ಆದಿತ್ಯ - L1ಲಾಂಚ್ ದಿನವೇ ಇಸ್ರೋ ಆಧ್ಯಕ್ಷ ಸೋಮನಾಥಗೆ ಕ್ಯಾನ್ಸರ್ ಪತ್ತೆ, ಆದರೂ ಕರ್ತವ್ಯಕ್ಕೂ ಹಾಜರಾದ ಧೈರ್ಯಶಾಲಿ

ISRO
Published on

 ನವದೆಹಲಿ:  ಆದಿತ್ಯ-ಎಲ್1 ಮಿಷನ್ ಬಾಹ್ಯಾಕಾಶಕ್ಕೆ ಉಡಾವಣೆಯಾದ ದಿನದಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮುಖ್ಯಸ್ಥ ಎಸ್ ಸೋಮನಾಥ್ ಅವರಿಗೆ ಕ್ಯಾನ್ಸರ್ ಇರುವುದು ಪತ್ತೆಯಾಗಿತ್ತು.

2023 ಸೆಪ್ಟೆಂಬರ್ 2ರಂದು, ಭಾರತದ ಮೊದಲ ಬಾಹ್ಯಾಕಾಶ-ಆಧಾರಿತ ಸೌರ ವೀಕ್ಷಣಾಲಯ, ಆದಿತ್ಯ ಎಲ್ 1, ಸೂರ್ಯನನ್ನು ಅಧ್ಯಯನ ಮಾಡಲು ತನ್ನ ಪ್ರಯಾಣವನ್ನು ಪ್ರಾರಂಭಿಸಿದಾಗ, ಎಸ್ ಸೋಮನಾಥ್ ಅವರು ವಾಡಿಕೆಯಂತೆ ಸ್ಕ್ಯಾನ್‌ಗೆ ಒಳಗಾದಾಗ ಕ್ಯಾನ್ಸರ್ ಇರುವುದನ್ನು ಕಂಡುಕೊಂಡರು. ಎಸ್ ಸೋಮನಾಥ್ ಅವರಿಗೆ ಶಸ್ತ್ರಚಿಕಿತ್ಸೆಯ ನಂತರ ಕಿಮೊಥೆರಪಿ ಮಾಡಲಾಯಿತು.

ಎಸ್ ಸೋಮನಾಥ್  ಸಂದರ್ಶನವೊಂದರಲ್ಲಿ ಮಾತನಾಡಿ, 'ಆ ಸಮಯದಲ್ಲಿ ಕ್ಯಾನ್ಸರ್‌ ಸಂಪೂರ್ಣ ಗುಣಪಡಿಸುವ ಬಗ್ಗೆ ನನಗೆ ಅನಿಶ್ಚಿತವಾಗಿತ್ತು. ಆದರೂ ನಾನು ಚಿಕಿತ್ಸೆ ಪಡೆದುಕೊಂಡೆ. ಆದರೆ ಚೇತರಿಸಿಕೊಳ್ಳುವಿಕೆಯ ಪ್ರಕ್ರಿಯೆಯು ಪವಾಡಕ್ಕಿಂತ ಕಡಿಮೆಯಿರಲ್ಲಿಲ್ಲ. ಆಸ್ಪತ್ರೆಯಲ್ಲಿ ಕೇವಲ ನಾಲ್ಕು ದಿನಗಳನ್ನು ಕಳೆದ ನಂತರ, ಇಸ್ರೋದಲ್ಲಿ ಕರ್ತವ್ಯವನ್ನು ಪುನರಾರಂಭಿಸಿದೆ. ಐದನೇ ದಿನದಿಂದ ಯಾವುದೇ ನೋವು ಇಲ್ಲದೆ ಕೆಲಸ ಮಾಡಿದೆ' ಎಂದಿದ್ದಾರೆ.

'ನಾನು ನಿಯಮಿತವಾಗಿ ತಪಾಸಣೆ ಮತ್ತು ಸ್ಕ್ಯಾನ್‌ಗೆ ಒಳಗಾಗುತ್ತೇನೆ. ಆದರೆ, ಈಗ ನಾನು ಸಂಪೂರ್ಣವಾಗಿ ಗುಣಮುಖನಾಗಿದ್ದೇನೆ ಮತ್ತು ನನ್ನ ಕರ್ತವ್ಯವನ್ನು ಪುನರಾರಂಭಿಸಿದ್ದೇನೆ' ಎಂದು ಸೋಮನಾಥ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net