

ನವದೆಹಲಿ: ಆದಾಯ ತೆರಿಗೆ ಇಲಾಖೆ ವತಿಯಿಂದ ಕರ್ನಾಟಕದಲ್ಲಿ ಮಾರ್ಚ್ 31ರಂದು ಕೆಲವು ಸಹಕಾರಿ ಬ್ಯಾಂಕುಗಳ ಮೇಲೆ ದಾಳಿ ಮಾಡಿ ಕಾರ್ಯಾಚರಣೆ ನಡೆಸಿ 1,000 ಕೋಟಿ ರೂ. ಹಣವನ್ನು ಅಕ್ರಮ ಎಂದು ಕಂಡು ಬಂದ ಹಿನ್ನಲೆಯಲ್ಲಿ ವಶಪಡಿಸಿಕೊಂಡಿತ್ತು.
ಈ ಕುರಿತು ಪ್ರತಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿರುವ CBDT ಒಟ್ಟು 16 ಸಹಕಾರಿ ಬ್ಯಾಂಕುಗಳ ಮೇಲೆ ದಾಳಿ ಮಾಡಲಾಗಿದ್ದು ಇವುಗಳು ಗ್ರಾಹಕರನ್ನು ತೆರಿಗೆ ಕಟ್ಟದಂತೆ ಅವರ ಹಣವನ್ನು ರೂಟಿಂಗ್ನಲ್ಲಿ ತೊಡಗಿಸಿಕೊಂಡಿರುವುದು ಕಂಡು ಬಂದ ಹಿನ್ನಲೆಯಲ್ಲಿ ದಾಳಿ ಮಾಡಲಾಗಿತ್ತು. ದಾಳಿಯ ವೇಳೆ 33 ಕೋಟಿ ರೂಪಾಯಿ ಹಣ ಹಾಗೂ 2 ಕೋಟಿ ರೂ. ಮೌಲ್ಯದ ಚಿನ್ನಾಭರಣಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದೆ.
CBDT ವಶಪಡಿಸಿಕೊಂಡಿರುವ ದಾಖಲೆಗಳಲ್ಲಿ ಈ ಬ್ಯಾಂಕುಗಳು ಅಸ್ತಿತ್ವದಲ್ಲಿರದ ಕಂಪನಿಗಳ ಚೆಕ್ಗಳನ್ನು ಡಿಸ್ಕೌಂಟ್ ಮಾಡಿದೆ. ಇದರಲ್ಲಿ ಕಂಟ್ರ್ಯಾಕ್ಟರ್, ರಿಯಲ್ ಎಸ್ಟೇಟ್ ಕಂಪನಿಗಳು ಸೇರಿದಂತೆ ಇತರರ ಚೆಕ್ಗಳು ಸಹ ಒಳಗೊಂಡಿವೆ ಎಂದು ತಿಳಿಸಿದೆ.
ಈ ಸಹಕಾರಿ ಬ್ಯಾಂಕುಗಳು ಚೆಕ್ ಡಿಸ್ಕೌಂಟ್ ಮಾಡುವ ವೇಳೆ KYCಯ ಯಾವುದೇ ಮಾನದಂಡಗಳನ್ನು ಅನುಸರಿಸಿಲ್ಲ ಎಂದು CBDT ಆರೋಪಿಸಿದೆ.
ಚೆಕ್ ಡಿಸ್ಕೌಂಟ್ ಮಾಡಿದ ನಂತರ ಆ ಹಣವನ್ನು ನೇರ ಸಹಕಾರಿ ಬ್ಯಾಂಕುಗಳ ಖಾತೆಗೆ ಜಮಾವಣೆ ಮಾಡಲಾಗುತ್ತಿತ್ತು. ಇದರಲ್ಲಿ ಕೆಲವು ಸರ್ಕಾರಿ ಬ್ಯಾಂಕುಗಳ ಹಣವನ್ನು ಬಿಡಿಸಿ ಚೆಕ್ ನೀಡಿದ ವ್ಯಕ್ತಿಗಳಿಗೆ ನೀಡುತ್ತಿತ್ತು ಮತ್ತು ಇದಕ್ಕೆ ಸೂಕ್ತ ಕಾರಣವನ್ನು ತಿಳಿಸಿರಲಿಲ್ಲ.
ಹೆಚ್ಚಿನ ಮೊತ್ತದ ಚೆಕಗ್ಗಳನ್ನು ಡಿಸ್ಕೌಂಟ್ ಮಾಡಿಸುವ ಹಿಂದಿನ ಉದ್ದೇಶ ಏನೆಂದರೆ ಹೆಚ್ಚಿನ ಹಣವನ್ನು ಖಾತೆಯಿಂದ ತೆಗೆದುಕೊಳ್ಳುವ ಮೂಲಕ ನಕಲಿ ಕಂಪನಿಗಳು ಬೋಗಸ್ ವೆಚ್ಚವನ್ನು ತೋರಿಸಲು ಧಾರಿ ಮಾಡಿಕೊಡುತ್ತಿದ್ದವು.
ತೆರಿಗೆಯನ್ನು ಕಟ್ಟುವುದರಿಂದ ತಪ್ಪಿಸಿಕೊಳ್ಳಲು ಸಹಕಾರಿ ಬ್ಯಾಂಕುಗಳನ್ನು ಒಂದು ವಾಹಿನಿಯಾಗಿ ಬಳಸಿಕೊಳ್ಳಲಾಗಿದೆ. ಈ ಕಂಪನಿಗಳು ಆದಾಯ ತೆರಿಗೆ ನಿಯಮಗಳನ್ನು ಪಾಲಿಸದಿರುವುದು ಸ್ಪಷ್ಟವಾಗಿ ಗೋಚರಿಸಿವೆ.
ಈ ರೀತಿ ಸುಮಾರು 1,000 ಕೋಟಿ ರೂಪಾಯಿಗೂ ಹೆಚ್ಚಿನ ಮೊತ್ತವನ್ನ ಬೋಗಸ್ ಎಂದು ತೋರಿಸಲಾಗಿದೆ ಎಂದು CBDT ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಈ ಸಹಕಾರಿ ಬ್ಯಾಂಕುಗಳು ಗ್ರಾಹಕರು ಇರಿಸಿದ್ದ ಠೇವಣಿ ಹಣವನ್ನು FDR ತೆರೆಯಲು ಅವಕಾಶ ಮಾಡಿಕೊಟ್ಟಿದೆ ಮತ್ತು ಅದೇ ಹಣವನ್ನು ಬಳಸಿಕೊಂಡು ಸಾಲ ಮಂಜೂರು ಮಾಡಿದೆ. ತನಿಖೆ ವೇಳೆ ಈ ಬ್ಯಾಂಕುಗಳು ಸುಮಾರು 15 ಕೋಟಿ ರೂಪಾಯಿಗೂ ಅಧಿಕ ಮೊತ್ತವನ್ನು ಸಾಲವನ್ನಾಗಿ ನೀಡಿದೆ ಎಂದು ಕಂಡು ಬಂದಿದೆ.
ಈ ರೀತಿ ಲೆಕ್ಕಕೆ ಸಿಗದ ಹಣವನ್ನು ಬ್ಯಾಂಕುಗಳು ರಿಯಲ್ ಎಸ್ಟೇಟ್ ಸೇರಿದಂತೆ ಬೇರೆ ಬೇರೆ ಕಡೆ ತೊಡಗಿಸಿದೆ. ಈ ಹಣಗಳನ್ನು ಬೇರೆ ಬೇರೆ ಮೂಲಗಳನ್ನು ತೋರಿಸುವ ಮೂಲಕ ಬ್ಯಾಂಕುಗಳ ಖಾತೆಗೆ ಹಿಂತಿರುಗಿಸಲಾಗಿದೆ.
ಬ್ಯಾಂಕಿಗೆ ಸಂಬಂಧಪಟ್ಟ ವ್ಯಕ್ತಿಗಳು ಈ ಹಣವನ್ನು ಯಾವುದೇ ನಿಯಮಗಳನ್ನು ಪಾಲಿಸದೆ ತಮ್ಮ ವೈಯಕ್ತಿಕ ಹಿತಾಸಕ್ತಿಗೆ ಬಳಸಿಕೊಂಡಿರುವುದು ಸ್ಪಷ್ಟವಾಗಿ ಗೋಚರಿಸಿದೆ ಎಂದು CBDT ತನ್ನ ಪತಿಕ್ರಾ ಪ್ರಕಟಣೆಯಲ್ಲಿ ತಿಳಿಸಿದೆ.