ಕಾಂಗ್ರೆಸ್​ ಒಳನುಸುಳುಕೋರರನ್ನು ರಕ್ಷಿಸಿ, ಚುನಾವಣೆಯನ್ನು ಗೆಲ್ಲಲು ಪ್ರಯತ್ನಿಸುತ್ತಿದೆ: ಗೃಹ ಸಚಿವ ಅಮಿತ್ ಶಾ ಟೀಕೆ| Amit Shah

Amit Shah 17
Published on

Amit Shah: ಪ್ರಧಾನಿ ನರೇಂದ್ರ ಮೋದಿ ಸರ್ಜಿಕಲ್ ಸ್ಟ್ರೈಕ್ ಮೂಲಕ ದೇಶದ ಗಡಿಗಳ ಸುರಕ್ಷತೆಯನ್ನು ಖಚಿತಪಡಿಸಿಕೊಂಡು ಆಪರೇಷನ್ ಸಿಂಧೂರದ ಮೂಲಕ ಪಾಕಿಸ್ತಾನಕ್ಕೆ ಸೂಕ್ತ ಉತ್ತರ ನೀಡಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಬುಧವಾರ (ಸೆಪ್ಟೆಂಬರ್​,17) ಹೇಳಿದ್ದಾರೆ.

ಈ ಬಗ್ಗೆ ದೆಹಲಿಯಲ್ಲಿ ಮಾತನಾಡಿದ ಶಾ, ಮತದಾರರ ಪಟ್ಟಿಯನ್ನು ಶುದ್ಧೀಕರಿಸಲು ವಿಶೇಷ ತೀವ್ರ ಪರಿಷ್ಕರಣೆ (SIR) ಅನ್ನು ಬಿಜೆಪಿ ಬೆಂಬಲಿಸುತ್ತದೆ ಎಂದು ತಿಳಿಸಿದ್ದಾರೆ. ಅಲ್ಲದೆ, ಬಿಹಾರದಲ್ಲಿ ಕಾಂಗ್ರೆಸ್​ ನಡೆಸಿದ ಮತದಾರರ ಅಧಿಕಾರ ಯಾತ್ರೆಯನ್ನು ಶಾ ಟೀಕಿಸಿದ್ದು, ಒಳನುಸುಳುಕೋರರನ್ನು ರಕ್ಷಿಸುತ್ತಿದ್ದಾರೆ ಎಂದು ಗುಡುಗಿದ್ದಾರೆ.

ಮುಂದುವರೆದು ಮಾತನಾಡಿದ ಶಾ, ಕಾಂಗ್ರೆಸ್​ ಭಾರತದ ಜನರನ್ನು ನಂಬುವುದಿಲ್ಲ. ಆದರೆ, ಒಳನುಸುಳುವವರ ಆಧಾರದ ಮೇಲೆ ಚುನಾವಣೆಗಳನ್ನು ಗೆಲ್ಲಲು ಬಯಸುತ್ತಾರೆ. ಏಕೆಂದರೆ, ರಾಹುಲ್​ಒಳನುಸುಳುವವರು ನಮ್ಮ ಮತದಾರರ ಪಟ್ಟಿಯಲ್ಲಿ ಉಳಿಯಬೇಕೆಂದು ಬಯಸುತ್ತಾರೆ. ಬಿಜೆಪಿ SIR ಮತ್ತು ಮತದಾರರ ಪಟ್ಟಿಗಳನ್ನು ತೆರವುಗೊಳಿಸುವ ಅಭಿಯಾನವನ್ನು ಬೆಂಬಲಿಸುತ್ತದೆ ಎಂದು ಅಮಿತ್ ಶಾ ತಿಳಿಸಿದ್ದಾರೆ.

ಬಿಹಾರದಲ್ಲಿ ಎಸ್‌ಐಆರ್‌ ಅನ್ನು ನಡೆಸಲಾಗುತ್ತಿರುವ ಬಗ್ಗೆ ವಿರೋಧ ಪಕ್ಷಗಳು ಅನುಮಾನ ವ್ಯಕ್ತಪಡಿಸುತ್ತಿದ್ದವೆ. ಕಳೆದ ವಾರ, ವಿಪಕ್ಷ ನಾಯಕ ರಾಹುಲ್ ಗಾಂಧಿ ಮತ ಕಳ್ಳತನದ ಬಗ್ಗೆ ಸ್ಫೋಟಕ ಪುರಾವೆಯನ್ನು ಪ್ರಸ್ತುತಪಡಿಸುವುದಾಗಿ ಹೇಳಿದ್ದರು. ಅಲ್ಲದೆ, ಆಡಳಿತಾರೂಢ ಎನ್‌ಡಿಎ ಸರ್ಕಾರವನ್ನು ಮತಗಳನ್ನು ಕದಿಯುವ ಮೂಲಕ ರಚಿಸಲಾಗಿದೆ ಎಂದು ರಾಹುಲ್​ ಆರೋಪ ಮಾಡಿದ್ದರು.

ಪಾಕ್​ ಬಗ್ಗೆ ಮೋದಿ ಹೇಳಿದ್ದೇನು..?

ಇದಕ್ಕೂ ಮೊದಲು ಮಾತನಾಡಿದ ಪ್ರಧಾನಿ ಮೋದಿ, ಜೈಶ್-ಎ-ಮೊಹಮ್ಮದ್ ಕಮಾಂಡರ್‌ನ ತಪ್ಪೊಪ್ಪಿಗೆ ವೀಡಿಯೊವನ್ನು ಉಲ್ಲೇಖಿಸಿ, ಭಾರತವು ಕಣ್ಣು ರೆಪ್ಪೆಗೂದಲಿನೊಳಗೆ ಪಾಕಿಸ್ತಾನವನ್ನು ಮಂಡಿಯೂರಿಸಿದ ಎಂದು ಆಪರೇಷನ್ ಸಿಂಧೂರದ ಯಶಸ್ಸಿಗೆ ಸೇನೆಯನ್ನು ಶ್ಲಾಘಿಸಿದರು. ನಿನ್ನೆಯಷ್ಟೇ, ರಾಷ್ಟ್ರ ಮತ್ತು ಜಗತ್ತು ಮತ್ತೊಬ್ಬ ಪಾಕಿಸ್ತಾನಿ ಭಯೋತ್ಪಾದಕನನ್ನು ಅಳುವುದು ಮತ್ತು ಅವನ ಸ್ಥಿತಿಯನ್ನು ಬಹಿರಂಗಪಡಿಸುವುದನ್ನು ನೋಡಿದೆ. ಇದು ಹೊಸ ಭಾರತ - ಯಾರ ಪರಮಾಣು ಬೆದರಿಕೆಗಳಿಗೆ ಹೆದರುವುದಿಲ್ಲ ಎಂದು ಪಾಕ್​ಗೆ ಎಚ್ಚರಿಕೆ ನೀಡಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net