

gaza| 16 ಜನರನ್ನು ಗಾಜಾಗೆ ಸಾಗಿಸುತ್ತಿದ್ದ ಫ್ರೀಡಂ ಫ್ಲೋಟಿಲ್ಲಾ ಹಡಗಿಗೆ ಮಾಲ್ಟಾ ಕರಾವಳಿಯಲ್ಲಿ ಬೆಂಕಿ ಹೊತ್ತಿಕೊಂಡಿದೆ. ಫ್ರೀಡಂ ಫ್ಲೋಟಿಲ್ಲಾ ಒಕ್ಕೂಟ ಎಂಬ ಈ ಹಡಗು ಮಾನವ ಹಕ್ಕುಗಳ ಕಾರ್ಯಕರ್ತರನ್ನು ಹೊತ್ತು ಟುನೀಶಿಯಾದಿಂದ ಹೊರಟಿತ್ತು. ಗಾಜಾಗೆ ಹೋಗುವ ಮೊದಲು, ಹಡಗನ್ನು ಮಾಲ್ಟಾದಲ್ಲಿ ನಿಲ್ಲಿಸಲಾಗಿತ್ತು. ಸ್ವೀಡಿಷ್ ಕಾರ್ಯಕರ್ತೆ ಗ್ರೇಟಾ ಥನ್‌ಬರ್ಗ್ ಸೇರಿದಂತೆ ಸುಮಾರು 40 ಜನರನ್ನು ಕರೆದೊಯ್ಯಲು ನಿರ್ಧರಿಸಲಾಗಿತ್ತು ಎಂದು ಗುಂಪಿನ ವಕ್ತಾರೆ ಯಾಸೆಮಿನ್ ಅಕಾರ್ ಹೇಳಿದ್ದಾರೆ.
ಹತ್ತಿರದ ಟಗ್ ಹಡಗು ಸ್ಥಳಕ್ಕೆ ಧಾವಿಸಿ, ಅಗ್ನಿಶಾಮಕ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದು, ಕೆಲ ಗಂಟೆಗಳ ಬಳಿಕ, ಹಡಗು ಮತ್ತು ಅದರ ಸಿಬ್ಬಂದಿ ಸುರಕ್ಷಿತವಾಗಿದ್ದರು ಎಂದು ಹೇಳಲಾಗಿದೆ.
ಗಾಜಾಗೆ ತೆರಳುತ್ತಿದ್ದ ಹಡಗಿನ ಮೇಲೆ ಇಸ್ರೇಲಿ ಡ್ರೋನ್ ದಾಳಿ ನಡೆಸಿದೆ ಎಂದು ಎನ್‌ಜಿಒ ಆರೋಪಿಸಿದೆ. ಆದರೆ ಈ ಬಗ್ಗೆ ಇಸ್ರೇಲ್ನಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಸದ್ಯ ಈ ಘಟನೆಯಲ್ಲಿ ಯಾರಿಗೂ ಸಾವು ನೋವಾಗಿರುವ ಬಗ್ಗೆ ವರದಿಗಳಾಗಿಲ್ಲ.
(ಏಜೆನ್ಸೀಸ್)
ಇಸ್ರೇಲಿ ಅಂಕಿಅಂಶಗಳ ಪ್ರಕಾರ, 2023 ರ ಅಕ್ಟೋಬರ್ 7 ರಂದು ನಡೆದ ದಾಳಿಯಲ್ಲಿ ಹಮಾಸ್ ನೇತೃತ್ವದ ಹೋರಾಟಗಾರರು 1,200 ಜನರನ್ನು ಕೊಂದು 251 ಜನರನ್ನು ಗಾಜಾಗೆ ಒತ್ತೆಯಾಳುಗಳಾಗಿ ತೆಗೆದುಕೊಂಡ ನಂತರ ಗಾಜಾ ಯುದ್ಧ ಪ್ರಾರಂಭವಾಯಿತು. ಅಂದಿನಿಂದ ಪ್ಯಾಲೆಸ್ತೇನಿಯನ್ ಅಧಿಕಾರಿಗಳ ಪ್ರಕಾರ, ಈ ಪ್ರದೇಶದ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ 52,000 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ.