ಆಕಸ್ಮಿಕವಾಗಿ ಗಡಿ ದಾಟಿದ ಬಿಎಸ್‌ಎಫ್ ಯೋಧ; ವಶಕ್ಕೆ ಪಡೆದ ಪಾಕಿಸ್ತಾನ| Soldier arrest

blank

Soldier arrest | 182ನೇ ಬಿಎಸ್‌ಎಫ್ ಬೆಟಾಲಿಯನ್‌ನ ಯೋಧ ಪಿ.ಕೆ ಸಿಂಗ್ ಅವರು ಆಕಸ್ಮಿಕವಾಗಿ ಪಂಜಾಬ್ ಗಡಿ ದಾಟಿದ್ದಾರೆ. ಇನ್ನೂ ಇದನ್ನು ಕಂಡ ಪಾಕಿಸ್ತಾನ ರೇಂಜರ್ಸ್ ಪಿ.ಕೆ ಸಿಂಗ್​ ಅವರನ್ನು ಬಂಧಿಸಿದ್ದಾರೆ. ಈ ಸಂಬಂಧ ಅವರ ಸುರಕ್ಷಿತ ಬಿಡುಗಡೆಗಾಗಿ ಎರಡೂ ಪಡೆಗಳ ನಡುವೆ ಮಾತುಕತೆ ನಡೆಯುತ್ತಿದೆ.

ಇದನ್ನೂ ಓದಿ: ಭಾರತೀಯ ವಿಮಾನಯಾನಗಳಿಗೆ ವಾಯುಪ್ರದೇಶವನ್ನು ಮುಚ್ಚಿದ ಪಾಕಿಸ್ತಾನ|airspace

182ನೇ ಬಿಎಸ್‌ಎಫ್ ಬೆಟಾಲಿಯನ್‌ನ ಕಾನ್‌ಸ್ಟೆಬಲ್ ಪಿಕೆ ಸಿಂಗ್ ಎಂದು ಗುರುತಿಸಲಾದ ಯೋಧ ಭಾರತ ಹಾಗೂ ಪಾಕ್ ಗಡಿಯ ಸಮೀಪವಿರುವ ಕೃಷಿಭೂಮಿಯ ಬಳಿ ಕರ್ತವ್ಯದಲ್ಲಿದ್ದರು. ದಿನನಿತ್ಯದ ಚಲನೆಯ ಸಮಯದಲ್ಲಿ, ಸಿಂಗ್ ಅಜಾಗರೂಕತೆಯಿಂದ ಭಾರತೀಯ ಗಡಿ ಬೇಲಿಯನ್ನು ಮೀರಿ ಪಾಕಿಸ್ತಾನಿ ಪ್ರದೇಶವನ್ನು ಪ್ರವೇಶಿಸಿದ್ದಾರೆ. ಆ ಸಂದರ್ಭದಲ್ಲಿ ಅವರನ್ನು ಪಾಕಿಸ್ತಾನಿ ರೇಂಜರ್‌ಗಳು ಬಂಧಿಸಿದ್ದಾರೆ.
ಸಿಂಗ್ ಅನ್ನು ಬಂಧಿಸುವಾಗ ಅವರು ಸಮವಸ್ತ್ರದಲ್ಲಿದ್ದರು ಮತ್ತು ಅವರ ಕೈಯಲ್ಲಿ ಸರ್ವಿಸ್ ರೈಫಲ್ ಅನ್ನು ಹಿಡಿದಿದ್ದರು ಎಂದು ಹೇಳಲಾಗಿದೆ. ನೆರಳಿನಲ್ಲಿ ವಿಶ್ರಾಂತಿ ಪಡೆಯಲು ರೈತರೊಂದಿಗೆ ಹೋಗುತ್ತಿದ್ದಾಗ ಪಾಕಿಸ್ತಾನಿ ಸೈನಿಕರು ಅವರನ್ನು ವಶಕ್ಕೆ ತೆಗೆದುಕೊಂಡಿದ್ದಾಗಿ ತಿಳಿದು ಬಂದಿದೆ.

ಇದನ್ನೂ ಓದಿ:  ಗಡಿ ಭಾಗದಲ್ಲಿ ಭದ್ರತಾ ಪಡೆಗಳ ಜಂಟಿ ಕಾರ್ಯಾಚರಣೆ; ಮೂವರು ನಕ್ಸಲರು ಬಲಿ| Naxals

ಇನ್ನೂ ಪಾಕ್ ರೇಂಜರ್ಸ್​ ತುಕಡಿಯಿಂದ BSF ಯೋಧನನ್ನು ವಶಕ್ಕೆ ಪಡೆದು ಹಿಂಸಿಸಲು ಆರಂಭಿಸಿದ್ದಾರೆ. ಗಡಿ ಭದ್ರತಾ ಪಡೆ ಪಿ.ಕೆ ಸಿಂಗ್ ಅವರನ್ನು ಪಾಕಿಸ್ತಾನ ವಶಕ್ಕೆ ಪಡೆದ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹರಿಬಿಡಲಾಗಿದೆ
ಈ ಬಗ್ಗೆ ಪಾಕಿಸ್ತಾನ ರೇಂಜರ್ಸ್​ ಮುಖ್ಯಸ್ಥರ ಜೊತೆ BSF ಮುಖ್ಯಸ್ಥರು ತುರ್ತು ಸಭೆ ನಡೆಸಿದ್ದು, ತಕ್ಷಣವೇ ಭಾರತೀಯ ಯೋಧನನ್ನ ಬಿಡುವಂತೆ ಭಾರತ ಒತ್ತಾಯಿಸಿದೆ.

(ಏಜೆನ್ಸೀಸ್)

ಭಾರತೀಯ ವಿಮಾನಯಾನಗಳಿಗೆ ವಾಯುಪ್ರದೇಶವನ್ನು ಮುಚ್ಚಿದ ಪಾಕಿಸ್ತಾನ|airspace

Share This Article

ಅನಾನಸ್​ ತಿನ್ನುವುದರಿಂದ ಎಷ್ಟೆಲ್ಲಾ ಲಾಭಗಳು ಗೊತ್ತಾ! ಆರೋಗ್ಯದ ಪ್ರಯೋಜನ ತಿಳಿಯಿರಿ.. Health Tips

Health Tips : ಸಿಹಿ ಮತ್ತು ಹುಳಿ ರುಚಿಯನ್ನು ಹೊಂದಿರುವ ಆಕರ್ಷಕ ಹಳದಿ ಹಣ್ಣಾದ ಅನಾನಸ್,…

ಬೇಸಿಗೆಯಲ್ಲಿ ಕೊತ್ತಂಬರಿ, ಪುದೀನ ಒಣಗುತ್ತಿದೆಯೇ? ತಾಜಾವಾಗಿಡಲು ಈ ರೀತಿ ಮಾಡಿ | Summer

Summer: ಜನರು ಬೇಸಿಗೆಯಲ್ಲಿ ತಮ್ಮ ದೇಹವನ್ನು ತಂಪಾಗಿಡಲು ಪುದೀನ ಎಲೆಗಳನ್ನು ಹೆಚ್ಚಾಗಿ ಬಳಸುತ್ತಾರೆ. ಪುದೀನ ಮತ್ತು…

ನೀವು ತಪ್ಪದೇ ಈ ಆಹಾರಗಳನ್ನು ತಿನ್ನಲೇಬೇಕು… ಇವು ಕೆಟ್ಟ ಕೊಲೆಸ್ಟ್ರಾಲ್‌ನ ಶತ್ರುಗಳು! Cholesterol

Cholesterol : ಆರೋಗ್ಯವೇ ಭಾಗ್ಯ ಎಂಬುದು ಎಲ್ಲರಿಗೂ ಗೊತ್ತಿದೆ. ಆರೋಗ್ಯವಾಗಿರಬೇಕೆಂದರೆ, ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳಬೇಕು. ಅದರಲ್ಲೂ…