

Netanyahu : ಜಮ್ಮು-ಕಾಶ್ಮೀರದ ಪಹಲ್ಗಾಮ್ನಲ್ಲಿ ಏ.22ರಂದು ನಡೆದ ಭಯೋತ್ಪಾದಕರ ದಾಳಿಯನ್ನ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ತೀವ್ರವಾಗಿ ಖಂಡಿಸಿದ್ದಾರೆ.
ಗುರುವಾರ (ಏಪ್ರಿಲ್ 24) ಭಾರತದ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿದರು. ಭಾರತೀಯ ಜನರಿಗೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದ ನೆತನ್ಯಾಹು, ದಾಳಿಯಲ್ಲಿ ಪ್ರಾಣ ಕಳೆದುಕೊಂಡವರ ಕುಟುಂಬಗಳಿಗೆ ಸಂತಾಪ ಸೂಚಿಸಿದ್ದಾರೆ.
ಗಡಿಯಾಚೆಗಿನ ಭಯೋತ್ಪಾದಕ ದಾಳಿಯ ಕ್ರೂರ ಸ್ವರೂಪದ ಬಗ್ಗೆ ಪ್ರಧಾನಿ ಮೋದಿ ಅವರಿಗೆ ತಿಳಿಸಿದರು. ದಾಳಿಗೆ ಕಾರಣರಾದವರನ್ನು ಮತ್ತು ಅವರನ್ನು ಬೆಂಬಲಿಸುವ ಯಾರನ್ನಾದರೂ ಶಿಕ್ಷಿಸಲು ಭಾರತ ದೃಢನಿಶ್ಚಯ ಹೊಂದಿದೆ ಎಂದು ಅವರು ಹೇಳಿದರು. ಇದನ್ನು ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ:ತಹವ್ವೂರ್ ರಾಣಾಗೆ ಹಿನ್ನಡೆ; ಕುಟುಂಬದೊಂದಿಗೆ ಮಾತನಾಡಲು ಅನುಮತಿ ನಿರಾಕರಿಸಿದ ದೆಹಲಿ ನ್ಯಾಯಾಲಯ| Tahawwur rana ಜೋರ್ಡಾನ್ ರಾಜ ಅಬ್ದುಲ್ಲಾ II ಕೂಡ ಪ್ರಧಾನಿ ಮೋದಿಗೆ ಕರೆ ಮಾಡಿದರು. ಅವರು ಈ ಭೀಕರ ಭಯೋತ್ಪಾದಕ ದಾಳಿಯನ್ನು ತೀವ್ರವಾಗಿ ಖಂಡಿಸಿದರು ಮತ್ತು ಅಮಾಯಕರ ಜೀವಹಾನಿಗೆ ತಮ್ಮ ಪ್ರಾಮಾಣಿಕ ಸಂತಾಪ ಸೂಚಿಸಿದರು. ಭಯೋತ್ಪಾದನೆಯನ್ನು ಸಂಪೂರ್ಣವಾಗಿ ತಿರಸ್ಕರಿಸಬೇಕು ಮತ್ತು ಅದಕ್ಕೆ ಯಾವುದೇ ನೆಪವಿಲ್ಲ ಎಂದು ಅವರು ಹೇಳಿದ್ದಾರೆ ಎಂದು ಜೈಸ್ವಾಲ್ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.(ಏಜೆನ್ಸೀಸ್)