಯ ಮೇಲ್ವಿಚಾರಕಿ ಕೀರ್ತಿ, ಯೋಜನೆಯ ಹಲವು ಸದಸ್ಯರು, ಸೇವಾಪ್ರತಿನಿಧಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net