

ನವದೆಹಲಿ: ಭಾರತದ ಹೆಮ್ಮೆಯ ಸಂಸ್ಥೆ ಇಸ್ರೋ ಮುಖ್ಯಸ್ಥರಾದ ಎಸ್. ಸೋಮನಾಥ್, ಬಾಹ್ಯಾಕಾಶ ಕ್ಷೇತ್ರದಲ್ಲಿ ವೈಫಲ್ಯವಾಯಿತು ಎಂದು ಯಾವುದೇ ವ್ಯಕ್ತಿಗೆ ನಾವು ದಂಡ ವಿಧಿಸುವುದಿಲ್ಲ ಎಂದು ಹೇಳಿದರು.
ಆಲ್ ಇಂಡಿಯಾ ಮ್ಯಾನೇಜ್ಮೆಂಟ್ ಅಸೋಸಿಯೇಷನ್ (AIMA) 50ನೇ ವಾರ್ಷಿಕೋತ್ಸವದಲ್ಲಿ ಮಾತನಾಡಿದ ಎಸ್. ಸೋಮನಾಥ್, "ವೈಫಲ್ಯಗಳು ಬಾಹ್ಯಾಕಾಶ ಕ್ಷೇತ್ರದ ಅತ್ಯಂತ ಸ್ವಾಭಾವಿಕ ಭಾಗವಾಗಿದೆ. ಈ ಕಾರಣಗಳಿಗೆ ಇಸ್ರೋ ಯಾವುದೇ ವ್ಯಕ್ತಿಗೆ ದಂಡ ವಿಧಿಸುವುದಿಲ್ಲ" ಎಂದು ಹೇಳಿದರು.
"ಒಬ್ಬ ವ್ಯಕ್ತಿಯಿಂದ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳದ ಕಾರಣ, ನಾವು ಯಾರೋ ಒಬ್ಬರನ್ನು ಗುರಿಯಾಗಿಸಿ, ವೈಫಲ್ಯಗಳಿಗೆ ನೇರ ಹೊಣೆಯಾಗಿಸಿ ದಂಡ ವಿಧಿಸಲಾಗುವುದಿಲ್ಲ ಎಂಬುದನ್ನು ನಾವು ಖಚಿತಪಡಿಸಿಕೊಳ್ಳುತ್ತೇವೆ. ಈ ಎಲ್ಲಾ ನಿರ್ಧಾರಗಳನ್ನು ಸಾಮೂಹಿಕ ಬುದ್ಧಿವಂತಿಕೆಯಿಂದ ತೆಗೆದುಕೊಳ್ಳಲಾಗುತ್ತದೆ" ಎಂದು ಸೋಮನಾಥ್ ಹೇಳಿದರು,(ಏಜೆನ್ಸೀಸ್).