ಭಾರತೀಯ ವಿಮಾನಯಾನಗಳಿಗೆ ವಾಯುಪ್ರದೇಶವನ್ನು ಮುಚ್ಚಿದ ಪಾಕಿಸ್ತಾನ|airspace

pakisthan pm
Published on: 

airspace| ಪಾಕಿಸ್ತಾನವು 1972 ರ ಸಿಮ್ಲಾ ಒಪ್ಪಂದವನ್ನು ಅಮಾನತುಗೊಳಿಸಿದ್ದು, ಭಾರತದೊಂದಿಗಿನ ವಾಘಾ ಗಡಿಯನ್ನು ಮುಚ್ಚುವುದಾಗಿ ಘೋಷಣೆ ಮಾಡಿದೆ. ವಾಘಾ ಮೂಲಕ ಎಲ್ಲಾ ಗಡಿಯಾಚೆಗಿನ ಸಾಗಣೆಯನ್ನು ಸ್ಥಗಿತಗೊಳಿಸಲಾಗಿದೆ.

ಭಾರತವು ಗಡಿಯಾಚೆಗಿನ ಭಯೋತ್ಪಾದನೆ, ಗುರಿಯಾಗಿಸಿಕೊಂಡ ಹತ್ಯೆಗಳು ಮತ್ತು ಅಂತರರಾಷ್ಟ್ರೀಯ ಕಾನೂನು ಉಲ್ಲಂಘನೆ ಮತ್ತು ಕಾಶ್ಮೀರದ ಕುರಿತಾದ ವಿಶ್ವಸಂಸ್ಥೆಯ ನಿರ್ಣಯಗಳನ್ನು ನಿಲ್ಲಿಸುವವರೆಗೆ ಭಾರತದೊಂದಿಗಿನ ಎಲ್ಲಾ ದ್ವಿಪಕ್ಷೀಯ ಒಪ್ಪಂದಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಪಾಕಿಸ್ತಾನ ಪಿಎಂಒ ತಿಳಿಸಿದೆ.

ಭಾರತದ ಭದ್ರತಾ ಸಚಿವ ಸಂಪುಟ ಸಮಿತಿಯು ಪಾಕಿಸ್ತಾನವನ್ನು ಗುರಿಯಾಗಿಟ್ಟುಕೊಂಡು ನಿರ್ಣಾಯಕ ನಿರ್ಧಾರಗಳನ್ನು ತೆಗೆದುಕೊಂಡ ಪರಿಣಾಮ ಪಾಕಿಸ್ತಾನ ಈ ತೀರ್ಮಾನವನ್ನು ತೆಗೆದುಕೊಂಡಿದೆ.