ಯೆಮೆನ್‌ ಹೊಡೈಡಾ ಬಂದರಿನ ಮೇಲೆ ವೈಮಾನಿಕ ದಾಳಿ ನಡೆಸಿದ ಇಸ್ರೇಲ್​| Israel

Air Defences, Israel
Published on

Israel: ಇರಾನ್ ಬೆಂಬಲಿತ ಹೌತಿ ಬಂಡುಕೋರರು ವಾಯು ರಕ್ಷಣೆಯನ್ನು ಸಕ್ರಿಯಗೊಳಿಸುತ್ತಿದ್ದಂತೆ ಇಸ್ರೇಲ್ ಯೆಮೆನ್​ನ ಹೊಡೈಡಾ ಮೇಲೆ ವೈಮಾನಿಕ ದಾಳಿ ನಡೆಸಿದೆ.

ಈ ದಾಳಿಯ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಇಸ್ರೇಲ್​, ಹುದೈದಾ ಬಂದರನ್ನು ಹೌತಿ ಭಯೋತ್ಪಾದಕ ಆಡಳಿತವು ಇರಾನ್​ ಪೂರೈಸಿದ ಶಸ್ತ್ರಾಸ್ತ್ರಗಳನ್ನು ವರ್ಗಾವಣೆ ಮಾಡಲು ಬಳಸುತ್ತದೆ. ಇಸ್ರೇಲ್ ಮತ್ತು ಅದರ ಮಿತ್ರರಾಷ್ಟ್ರಗಳ ವಿರುದ್ಧ ದಾಳಿ ನಡೆಸಲು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಈ ದಾಳಿಯ ಬಗ್ಗೆ ಪ್ರತಿಕ್ರಿಯಿಸಿರುವ ಹೌತಿ ವಕ್ತಾರೆ ಯಯ್ಹಾ ಸಾರಿ, ನಮ್ಮ ದೇಶದ ವಿರುದ್ಧ ಆಕ್ರಮಣ ನಡೆಸುತ್ತಿರುವ ಇಸ್ರೇಲಿ ವಿಮಾನಗಳನ್ನು ನಮ್ಮ ವಾಯು ರಕ್ಷಣಾ ಪಡೆಗಳು ಪ್ರಸ್ತುತ ಎದುರಿಸುತ್ತಿವೆ ಎಂದು ಹೇಳಿದ್ದಾರೆ.

ಮುಂದುವರೆದು ಮಾತನಾಡಿದ ಸಾರಿ, ಹೌತಿ ವಾಯು ರಕ್ಷಣಾ ಪಡೆಗಳು ಇಸ್ರೇಲಿ ವಿಮಾನಗಳಿಗೆ ದೊಡ್ಡ ಗೊಂದಲ ಉಂಟುಮಾಡಿದವು ಮತ್ತು ದಾಳಿಗಳನ್ನು ನಡೆಸುವ ಮೊದಲು ಯುದ್ಧ ರಚನೆಗಳು ಯೆಮೆನ್ ವಾಯುಪ್ರದೇಶವನ್ನು ತೊರೆಯುವಂತೆ ಮಾಡಿದವು ಎಂದಿದ್ದಾರೆ. ಯೆಮೆನ್‌ನ ಇಸ್ರೇಲ್‌ನ ಆಕ್ರಮಣವನ್ನು ವಿಫಲಗೊಳಿಸಿದವು ಎಂದು ತಿಳಿಸಿದ್ದಾರೆ.

ಕಳೆದ ವಾರ ಯೆಮೆನ್​ ಮೇಲೆ ದಾಳಿ ಮಾಡಿದ್ದ ಇಸ್ರೇಲ್

ಕಳೆದ ವಾರ ಯೆಮೆನ್ ರಾಜಧಾನಿ ಸನಾದ ಮೇಲೆ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ 31 ಮಂದಿ ಮೃತಪಟ್ಟಿದ್ದರು. ಆದರೆ,ಕಳೆದ ಬುಧವಾರ ಹೌತಿಗಳು ಹಾರಿಸಿದ ಡ್ರೋನ್ ಇಸ್ರೇಲ್‌ನ ವಾಯು ರಕ್ಷಣೆಯನ್ನು ಭೇದಿಸಿ ದಕ್ಷಿಣ ಇಸ್ರೇಲಿ ವಿಮಾನ ನಿಲ್ದಾಣಕ್ಕೆ ಡಿಕ್ಕಿ ಹೊಡೆದು ಗಾಜಿನ ಕಿಟಕಿಗಳನ್ನು ಸ್ಫೋಟಿಸಿ ಒಬ್ಬ ವ್ಯಕ್ತಿ ಗಾಯಗೊಂಡ ನಂತರ ಈ ದಾಳಿಗಳು ನಡೆದಿದೆ.

ಸನಾದ ಮೇಲೆ ಇಸ್ರೇಲ್​ ನಡೆಸಿದ ದಾಳಿಯಲ್ಲಿ ಪತ್ರಕರ್ತರು ಸೇರಿದಂತೆ 12ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿತ್ತು. ಇದರಲ್ಲಿ ವಸತಿ ಪ್ರದೇಶಗಳು, ಮಿಲಿಟರಿ ಪ್ರಧಾನ ಕಚೇರಿ ಮತ್ತು ಇಂಧನ ಕೇಂದ್ರವೂ ಸೇರಿವೆ ಎಂದು ತಿಳಿದು ಬಂದಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net