

ಕೊರಟಗೆರೆ : ಬಿಜೆಪಿಯವರು ಕಾಂಗ್ರೆಸ್ ದೇಶಕ್ಕೆ ಏನು ಮಾಡಿದೆ ಎಂದು ಪ್ರಶ್ನಿಸುವ ಬದಲು ಕಾಂಗ್ರೆಸ್ ಇತಿಹಾಸ ಓದಿದರೆ ಏನು ಮಾಡಿದೆ ಎನ್ನುವುದು ತಿಳಿಯುತ್ತದೆ ಎಂದು ಶಾಸಕ ಡಾ.ಜಿ.ಪರಮೇಶ್ವರ್ ಕುಟುಕಿದರು.
ಪಟ್ಟಣದ ಮಾರುತಿ ಕಲ್ಯಾಣ ಮಂಟಪದಲ್ಲಿ ಬುಧವಾರ ಕೊರಟಗೆರೆ ವಿಧಾನಸಭಾ ಕ್ಷೇತ್ರದ 6 ಹೋಬಳಿಗಳ ಕಾಂಗ್ರೆಸ್ ಬೆಂಬಲಿತ ಗ್ರಾಪಂ ಸದಸ್ಯರ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು. ರೈತರ ಭೂಮಿ ಕಬಳಿಸುವುದು ಮತ್ತು ಬಹುರಾಷ್ಟ್ರೀಯ ಕಂಪನಿಗಳಿಗೆ ಸಹಕಾರ ಮಾಡುವ ಕಾಯ್ದೆಗಳನ್ನು ಬಿಜೆಪಿ ಸರ್ಕಾರ ಹಿಂಪಡೆಯಬೇಕು ಹಾಗೂ ಬಿಜೆಪಿ ಸರ್ಕಾರದ ಸಾಧನೆಯನ್ನು ಶ್ವೇತಪತ್ರ ಹೊರಡಿಸಿ ಎಂದು ಸವಾಲೆಸೆದರು. ಮಾಜಿ ಶಾಸಕ ಕೆ.ಎನ್.ರಾಜಣ್ಣ ಮಾತನಾಡಿ, ಚುನಾವಣೆಯಲ್ಲಿ ಕಾಂಗ್ರೆಸ್ ಯಾರಿಗೂ ಆರ್ಥಿಕ ಸಹಾಯ ಮಾಡಿಲ್ಲ. ಆದರೂ ನೀವೆಲ್ಲರೂ ಗೆದ್ದಿದ್ದೀರಿ. ಇದು ಪಕ್ಷ ಮತ್ತು ಅಭಿವೃದ್ಧಿಯ ಜಯ ಎಂದರು.
ಸಿದ್ದರಾಮಯ್ಯ ಅವರನ್ನು ರಾಜಕೀಯವಾಗಿ ಹಿನ್ನಡೆ ಮಾಡಬೇಕೆನ್ನುವ ಹಿನ್ನೆಲೆಯಲ್ಲಿ ಈಶ್ವರಪ್ಪ ಕುರುಬರನ್ನು ಎಸ್ಟಿಗೆ ಸೇರಿಸುವಂತೆ ಸರ್ಕಾರಕ್ಕೆ ಒತ್ತಡ ತರುತ್ತಿದ್ದಾರೆ. ಎಸ್‌ಟಿಗೆ ಕುರುಬರನ್ನು ಸೇರಿಸುವ ಮೊದಲು ಈಗಿರುವ ಮೀಸಲಾತಿ ಹೆಚ್ಚಿಸಿ ಕುರುಬರನ್ನು ಸೇರಿಸಲಿ ಎಂದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ರಾಮಕೃಷ್ಣ, ಮಾಜಿ ಅಧ್ಯಕ್ಷ ಶಫಿ ಅಹಮದ್, ತಾಲೂಕು ಅಧ್ಯಕ್ಷರಾದ ಕೋಡ್ಲಹಳ್ಳಿ ಅಶ್ವಥನಾರಾಯಣ್, ಅರಕೆರೆ ಸೋಮಶೇಖರ್, ಮಹಿಳಾ ಅಧ್ಯಕ್ಷೆ ಜಯಮ್ಮ, ಮಾಜಿ ಶಾಸಕ ರಫೀಕ್ ಅಹಮದ್, ಹುಬ್ಬಳಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅನಿಲ್ ಪಾಟೀಲ್, ತಾಪಂ ಅಧ್ಯಕ್ಷ ಟಿ.ಸಿ.ರಾಮಯ್ಯ, ಉಪಾಧ್ಯಕ್ಷ ವೆಂಕಟಪ್ಪ, ತಾಲೂಕು ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಮಲಾರಪ್ಪ, ಪಪಂ ಸದಸ್ಯ ಎ.ಡಿ.ಬಲರಾಮಯ್ಯ, ಕೆ.ಆರ್.ಓಬಳರಾಜು, ಮುಖಂಡ ಚಿಕ್ಕರಂಗಯ್ಯ, ಎಲ್.ರಾಜಣ್ಣ, ಕೆ.ಬಿ.ಲೋಕೇಶ್ ಇತರದ್ದರು.
ಗೌಡರು ಹಳೇ ಬಸ್ಸು..: ಮಾಜಿ ಪ್ರಧಾನಿ ದೇವೇಗೌಡರು ಜಾತಿವಾದಿಯಲ್ಲ...ಯಾವೊಬ್ಬ ಒಕ್ಕಲಿಗರಿಗೂ ಒಳ್ಳೆಯದನ್ನು ಮಾಡಿಲ್ಲ.. ಅವರೊಬ್ಬ ಕುಟುಂಬ ವಾದಿ. ಅವರು ಕುಟುಂಬಕ್ಕಷ್ಟೇ ಸೀಮಿತ. ಗೌಡರು ಹಳೇ ಬಸ್ಸು... ಕುಮಾರಸ್ವಾಮಿ ನಿಂತಿರೋ ಬಸ್ಸು... ಡಿ.ಕೆ.ಶಿವಕುಮಾರ್ ಈಗ ಓಡೋ ಬಸ್ಸು. ಈ ಬಸ್ಸನ್ನು ಎಲ್ಲ ಒಕ್ಕಲಿಗರು ಹತ್ತಬೇಕು ಎಂದು ಒಕ್ಕಲಿಗ ಸಮುದಾಯಕ್ಕೆ ಮಾಜಿ ಶಾಸಕ ಕೆ.ಎನ್.ರಾಜಣ್ಣ ಸಲಹೆಯಿತ್ತರು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪರಮೇಶ್ವರ ನನಗೆ ಬಿ ಾರಂ ನೀಡುವುದು ತಡವಾದ್ದರಿಂದಲೇ 75 ಸಾವಿರ ಮತಗಳ ಅಂತರದಿಂದ ಸೋತೆ. ಮೊದಲೇ ಬಿ ಾರಂ ನೀಡಿದ್ದರೆ ಗೆಲ್ಲುತ್ತಿದ್ದೆ. ಷಡಕ್ಷರಿ, ಮಾಜಿ ಶಾಸಕ