

Controversy: ನಾಯಿ ಮಾಂಸ' ವಿವಾದಕ್ಕೆ ಸಂಬಂಧಿದಂತೆ ಇದೀಗ ಭಾರತೀಯ ಕ್ರಿಕೆಟ್ನ ಮಾಜಿ ಆಟಗಾರ ಇರ್ಫಾನ್ ಪಠಾಣ್ ವಿರುದ್ಧ ಪಾಕ್ ಮಾಜಿ ನಾಯಕ ಶಾಹಿದ್ ಅಫ್ರಿದಿ ಮತ್ತೊಮ್ಮೆ ಆಕ್ರೋಶ ಹೊರ ಹಾಕಿದ್ದಾರೆ.
ಹೌದು, ಇತ್ತೀಚಿಗೆ ದುಬೈನಲ್ಲಿ ನಡೆದ ಏಷ್ಯಾಕಪ್-2025ರ ಭಾರತ- ಪಾಕ್ ನಡುವಿನ ಪಂದ್ಯದಲ್ಲಿ ನೋ-ಹ್ಯಾಂಡ್ಶೇಕ್ ವಿಚಾರ ಮಾತನಾಡುವಾಗ ಇರ್ಫಾನ್ ವಿರುದ್ಧ ಕಿಡಿಕಾರಿದ್ದಾರೆ.
ವಿವಾದಾತ್ಮಕ ಹೇಳಿಕೆಗಳನ್ನು ನೀಡುವುದಕ್ಕೆ ಹೆಸರುವಾಸಿಯಾಗಿರುವ ಅಫ್ರಿದಿ, ಪಠಾಣ್ ತಮ್ಮ ವಿರುದ್ಧ ಕೆಲವು ಹೇಳಿಕೆಗಳನ್ನು ನೀಡಿದ್ದಾರೆ ಎಂಬುದನ್ನು ಸಂಪೂರ್ಣವಾಗಿ ನಿರಾಕರಿಸಿದರು ಮತ್ತು ತಮ್ಮೊಂದಿಗೆ ಮುಖಾಮುಖಿಯಾಗಿ ಮಾತನಾಡಲು ಸವಾಲು ಹಾಕಿದರು. ನನ್ನ ಮುಂದೆ ಯಾರು ಮಾತನಾಡಬಲ್ಲರು, ನಾನು ಕೂಡ ಪರಿಪೂರ್ಣ ಉತ್ತರವನ್ನು ನೀಡಬಲ್ಲೆ ಎಂದು ಅಫ್ರಿದಿ ಪಾಕಿಸ್ತಾನಿ ಟಿವಿ ಚಾನೆಲ್‌ನಲ್ಲಿ ಹೇಳಿದ್ದಾರೆ.
2006ರಲ್ಲಿ ಇಬ್ಬರು ಕ್ರಿಕೆಟಿಗರ ನಡುವಿನ ಬಿಸಿ ಸಂಭಾಷಣೆಯನ್ನು ಪಠಾಣ್ ಬಹಿರಂಗಪಡಿಸಿದಾಗ ವಿವಾದ ಪ್ರಾರಂಭವಾಯಿತು.
"2006ರ ಪ್ರವಾಸದ ಸಮಯದಲ್ಲಿ, ನಾವು ಕರಾಚಿಯಿಂದ ಲಾಹೋರ್‌ಗೆ ವಿಮಾನದಲ್ಲಿ ಹೋಗಿದ್ದೆವು. ಎರಡೂ ತಂಡಗಳು ಒಟ್ಟಿಗೆ ಪ್ರಯಾಣಿಸುತ್ತಿದ್ದವು. ಅಫ್ರಿದಿ ಬಂದು ನನ್ನ ತಲೆಯ ಮೇಲೆ ಕೈ ಇಟ್ಟು ನನ್ನ ಕೂದಲನ್ನು ಹಾಳು ಮಾಡಿದರು. ನಾನು ಹೇಗಿದ್ದೇನೆ ಎಂದು ಅವರು ನನ್ನನ್ನು ಕೇಳಿದರು" ಎಂದು ಪಠಾಣ್ ತಿಳಿಸಿದರು.
"ಆಗ ಅಬ್ದುಲ್ ರಜಾಕ್ ನನ್ನ ಜೊತೆ ಕುಳಿತಿದ್ದರು. ನಾನು ಅವರನ್ನು ಕೇಳಿದೆ ಇಲ್ಲಿ ಯಾವ ರೀತಿಯ ಮಾಂಸ ಲಭ್ಯವಿದೆ ಎಂದು. ಅವರು ವಿವಿಧ ಪ್ರಾಣಿಗಳ ಮಾಂಸ ಲಭ್ಯವಿದೆ ಎಂದು ಹೇಳಿದರು. ಇದಾದ ನಂತರ, ನಾನು ನಾಯಿ ಮಾಂಸ ಲಭ್ಯವಿದೆಯೇ ಎಂದು ಕೇಳಿದೆ. ನನ್ನ ಮಾತು ಕೇಳಿ ರಜಾಕ್ ಆಶ್ಚರ್ಯಚಕಿತರಾದರು ಮತ್ತು ನನ್ನ ಹೇಳಿಕೆಯ ಹಿಂದಿನ ಕಾರಣವನ್ನು ಕೇಳಿದರು. ''ನಾನು ಅಫ್ರಿದಿಯ ಕಡೆಗೆ ಬೆರಳು ತೋರಿಸಿ ಅವನು ನಾಯಿ ಮಾಂಸ ತಿಂದಿದ್ದಾನೆ, ಅದಕ್ಕಾಗಿಯೇ ಅವನು ಒಂದೇ ರೀತಿ ಬೊಗಳುತ್ತಿದ್ದಾನೆ" ಎಂದು ಪಠಾಣ್ ಸಂದರ್ಶನೊಂದರಲ್ಲಿ ಹೇಳಿದ್ದರು. ಇದೀಗ ಇದೇ ವಿಚಾರವನ್ನು ಮತ್ತೆ ಸಂದರ್ಶಕರು ಕೇಳಿದಾದ ಅಫ್ರಿದಿ, ಇರ್ಫಾನ್ ವಿರುದ್ಧ ಕಿಡಿ ಕಾರಿದ್ದಾರೆ.