

Israel: ಸಿರಿಯ ರಾಜಧಾನಿ ಡಮಾಸ್ಕಸ್ ಮೇಲೆ ಇಸ್ರೇಲಿ ಡ್ರೋನ್ ದಾಳಿ ನಡೆಸಿದ್ದು, ಆರು ಸಿರಿಯನ್ ಸೈನಿಕರು ಸಾವನ್ನಪ್ಪಿದ್ದಾರೆ ಸರ್ಕಾರಿ ಸ್ವಾಮ್ಯದ ಅಲ್-ಇಖ್ಬರಿಯಾ ವರದಿ ಮಾಡಿದೆ.
ಈ ದಾಳಿಯ ಬಗ್ಗೆ ಇಸ್ರೇಲ್ ಸೇನೆಯು ತಕ್ಷಣಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಡಿಸೆಂಬರ್‌ನಲ್ಲಿ ಬಶರ್ ಅಸ್ಸಾದ್ ಸರ್ಕಾರದ ಪತನದ ನಂತರ, ಇಸ್ರೇಲ್ ಸಿರಿಯದ ವಿವಿಧ ಭಾಗಗಳ ಮೇಲೆ ನೂರಾರು ವೈಮಾನಿಕ ದಾಳಿಗಳನ್ನು ನಡೆಸಿದೆ. ಅಲ್ಲದೆ, ಸಿರಿಯನ್ ಸೇನೆಯ ಆಸ್ತಿಗಳನ್ನು ಇಸ್ರೇಲ್ ನಾಶಪಡಿಸಿದೆ.
ಈ ದಾಳಿಗಳು ಡಮಾಸ್ಕಸ್ ಮತ್ತು ದಕ್ಷಿಣ ಪ್ರಾಂತ್ಯದ ಸ್ವೀಡಾ ತಲುಪಿವೆ ಎಂದು ಹೇಳಿದೆ. ಕಳೆದ ತಿಂಗಳು ಸರ್ಕಾರಿ ಪರ ಬಂದೂಕುಧಾರಿಗಳು ಮತ್ತು ಸಿರಿಯಾದ ಡ್ರೂಜ್ ಅಲ್ಪಸಂಖ್ಯಾತರ ಹೋರಾಟಗಾರರ ನಡುವೆ ಮಾರಕ ಘರ್ಷಣೆಗಳು ನಡೆದಿದೆ.
ಕಳೆದ ತಿಂಗಳು ನಡೆದ ಹೋರಾಟದ ಸಮಯದಲ್ಲಿ ಇಸ್ರೇಲ್ ಡ್ರೂಜ್ ಜನರ ಪರವಾಗಿ ಮಧ್ಯಪ್ರವೇಶಿಸಿತು. ಇಸ್ರೇಲ್ ಸೇನೆಯೂ ಡ್ರೋಜ್ ನಿಷ್ಠಾವಂತ ಅಲ್ಪಸಂಖ್ಯಾತರಾಗಿ ನೋಡಲಾಗುತ್ತದೆ. ಇದರಿಂದ ಇಸ್ರೇಲಿ ಮಿಲಿಟರಿಯಲ್ಲಿ ಸೇವೆ ಸಲ್ಲಿಸುತ್ತಾರೆ.
ಮಂಗಳವಾರವು ದಾಳಿಗೊಳಗಾದ ಸಿರಿಯನ್ ಪ್ರದೇಶವು ಸುಮಾರು ಒಂಬತ್ತು ತಿಂಗಳ ಹಿಂದೆ ಅಸ್ಸಾದ್ ಪತನಗೊಳ್ಳುವ ಮೊದಲು ಅವರ ಮಿಲಿಟರಿ ಪೋಸ್ಟ್‌ಗಳನ್ನು ಹೊಂದಿತ್ತು ಎಂದು ವೀಕ್ಷಣಾಲಯ ತಿಳಿಸಿದೆ. ಅಲ್ಲದೆ, ಸಿರಿಯನ್ ಪ್ರದೇಶದಲ್ಲಿ ಹಲವಾರು ದಾಳಿಗಳು ನಡೆದಿವೆ ಎಂದು ವೀಕ್ಷಣಾಲಯ ತಿಳಿಸಿದೆ. ಆರು ಸೈನಿಕರು ಸಾವನ್ನಪ್ಪುವುದರ ಜೊತೆಗೆ, ಮೂವರು ಗಾಯಗೊಂಡಿದ್ದಾರೆ ಎಂದು ಹೇಳಿದೆ.
ಅಲ್ಲದೆ, ದಕ್ಷಿಣ ಪಟ್ಟಣದ ಕುನೈತ್ರಾ ಬಳಿ ಇಸ್ರೇಲಿ ಡ್ರೋನ್ ದಾಳಿಯಲ್ಲಿ ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದಾನೆ ಎಂದು ಅಲ್-ಇಖ್ಬರಿಯಾ ಮತ್ತು ವೀಕ್ಷಣಾಲಯ ತಿಳಿಸಿದೆ. ಕುನೈತ್ರಾ ಬಳಿ ನಡೆದ ದಾಳಿಯನ್ನು ಸಿರಿಯಾದ ವಿದೇಶಾಂಗ ಸಚಿವಾಲಯ ಖಂಡಿಸಿದ್ದು, ಇದು ಅಂತರರಾಷ್ಟ್ರೀಯ ಕಾನೂನನ್ನು ಉಲ್ಲಂಘಿಸುತ್ತದೆ ಮತ್ತು ಈ ಪ್ರದೇಶದಲ್ಲಿ ಶಾಂತಿ ಮತ್ತು ಸ್ಥಿರತೆಗೆ ಧಕ್ಕೆ ತರುತ್ತದೆ ಎಂದು ಹೇಳಿದೆ. (ಏಜೆನ್ಸೀಸ್)