ಪರಿಸರ ನಾಶ ತಡೆಯುವುದು ಅನಿವಾರ್ಯ

manjunath
ದತ್ತಿ ಕಾರ್ಯಕ್ರಮ ಉದ್ಘಾಟಿಸಿ ಡಿ.ಮಂಜುನಾಥ್ ಮಾತನಾಡಿದರು. ಬಿ.ಚಂದ್ರೇಗೌಡ, ಡಾ. ಎಸ್.ಎಂ.ಮುತ್ತಯ್ಯ, ಡಾ. ಜಿ.ಆರ್.ಲವ, ಡಾ. ಅರಸಯ್ಯ ಮುಂತಾದವರಿದ್ದರು.
Published on

ಶಿವಮೊಗ್ಗ: ಮನುಷ್ಯ ಪರಿಸರ ನಾಶ ಮಾಡುತ್ತಿದ್ದಾನೆ. ಹಿಂದೆಯೂ ನಾಶ ಮಾಡಿದ್ದ, ಮುಂದೆಯೂ ಮಾಡುತ್ತಾನೆ. 60 ಸಾವಿರ ವರ್ಷಗಳಲ್ಲಿ ಮಾನವ ವಿಕಾಸಗೊಂಡು ಬದುಕು ಕಟ್ಟಿಕೊಂಡಿದ್ದಾನೆ. ಕೈಗಾರಿಕಾ ಕ್ರಾಂತಿಯಿಂದ ಮನುಷ್ಯರು ಯಂತ್ರಗಳ ಮೇಲೆ ಅವಲಂಬಿತರಾಗಿದ್ದು ಪರಿಸರ ನಾಶಕ್ಕೆ ಕಾರಣವಾಯಿತು ಎಂದು ಸಾಹಿತಿ ಬಿ.ಚಂದ್ರೇಗೌಡ ಹೇಳಿದರು.

ಗೋಣಿಬೀಡು ರಾಮಮಂದಿರ ಸಭಾಂಗಣದಲ್ಲಿ ಏರ್ಪಡಿಸಿದ್ದ ಎನ್‌ಎಸ್‌ಎಸ್ ಶಿಬಿರದಲ್ಲಿ ಎಂ.ಆರ್.ಕೃಷ್ಣ ಶೆಟ್ಟಿ ದತ್ತಿನಿಧಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅವರು, 200 ವರ್ಷಗಳಲ್ಲಿ ಗುಡ್ಡ, ಬೆಟ್ಟ, ಹೆದ್ದಾರಿ, ಕಾಡು, ನದಿ, ಅಣೆಕಟ್ಟೆ ಎಲ್ಲವನ್ನೂ ನಿರ್ಮಿಸಿದ ಪರಿಣಾಮ ಲಕ್ಷಾಂತರ ಮರಗಳ ಮಾರಣಹೋಮವಾಯ್ತು. ಇದು ಪರಿಸರ ನಾಶಕ್ಕೆ ದೊಡ್ಡ ಕಾರಣ ಎಂದರು.
ಇಂದು ಸಕಲ ಜೀವರಾಶಿಗಳು ಅಪಾಯದ ಅಂಚಿನಲ್ಲಿವೆ. ಮರ ಕಡಿದರೆ ನೆರಳು ಮಾತ್ರ ಮಾಯವಾಗುವುದಿಲ್ಲ. ಆ ಮರದಲ್ಲಿದ್ದ ಹಕ್ಕಿ, ಪಕ್ಷಿಗಳು, ಕೀಟಗಳು ಎಲ್ಲವೂ ನಾಶವಾಗುತ್ತವೆ. ವಾತಾವರಣ ಬಿಸಿಯಾಗುತ್ತಿದೆ. 140 ಕೋಟಿ ಜನಸಂಖ್ಯೆಯಿದೆ. ಇಲ್ಲಿ ಯಾರನ್ನೂ ಸುಖವಾಗಿಡಲು ಆಗುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.
ಕಸಾಪ ಜಿಲ್ಲಾಧ್ಯಕ್ಷ ಡಿ.ಮಂಜುನಾಥ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ದತ್ತಿಯ ಆಶಯವನ್ನು ವಿವರಿಸಿದರು. ಉಪನ್ಯಾಸಕ ಡಾ. ಎಸ್.ಎಂ.ಮುತ್ತಯ್ಯ, ರಂಗಕರ್ಮಿ ಡಾ. ಜಿ.ಆರ್.ಲವ, ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿ ಡಾ. ಅರಸಯ್ಯ, ಕಸಾಪ ತಾಲೂಕು ಅಧ್ಯಕ್ಷ ಕೋಡ್ಲು ಯಜ್ಞಯ್ಯ, ಕಾರ್ಯದರ್ಶಿ ಎಚ್.ತಿಮ್ಮಪ್ಪ, ಜಿಲ್ಲಾ ಕಾರ್ಯದರ್ಶಿ ಎಂ.ಎಂ.ಸ್ವಾಮಿ ಮುಂತಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net