

Gaza: ಇಸ್ರೇಲ್ ರಕ್ಷಣಾ ಪಡೆಗಳು ನಡೆಸಿದ ದಾಳಿಯಲ್ಲಿ ಹಮಾಸ್(Hamas) ಅಭಿವೃದ್ದಿ ಮತ್ತು ಯೋಜನೆಗಳ ವಿಭಾಗಗಳ ಕಮಾಂಡರ್ ಬಶರ್ ಥಾಬೆಟ್(Bashar Thabet) ನನ್ನು ಶಸ್ತ್ರಾಸ್ತ್ರ ಉತ್ಪಾದನಾ ಕಚೇರಿಯೊಳಗೆ ಕೊಂದಿರುವುದಾಗಿ ಐಡಿಎಫ್(Israel Defense Forces) ಹೇಳಿದೆ. ಹಮಾಸ್ನ ಶಸ್ತ್ರಾಸ್ತ್ರ ಉತ್ಪಾದನಾ ಉಪಕರಣದಲ್ಲಿ ಸಂಶೋಧನೆ ಮತ್ತು ಅಭಿವೃದ್ದಿಗೆ ಥಾಬೆಟ್ ಜವಾಬ್ದಾರನಾಗಿದ್ದನು ಎಂದು ವರದಿಯಾಗಿದೆ.
ಈ ಕಾರ್ಯಚರಣೆಯ ಬಗ್ಗೆ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ IDF ಪಡೆಗಳು ಭಯೋತ್ಪಾದಕರ ಮೂಲಸೌಕರ್ಯಗಳು ಮತ್ತು ಸುರಂಗ ಮಾರ್ಗಗಳನ್ನು ಪತ್ತೆಹಚ್ಚಿ ನಾಶ ಮಾಡಿವೆ. IDF ಪಡೆಗಳ ಮೇಲೆ ದಾಳಿ ಮಾಡಲು ಹೊರಟಿದ್ದ ಭಯೋತ್ಪಾದಕರನ್ನು ಹೊಡೆದುರುಳಿಸಿದೆ. ಭಯೋತ್ಪಾದಕರ ಮಿಲಿಟರಿ ಪ್ರದೇಶದಲ್ಲಿ ಹಾಗೂ ಹೆಚ್ಚುವರಿ ಉಗ್ರರ ಮೂಲಸೌಕರ್ಯ ಸೇರಿದಂತೆ ಸುಮಾರು 75 ನೆಲೆಗಳನ್ನು ನಾಶವಾಗಿವೆ ಎಂದು IDF ಹೇಳಿದೆ.
ಅಲ್ಲದೇ, ಭದ್ರತಾ ಪಡೆಗಳು ನಡೆಸಿದ ಕಾರ್ಯಚರಣೆಯಲ್ಲಿ ಹಮಾಸ್ನ ಅಭಿವೃದ್ದಿ ವಿಭಾಗದ ಶಸ್ತ್ರಾಸ್ತ್ರ ಉತ್ಪಾದನಾ ಕಚೇರಿಯೊಳಗೆ ಕೊಂದಿರುವುದಾಗಿ IDF ತಿಳಿಸಿದೆ. ಹಮಾಸ್ನ ಶಸ್ತ್ರಾಸ್ತ್ರ ಉತ್ಪಾದನಾ ಉಪಕರಣದೊಳಗಿನ ಸಂಶೋಧನೆ ಮತ್ತು ಅಭಿವೃದ್ದಿಗೆ ಜವಾಬ್ದಾರರಾಗಿದ್ದರು. ಇದು ಹಮಾಸ್ನ ಶಸ್ತ್ರಾಸ್ತ್ರಗಳ ದಾಸ್ತಾನು ಪುನಃಸ್ಥಾಪಿಸಲು ಮತ್ತು ಹೆಚ್ಚಿಸಲು ಕಾರ್ಯನಿರ್ವಹಿಸುತ್ತದೆ ಎಂದು IDF ತಿಳಿಸಿದೆ.