ಇದು ಲವ್ ಜಿಹಾದ್​..ಶೇಖ್ ಜಾನಿ ಭಾಷಾ ಬಂಧನಕ್ಕೆ ಬಿಜೆಪಿ ಒತ್ತಾಯ

janimaster
ಜಾನಿ ಮಾಸ್ಟ್ ರ್​
Published on

ಹೈದರಾಬಾದ್ : ಕೊರಿಯೋಗ್ರಾಫರ್​ ಜಾನಿ ಮಾಸ್ಟರ್ ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕು ಎಂದು ತೆಲಂಗಾಣ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಶಿಲ್ಪಾ ರೆಡ್ಡಿ ಆಗ್ರಹಿಸಿದ್ದಾರೆ.

ಜೂನಿಯರ್ ನೃತ್ಯ ಸಂಯೋಜಕಿಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ ಮತಾಂತರಕ್ಕೆ ಯತ್ನಿಸಿದ ಶೇಖ್ ಜಾನಿ ಭಾಷಾಗೆ ಕಠಿಣ ಶಿಕ್ಷೆಯಾಗಬೇಕು ಎಂದು ಅವರು ಒತ್ತಾಯಿಸಿದರು.

ಸಂತ್ರಸ್ತೆ ದೂರು ನೀಡಿದರೂ ಇದುವರೆಗೂ ಜಾನಿಯನ್ನು ಬಂಧಿಸಿಲ್ಲ ಎಂದು ಶಿಲ್ಪಾ ರೆಡ್ಡಿ ಹೇಳಿದ್ದಾರೆ.

ಇನ್ನು ಬುಧವಾರ ನರಸಿಂಗಿ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಸಂತ್ರಸ್ತೆಯ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿದೆ. ಆಕೆಗೆ ವೈದ್ಯಕೀಯ ಪರೀಕ್ಷೆಗಳನ್ನು ನಡೆಸಲಾಗಿದೆ. ಈ ವೇಳೆ ಸಂತ್ರಸ್ತೆಯ ಮನೆಗೆ ತೆರಳಿ ಹೆಚ್ಚಿನ ವಿವರ ಸಂಗ್ರಹಿಸಿದ್ದಾರೆ ಎಂದು ವರದಿಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net