ಲೆಬನಾನ್‌ ಮೇಲೆ ಇಸ್ರೇಲ್​ ಬಾಂಬ್​ ದಾಳಿ: ಹೆಜ್ಬೊಲ್ಲಾ ಉಗ್ರರ ನೆಲೆಗಳು ನಾಶ | Israel

Benjamin Netanyahu
Published on

Israel: ದಕ್ಷಿಣ ಲೆಬನಾನ್‌ನಲ್ಲಿರುವ ಹೆಜ್ಬೊಲ್ಲಾ ಭಯೋತ್ಪಾದಕ ಸಂಘಟನೆಯು ಪುನರ್ನಿರ್ಮಿಸಲು ಹೊರಟ್ಟಿದ್ದ ಮೂಲಸೌಕರ್ಯಗಳ ನೆಲೆಗಳ ಮೇಲೆ ಇಸ್ರೇಲ್ ರಕ್ಷಣಾ ಪಡೆಗಳು ತೀವ್ರ ದಾಳಿ ನಡೆಸಿವೆ.

ಭಯೋತ್ಪಾದಕ ಸಂಘಟನೆಯು ಲೆಬನಾನ್‌ನಾದ್ಯಂತ ಭಯೋತ್ಪಾದಕ ಮೂಲಸೌಕರ್ಯಗಳನ್ನು ಪುನರ್ವಸತಿ ಮಾಡಲು ಪ್ರಯತ್ನಿಸಿದೆ ಎಂದು ಇಸ್ರೇಲಿ ಪಡೆಗಳು ಹೇಳಿಕೊಂಡಿವೆ. ಆದರೆ ಲೆಬನಾನಿನ ನಾಗರಿಕರನ್ನು ಮಾನವ ಗುರಾಣಿಗಳಾಗಿ ಬಳಸಿಕೊಂಡಿವೆ ಎಂದು ಇಸ್ರೇಲ್​ ಆರೋಪಿಸಿದೆ.

ಈ ದಾಳಿಯ ಬಗ್ಗೆ ಎಕ್ಸ್​ನಲ್ಲಿ ಪೋಸ್ಟ್ ಮಾಡಿರುವ IDF, ದಕ್ಷಿಣ ಲೆಬನಾನ್‌ನಲ್ಲಿ ಭಯೋತ್ಪಾದಕ ಮೂಲಸೌಕರ್ಯವನ್ನು ಪುನರ್ವಸತಿ ಮಾಡಲು ಬಳಸಲಾದ ಎಂಜಿನಿಯರಿಂಗ್ ಪರಿಕರಗಳನ್ನು ಸಂಗ್ರಹಿಸಲಾಗಿದ್ದ ಹಿಜ್ಬೊಲ್ಲಾ ಭಯೋತ್ಪಾದಕ ಮೂಲಸೌಕರ್ಯದ ಮೇಲೆ ಐಡಿಎಫ್ ದಾಳಿ ಮಾಡಿದೆ ಎಂದು ತಿಳಿಸಿದೆ.

ಹೆಜ್ಬೊಲ್ಲಾ ಭಯೋತ್ಪಾದಕ ಸಂಘಟನೆಯು ಲೆಬನಾನ್‌ನಾದ್ಯಂತ ಭಯೋತ್ಪಾದಕ ಮೂಲಸೌಕರ್ಯವನ್ನು ಪುನರ್ವಸತಿ ಮಾಡುವ ಪ್ರಯತ್ನಗಳನ್ನು ಮುಂದುವರೆಸಿದೆ. ಅಲ್ಲದೆ, ಅದೇ ಸಮಯದಲ್ಲಿ ಲೆಬನಾನಿನ ನಾಗರಿಕರನ್ನು ಅಪಾಯಕ್ಕೆ ಸಿಲುಕಿಸಿ ಅವರನ್ನು ಮಾನವ ಗುರಾಣಿಗಳಾಗಿ ಬಳಸುತ್ತಿದೆ. ಈ ಪ್ರದೇಶದಲ್ಲಿ ಹೆಜ್ಬೊಲ್ಲಾ ಭಯೋತ್ಪಾದಕ ಸಂಘಟನೆಯ ಉಪಕರಣಗಳ ಉಪಸ್ಥಿತಿ ಮತ್ತು ಚಟುವಟಿಕೆಯು ಇಸ್ರೇಲ್ ಮತ್ತು ಲೆಬನಾನ್ ನಡುವಿನ ತಿಳುವಳಿಕೆಯ ಉಲ್ಲಂಘನೆಯಾಗಿದೆ. ಇಸ್ರೇಲ್​ವನ್ನು ರಕ್ಷಿಸಲು ಐಡಿಎಫ್ ಕಾರ್ಯನಿರ್ವಹಿಸುವುದನ್ನು ಮುಂದುವರಿಸುತ್ತದೆ ಎಂದು IDF ಹೇಳಿದೆ.

ಈ ದಾಳಿಯಲ್ಲಿ ಬುಲ್ಡೋಜರ್‌ಗಳು ಮತ್ತು ಅಗೆಯುವ ಯಂತ್ರಗಳನ್ನು ಮಾರಾಟ ಮಾಡುವ ಪ್ರದರ್ಶನವನ್ನು ಗುರಿಯಾಗಿಸಿಕೊಂಡು ನಡೆದ ವಾಯುದಾಳಿಗಳ ಸರಣಿಯಲ್ಲಿ ಕನಿಷ್ಠ ಒಬ್ಬರು ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net