VIDEO| ಚೀನಾದಲ್ಲಿ ಇಸ್ರೇಲ್​ ರಾಜತಾಂತ್ರಿಕ ಅಧಿಕಾರಿಗೆ ಚೂರಿ ಇರಿತ

Sirael Diplomat Stabbed
Published on

ನವದೆಹಲಿ: ಹಮಾಸ್​ ಉಗ್ರರ ವಿರುದ್ಧ ಇಸ್ರೇಲ್​ ಸೇನೆ ಸತತ ಏಳನೇ ದಿನವೂ ಯುದ್ಧವನ್ನು ಮುಂದುವರೆಸಿದ್ದು, ಈ ನಡುವೆ ಚೀನಾದ ರಾಜಧಾನಿ ಬೀಜಿಂಗ್​ನಲ್ಲಿ ಇಸ್ರೇಲ್​ ರಾಯಭಾರ ಕಚೇರಿ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ವರದಿಯಾಗಿದೆ.

ಈ ಕುರಿತು ಪ್ರಕಟಣೆ ಹೊರಡಿಸಿರುವ ಇಸ್ರೇಲ್​ ವಿದೇಶಾಂಗ ಇಲಾಖೆ ದಾಳಿಯಲ್ಲಿ ಓರ್ವ ಅಧಿಕಾರಿ ಚೂರಿ ಇರಿತಕ್ಕೆ ಒಳಗಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಆರೋಗ್ಯ ಸ್ಥಿರವಾಗಿದೆ ಎಂದು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಯಾವ ಕಾರಣಕ್ಕೆ ನಮ್ಮ ರಾಯಭಾರ ಕಚೇರಿ ಸಿಬ್ಬಂದಿ ಮೇಲೆ ದಾಳಿ ಮಾಡಲಾಗಿದೆ ಎಂದು ತಿಳಿದು ಬಂದಿಲ್ಲ. ದಾಳಿಯ ಹೊಣೆಯನ್ನು ಈವರೆಗೂ ಯಾರು ಹೊತ್ತಿಲ್ಲ. ಇಸ್ಋಏಲ್​ ಹಾಗೂ ಹಮಾಸ್​ ನಡುವೆ ನಡೆಯುತ್ತಿರುವ ಯುದ್ಧದ ನಡುವೆ ಈ ಘಟನೆ ನಡೆದಿದ್ದು, ಇಸ್ರೇಲಿಗಳು ಮತ್ತು ವಿಶ್ವಾದ್ಯಂತ ಯಹೂದಿಗಳು ಜಾಗರೂಕರಾಗಿರಬೇಕು ಎಂದು ತನ್ನ ಪ್ರಕಟಣೆಯಲ್ಲಿ ಕರೆ ನೀಡಿದೆ.

ರಾಜತಾಂತ್ರಿಕ ಅಧಿಕಾರಿ ಮೇಲಿನ ದಾಳಿಯಿಂದಾಗಿ ಇಸ್ರೇಲ್​ ಹಾಗೂ ಚೀನಾ ನಡುವಿನ ಸಂಬಂಧ ಮತ್ತಷ್ಟು ಹದಗೆಟ್ಟಿದೆ. ಇಸ್ರೇಲ್​ ಹಾಗೂ ಹಮಾಸ್​ ನಡುವಿನ ಯುದ್ಧದಿಂದಾಗಿ ಈವರೆಗೂ 2700ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net