

Israel:ಇಸ್ರೇಲ್ ಸೇನೆಯು ಗಾಜಾ ನಗರದ ಮೇಲೆ ಸಂಪೂರ್ಣ ಬಲ ಪ್ರಯೋಗಿಸಿ ಕಾರ್ಯಾಚರಣೆ ನಡೆಸುವುದಾಗಿ ಶುಕ್ರವಾರ (ಸೆಪ್ಟೆಂಬರ್,19) ಎಚ್ಚರಿಸಿದೆ. ಅಲ್ಲದೆ, ಗಾಜಾದ ಜನರಿಗೆ ದಕ್ಷಿಣಕ್ಕೆ ಪಲಾಯನ ಮಾಡುವಂತೆ ಇಸ್ರೇಲ್ ಹೇಳಿದೆ.
ಗಾಜಾ ಮೇಲಿನ ದಾಳಿಯ ಬಗ್ಗೆ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅವಿಚೇ ಅಡ್ರೇ, ಈ ಕ್ಷಣದಿಂದ, ದಕ್ಷಿಣದ ಪ್ರಯಾಣಕ್ಕಾಗಿ ಸಲಾಹ್ ಅಲ್-ದಿನ್ ರಸ್ತೆಯನ್ನು ಮುಚ್ಚಲಾಗಿದೆ. ಇಸ್ರೇಲಿ ರಕ್ಷಣಾ ಪಡೆಗಳು ಹಮಾಸ್ ಮತ್ತು ಇತರ ಭಯೋತ್ಪಾದಕ ಸಂಘಟನೆಗಳ ವಿರುದ್ಧ ಸಂಪೂರ್ಣ ಬಲದೊಂದಿಗೆ ಕಾರ್ಯನಿರ್ವಹಿಸುವುದನ್ನು ಮುಂದುವರಿಸುತ್ತವೆ ಎಂದು ತಿಳಿಸಿದ್ದಾರೆ.
ದಕ್ಷಿಣಕ್ಕೆ ಇರುವ ಏಕೈಕ ಮಾರ್ಗವೆಂದರೆ ಅಲ್-ರಶೀದ್ ರಸ್ತೆ ಎಂದು ಹೇಳಿದರು ಅವಿಚೇ. ಗಾಜಾ ನಿವಾಸಿಗಳು ಈ ಅವಕಾಶವನ್ನು ಪಡೆದುಕೊಳ್ಳಿ ಮತ್ತು ದಕ್ಷಿಣದಲ್ಲಿರುವ ಮಾನವೀಯ ಪ್ರದೇಶಕ್ಕೆ ಸ್ಥಳಾಂತರವಾಗಿ, ಅಲ್ಲರುವ ಲಕ್ಷಾಂತರ ನಿವಾಸಿಗಳೊಂದಿಗೆ ಸೇರಲು" ಒತ್ತಾಯಿಸಿದರು.
ಇಸ್ರೇಲಿ ಸೇನೆಯು ಪ್ಯಾಲೆಸ್ಟೀನಿಯನ್ನರನ್ನು ಅಲ್-ಮವಾಸಿಯ ದಕ್ಷಿಣ ಕರಾವಳಿ ಪ್ರದೇಶದಲ್ಲಿರುವ ಮಾನವೀಯ ಪ್ರದೇಶಕ್ಕೆ ತೆರಳುವಂತೆ ಒತ್ತಾಯಿಸಿದೆ. ಅಲ್ಲಿ ಜನರಿಗೆ ನೆರವು, ವೈದ್ಯಕೀಯ ಆರೈಕೆ ಮತ್ತು ಮಾನವೀಯ ಮೂಲಸೌಕರ್ಯಗಳನ್ನು ಒದಗಿಸಲಾಗುವುದು ಎಂದು ಇಸ್ರೇಲ್ ಹೇಳುತ್ತಿದೆ.
ಅಲ್ಲದೆ, ಯುದ್ಧದ ಆರಂಭದಲ್ಲಿ ಇಸ್ರೇಲ್ ಈ ಪ್ರದೇಶವನ್ನು ಸುರಕ್ಷಿತ ವಲಯವೆಂದು ಘೋಷಿಸಿತು. ಆದರೆ. ಅಂದಿನಿಂದ ಅಲ್-ಮವಾಸಿಯ ಮೇಲೆ ಪದೇ ಪದೇ ದಾಳಿ ನಡೆಸಿದೆ. ಇದು ಹಮಾಸ್ ಅನ್ನು ಗುರಿಯಾಗಿಸಿಕೊಂಡಿದೆ ದಾಳಿ ಮಾಡಲಾಗುತ್ತಿದೆ ಎಂದು ಇಸ್ರೇಲ್ ತಿಳಿಸಿದೆ. (ಏಜೆನ್ಸೀಸ್)