ಇಸ್ರೇಲ್-ಹಮಾಸ್ ಯುದ್ಧ; ಟ್ರಂಪ್ ಜೊತೆಗಿನ ಮಾತುಕತೆಯಲ್ಲಿ ಗಾಜಾ ಶಾಂತಿ ಒಪ್ಪಂದಕ್ಕೆ ಒಪ್ಪಿದ ಇಸ್ರೇಲ್ ಪ್ರಧಾನಿ |Gaza peace deal

Untitled design - 2025-09-30T074452.230
Published on

Gaza peace deal: ಕಳೆದ 2 ವರ್ಷಗಳಿಂದ ನಡೆಯುತ್ತಿರುವ ಇಸ್ರೇಲ್ ಮತ್ತು ಪ್ಯಾಲೆಸ್ಟೈನ್​ನ ಹಮಾಸ್ ಉಗ್ರರ ನಡುವಿನ ಯುದ್ಧ ಕೊನಗೊಳ್ಳುವ ಹಂತಕ್ಕೆ ಬಂದಿದೆ. ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜೊತೆಗಿನ ಮಾತುಕತೆಯಲ್ಲಿ ಗಾಜಾ ಶಾಂತಿ ಒಪ್ಪಂದಕ್ಕೆ  ಸೋಮವಾರ(ಸೆ. 30) ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಒಪ್ಪಿಕೊಂಡಿದ್ದಾರೆ.

ಶ್ವೇತಭವನದಲ್ಲಿ ನೆತನ್ಯಾಹು ಜೊತೆ ಸುದ್ದಿಗೋಷ್ಠಿ ನಡೆಸಿದ ಡೊನಾಲ್ಡ್ ಟ್ರಂಪ್, ಗಾಜಾ ಶಾಂತಿ ಒಪ್ಪಂದವನ್ನು ಘೋಷಿಸಿದ್ದಾರೆ. ಗಾಜಾದಲ್ಲಿ ಶಾಂತಿ ಸ್ಥಾಪಿಸುವ ಗುರಿ ಬಹಳ ಹತ್ತಿರದಲ್ಲಿದೆ. 20 ಅಂಶಗಳ ಯೋಜನೆಯಡಿಯಲ್ಲಿ ಇಸ್ರೇಲ್ ಮುತ್ತಿಗೆ ಹಾಕಿದ ಪಟ್ಟಿಯಿಂದ ಹಂತ ಹಂತಗಳಲ್ಲಿ ಹಿಂದೆ ಸರಿಯುತ್ತದೆ. ಯುದ್ಧವನ್ನು ಕೊನೆಗೊಳಿಸುವ ಶಾಂತಿ ಒಪ್ಪಂದಕ್ಕೆ ಒಪ್ಪಿಕೊಂಡಿದ್ದಕ್ಕಾಗಿ ಇಸ್ರೇಲ್‌ಗೆ ಧನ್ಯವಾದ ಅರ್ಪಿಸಿದರು. ಹಾಗೂ ಹಮಾಸ್ ಸಂಘಟನೆ ಕೂಡ ಅದನ್ನು ಸ್ವೀಕರಿಸುತ್ತದೆ ಎಂದು ತಾವು ಭಾವಿಸುವುದಾಗಿ ಹೇಳಿದ್ದಾರೆ.

ಇಸ್ರೇಲ್ ಪಡೆಗಳು ಪ್ಯಾಲೆಸ್ಟೀನಿಯನ್ ಪ್ರದೇಶದಿಂದ ಹಂತ ಹಂತವಾಗಿ ಹಿಂದೆ ಸರಿಯಲು ಸಮಯ ನಿಗದಿಪಡಿಸಲಾಗುವುದು. ಗಾಜಾದಲ್ಲಿ ಹೊಸ ಪರಿವರ್ತನಾ ಪ್ರಾಧಿಕಾರದೊಂದಿಗೆ ಕೆಲಸ ಮಾಡುವುದರಿಂದ, ಇಸ್ರೇಲ್ ಸೇನೆ ಹಂತ ಹಂತವಾಗಿ ಹಿಂದೆ ಸರಿಯಲು ಎಲ್ಲರೂ ಕೆಲಸ ಮಾಡುತ್ತಾರೆ ಎಂದು ತಿಳಿಸಿದ್ದಾರೆ.

ಶಾಂತಿ ಒಪ್ಪಂದದ ಬಗ್ಗೆ ಹಮಾಸ್ ಇನ್ನೂಣ ಅನುಮೋದನೆ ನೀಡಿಲ್ಲ. ಅದು ಕೂಡ ಈ ಒಪ್ಪಂದದ ಪರವಾಗಿರಲಿದೆ ಎಂದು ಆಶಿಶುವೆ. ಒಂದು ವೇಳೆ ಹಮಾಸ್ ಈ ಒಪ್ಪಂದವನ್ನು ತಿರಸ್ಕರಿಸಿದರೆ ಅದನ್ನು ನಾಶ ಮಾಡಲು ಇಸ್ರೇಲ್​ಗೆ ತನ್ನ ಸಂಪೂರ್ಣ ಬೆಂಬಲ ನೀಡುವುದಾಗಿ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ.

ದಿ ಟೈಮ್ಸ್ ಆಫ್ ಇಸ್ರೇಲ್ ಮತ್ತು ಯುಎಸ್ ಸುದ್ದಿ ತಾಣ ಆಕ್ಸಿಯೋಸ್ ಪ್ರಕಾರ , ಟ್ರಂಪ್ ಅವರ ಈ 20 ಅಂಶಗಳ ಒಪ್ಪಂದವೂ ತಕ್ಷಣದ ಕದನ ವಿರಾಮ, ಹಂತ ಹಂತವಾಗಿ ಇಸ್ರೇಲಿ ಸೇನೆಯನ್ನು ಹಿಂತೆಗೆದುಕೊಳ್ಳುವಿಕೆ ಹಾಗೂ 48 ಗಂಟೆಗಳ ಒಳಗೆ ಒತ್ತೆಯಾಳುಗಳನ್ನು ಬಿಡುಗಡೆ ಮಾಡುವಂತೆ ಸೂಚಿಸುತ್ತದೆ. ಬಳಿಕ ಇಸ್ರೇಲ್ ಸಹ ಸಾವಿರಕ್ಕೂ ಹೆಚ್ಚು ಪ್ಯಾಲಸ್ಟೈನ್ ಕೈದಿಗಳನ್ನು ಬಿಡುಗಡೆ ಮಾಡುತ್ತದೆ ಎಂದು ಎನ್ನಲಾಗಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net