

ನವದೆಹಲಿ: ಕೋವಿಡ್ ಸಾಂಕ್ರಾಮಿಕದ ಕಾರಣ ಕಳೆದ ವರ್ಷ ನಿಗದಿತ ಗುರಿಗಳನ್ನು ಸಾಧಿಸಲು ಆಗದೆ ಹಲವು ಯೋಜನೆಗಳನ್ನು ಮುಂದೂಡಿದ್ದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಈ ವರ್ಷದ ಮೊದಲ ಉಡಾವಾಣೆಯಾಗಿ ಇಒಎಸ್-04 ಉಪಗ್ರಹವನ್ನು ಅಂತರಿಕ್ಷಕ್ಕೆ ರವಾನಿಸುತ್ತಿದೆ. ಇದರ ಜತೆಗೆ ಇಸ್ಪೆ$ರ್ಸ್ಯಾಟ್-1 ಮತ್ತು ಐಎಸ್ಎಸ್-2ಟಿಡಿ ಗಳನ್ನೂ ಉಡಾವಣೆ ಮಾಡಲಾಗುತ್ತಿದೆ.
ಭೂಮಿ ಮೇಲೆ ನಿಗಾ ಇರಿಸುವ ಸರಣಿಯಲ್ಲಿ ನಾಲ್ಕನೆಯದ್ದಾದ ಇಒಎಸ್-04 ಸ್ಯಾಟಲೈಟ್, ಸೋಮವಾರ ನಸುಕಿನ 5.30ಕ್ಕೆ ಶ್ರೀಹರಿಕೋಟಾದಿಂದ ಉಡಾವಣೆ ಆಗಿಲಿದೆ. ಇಸ್ರೊ ಈ ವರ್ಷ ಚಂದ್ರಯಾನ-3 ಸೇರಿ 19 ಯೋಜನೆಗಳನ್ನು ಹಮ್ಮಿಕೊಂಡಿದೆ. ಕಳೆದ ಎರಡು ವರ್ಷದಲ್ಲಿ ಇಸ್ರೋದ ಮೂರು ಬಾಹ್ಯಾಕಾಶ ಯೋಜನೆಗಳು ಮಾತ್ರ ಸಲವಾಗಿವೆ. ಕಾರ್ಟೊಸ್ಯಾಟ್ ಮಾಲಿಕೆಯ ಈ ಉಪಗ್ರಹಗಳು ಭೂ ಮೇಲ್ಮೆನ ಮಾಹಿತಿ ಒದಗಿಸುವ ಮೂಲಕ ನೆ ತಯಾರಿಗೆ ಅನುಕೂಲ ಮಾಡಿಕೊಡುತ್ತದೆ.
ಸಾಗರ, ಅರಣ್ಯ, ಪರ್ವತಗಳನ್ನು ಕರಾರುವಕ್ಕಾಗಿ ಗುರುತಿಸುವಿಕೆ. ಖನಿಜ ಸಂಪತ್ತ ಪತ್ತೆ, ಹವಾಮಾನ ಬದಲಾವಣೆಯ ಮಾಹಿತಿ, ಮಣ್ಣಿನ ಗುಣಮಟ್ಟ ಸೇರಿ ಭೂಗೋಳದ ಬಾಹ್ಯರೇಖೆಯ ಸಂಪೂರ್ಣ ಮಾಹಿತಿಯನ್ನು ಈ ಸ್ಯಾಟಲೈಟ್ ಒದಗಿಸುತ್ತದೆ. ಇಒಎಸ್-01 ಸ್ಯಾಟಲೈಟ್ ಅನ್ನು 2020ರ ನವೆಂಬರ್ನಲ್ಲಿ ಉಡಾವಣೆ ಮಾಡಲಾಯಿತು.ಇಒಎಸ್-02 ಸಣ್ಣ ಸ್ಯಾಟಲೈಟ್ ಆಗಿದ್ದು, ಇದು ಎಸ್ಎಸ್ಎಲ್ವಿ ರಾಕೆಟ್ನಲ್ಲಿ ಉಡಾವಣೆ ಆಗಬೇಕಿದೆ. ಇಒಎಸ್-03 ಕಳೆದ ವರ್ಷ ಆಗಸ್ಟ್ನಲ್ಲಿ ಉಡಾವಣೆ ಆಯಿತಾದರೂ ವಿಲವಾಯಿತು.1,710 ಕೆ.ಜಿ. ತೂಕದ ಇಒಎಸ್-04 ಸ್ಯಾಟಲೈಟ್ ಅನ್ನು ಭೂಮಿಯಿಂದ 529 ಕಿ.ಮೀ. ಎತ್ತರದಲ್ಲಿರುವ ಕೆಗೆ ರವಾನಿಸಲಾಗುತ್ತದೆ. 2012ರಲ್ಲಿ ಉಡಾವಣೆಯಾದ ಈಗ ಕಾರ್ಯ ಸ್ಥಗಿತಗೊಳಿಸಿರುವ ರಿಸ್ಯಾಟ್-1 ಉಪಗ್ರಹದ ಬದಲಿಯಾಗಿ ಇಒಎಸ್-04 ಅನ್ನು ಕಳುಹಿಸಲಾಗುತ್ತಿದೆ. ಉತ್ತಮ ಗುಣಮಟ್ಟದ ಚಿತ್ರಗಳನ್ನು ಇದು ರವಾನಿಸುತ್ತದೆ. ಇನ್ಸ್ಪೆ$ರ್ಸ್ಯಾಟ್-1 ಅನ್ನು ತಿರುವನಂತಪುರದ ಭಾರತೀಯ ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಯ ವಿದ್ಯಾಥಿರ್ ಸಿದ್ಧಪಡಿಸಿದ್ದಾನೆ. ಅಮೆರಿಕದ ಕೊಲೊರಾಡೊ ವಿವಿ ಆತನಿಗೆ ನೆರವು ನೀಡಿದೆ. ಐಎನ್ಎಸ್-2ಟಿಡಿ ಉಪಗ್ರಹವು ಭೂತಾನ್ ಜತೆಗೂಡಿ ಭಾರತ ಕೈಗೊಂಡಿರುವ ಮೊದಲ ಬಾಹ್ಯಾಕಾಶ ಅನ್ವೇಷಣೆಯದ್ದಾಗಿದೆ.