ಮೇಘನಾ ಫುಡ್ಸ್ ಗ್ರೂಪ್ ಕಂಪನಿ ಮೇಲೆ ಐಟಿ ದಾಳಿ

Income tax
Published on

ಬೆಂಗಳೂರು: ಆದಾಯ ತೆರಿಗೆ ವಂಚಿಸುವ ಆರೋಪದ ಹಿನ್ನೆಲೆಯಲ್ಲಿ ಮೇಘನಾ ಫುಡ್ಸ್ ಗ್ರೂಪ್ ಕಂಪನಿಗೆ ಸಂಬಂಧಿಸಿದ ಸ್ಥಳಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.
ಮೇಘನಾ ಫುಡ್ಸ್ ಗ್ರೂಪ್ ಕಂಪನಿಗೆ ಸೇರಿದ ೧೦ಕ್ಕೂ ಹೆಚ್ಚು ಕಡೆ ಮಂಗಳವಾರ ಬೆಳಗ್ಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಮೇಘನಾ ಫುಡ್ಸ್ ಕಂಪನಿ ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳನ್ನು ನಡೆಸುತ್ತಿದೆ. ನಗರದ ಕೋರಮಂಗಲ, ಇಂದಿರಾನಗರ, ಜಯನಗರದಲ್ಲಿ ಇದರ ಶಾಖೆಗಳಿವೆ. ಈ ಮೂರು ಶಾಖೆಗಳಲ್ಲಿಯೂ ಐಟಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಆದಾಯ ತೆರಿಗೆ ಪಾವತಿಯಲ್ಲಿ ವ್ಯತ್ಯಾಸ ಕಂಡು ಬಂದ ಹಿನ್ನೆಲೆಯಲ್ಲಿ ಐಟಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಕರ್ನಾಟಕ ಮತ್ತು ಗೋವಾ ವಿಭಾಗದ ಅಧಿಕಾರಿಗಳು ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net