

ISRO: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಅಧ್ಯಕ್ಷರಾದ ವಿ. ನಾರಾಯಣನ್ ಅವರು ಮಾತನಾಡಿ, ಇಸ್ರೋದ ಭವಿಷ್ಯ ಯೋಜನೆಗಳ ಕುರಿತು ಹಲವು ಪ್ರಮುಖ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ರಾಷ್ಟ್ರೀಯ ಭದ್ರತೆಯಿಂದ ಹಿಡಿದು ಪ್ರತಿಷ್ಠಿತ ಬಾಹ್ಯಾಕಾಶ ಮಾರ್ಗದವರೆಗೂ ಇಸ್ರೋದ ಭವಿಷ್ಯದ ಯೋಜನೆಗಳು ಮತ್ತು ಪ್ರಸ್ತುತ ಚಟುವಟಿಕೆಗಳನ್ನು ನಾರಾಯಣನ್ ವಿವರಿಸಿದ್ದಾರೆ. ನಾಗರಿಕರ ಸುರಕ್ಷತೆ ಮತ್ತು ದೇಶದ ಸಮಗ್ರತೆ ಇಸ್ರೋದ ಮೊದಲ ಆದ್ಯತೆ ಎಂಬುದನ್ನು ಒತ್ತಿ ಹೇಳಿದ್ದಾರೆ.
"ಸುಮಾರು 11,500 ಕಿ.ಮೀ ಅಗಲವಿರುವ ದೇಶದ ಭೂಮಿ ಮತ್ತು ಅದರ ಸಮುದ್ರ ಗಡಿಗಳನ್ನು ರಕ್ಷಿಸುವುದು ಇಸ್ರೋ ಪ್ರಮುಖ ಜವಾಬ್ದಾರಿಯಾಗಿದೆ. ಪ್ರಸ್ತುತ, 56 ಉಪಗ್ರಹಗಳಲ್ಲಿ ಹೆಚ್ಚಿನವು ಭದ್ರತಾ ಉದ್ದೇಶಗಳಿಗಾಗಿ ಬಳಕೆಯಾಗುತ್ತವೆ. ಕರಾವಳಿ ಪ್ರದೇಶಗಳು ಮತ್ತು ಗಡಿಗಳ ನಿರಂತರ ಮೇಲ್ವಿಚಾರಣೆಗೆ ಇಸ್ರೋ ಸಂಸ್ಥೆಯ ತಂತ್ರಜ್ಞಾನವು ಹೆಚ್ಚು ಉಪಯುಕ್ತವಾಗಿದೆ" ಎಂದು ವಿ. ನಾರಾಯಣನ್ ಹೇಳಿದ್ದಾರೆ.
'ಆಪರೇಷನ್ ಸಿಂಧೂರ್' ನಂತಹ ಸೂಕ್ಷ್ಮ ವಿಷಯಗಳ ಕುರಿತು ಮಾತನಾಡಿದ ಅವರು, "ಕೆಲವು ವಿಷಯಗಳನ್ನು ಗೌಪ್ಯವಾಗಿಡಬೇಕು ಮತ್ತು ಎಲ್ಲಾ ವಿವರಗಳನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ. ನಾಗರಿಕರನ್ನು ರಕ್ಷಿಸಲು ಇಸ್ರೋ ಇತರ ಇಲಾಖೆಗಳೊಂದಿಗೆ ನಿರಂತರವಾಗಿ ಕೆಲಸ ಮಾಡುತ್ತಿದೆ ಎಂದು. ಬಹು ಕ್ಷೇತ್ರಗಳಲ್ಲಿ ಇಸ್ರೋ ಸೇವೆಗಳು ಮುಂಚೂಣಿಯಲ್ಲಿವೆ. ಇಸ್ರೋ ಕೇವಲ ಭದ್ರತೆಗೆ ಸೀಮಿತವಾಗಿಲ್ಲ. ದೇಶದ ಹಲವು ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತದೆ" ಎಂದಿದ್ದಾರೆ.
"ಪ್ರಸ್ತುತ ಇಸ್ರೋ ತನ್ನ ಮುಂದಿನ ಮಿಷನ್ ಚಂದ್ರಯಾನ 4ಕ್ಕೆ ಸಿದ್ಧತೆ ನಡೆಸುತ್ತಿದೆ. ಈ ಮಿಷನ್ ಅಡಿಯಲ್ಲಿ, ಚಂದ್ರನ ಮೇಲ್ಮೈ ಮಾದರಿಗಳನ್ನು ಸಂಗ್ರಹಿಸಿ ಭೂಮಿಗೆ ಮಾದರಿಗಳೊಂದಿಗೆ ಹಿಂತಿರುಗಿಸುವುದು ಇದರ ಪ್ರಯತ್ನವಾಗಿದೆ. ನಂತರ ಇದನ್ನು ವಿವಿಧ ಪ್ರಯೋಗಗಳಿಗೆ ಬಳಸಲಾಗುತ್ತದೆ. ಇದು ಚಂದ್ರನ ಭೂವಿಜ್ಞಾನದ ತಿಳುವಳಿಕೆಯ ಬಗ್ಗೆ ಒಳನೋಟವನ್ನು ಸಾರುತ್ತದೆ” ಎಂದು ಹೇಳಿದರು.
ಚಂದ್ರಯಾನ, ಗಗನ್ಯಾನ್ ಭಾರತದ ಬಾಹ್ಯಾಕಾಶ ಪರಿಶೋಧನೆಯಲ್ಲಿ ಇಸ್ರೋ ಹೊಸ ಅಧ್ಯಾಯ ಬರೆಯಲು ಸಜ್ಜಾಗಿದೆ. ಇದಕ್ಕಾಗಿ ಸಕಲ ತಯಾರಿಗಳನ್ನು ಕೂಡ ನಡೆಸಿದೆ. ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಸಹಯೋಗದೊಂದಿಗೆ ಇಸ್ರೋ ಎರಡು ಪ್ರಮುಖ ಕಾರ್ಯಾಚರಣೆಗಳನ್ನು ಕೈಗೊಳ್ಳಲಿದೆ ಎಂದು ವಿ. ನಾರಾಯಣನ್ ಹೇಳಿದ್ದಾರೆ. ಇದು ಅಂತರರಾಷ್ಟ್ರೀಯ ಬಾಹ್ಯಾಕಾಶ ಪರಿಶೋಧನೆಯಲ್ಲಿ ಭಾರತದ ಪಾತ್ರವನ್ನು ಮತ್ತಷ್ಟು ಬಲಪಡಿಸಲಿದೆ.
ಇದನ್ನೂ ಓದಿ: 25ರಂದು ದಾನಮ್ಮದೇವಿಗೆ ಚಿನ್ನದ ಕಿರೀಟ ಸಮರ್ಪಣೆ
ವಿ. ನಾರಾಯಣನ್ ನೀಡಿದ ವಿವರಗಳಿಂದ ಇಸ್ರೋ ಭವಿಷ್ಯದ ಬಾಹ್ಯಾಕಾಶ ಪರಿಶೋಧನೆಯಲ್ಲಿ ಹೊಸ ಎತ್ತರವನ್ನು ಏರಲು ದಾಪುಗಾಲಿಟ್ಟಿದೆ. ರಾಷ್ಟ್ರೀಯ ಭದ್ರತೆ, ವೈಜ್ಞಾನಿಕ ಮತ್ತು ತಾಂತ್ರಿಕ ಪ್ರಗತಿ ಹಾಗೂ ನಾಗರಿಕ ಸೇವೆಗಳಲ್ಲಿ ತನ್ನ ಛಾಪು ಮೂಡಿಸಲಿದೆ ಎಂಬುದು ಮತ್ತಷ್ಟು ಸ್ಪಷ್ಟ,(ಏಜೆನ್ಸೀಸ್).