

ಜೆರುಸಲೇಮ್: ಇಂದು ಮುಂಜಾನೆಯೇ ಇರಾನ್ ಮೇಲೆ ಪ್ರತಿಕಾರ ತೀರಿಸಿಕೊಳ್ಳಲು ಸಜ್ಜಾದ ಇಸ್ರೇಲ್, ಇರಾನ್ನ ಟೆಹರಾನ್ ಸೇರಿದಂತೆ ಹಲವು ಪ್ರದೇಶಗಳ ಮೇಲೆ ಕ್ಷಿಪಣಿ ದಾಳಿ ನಡೆಸಿದೆ. ಇದರೊಟ್ಟಿಗೆ ಇರಾನ್ ಸೇನಾ ನೆಲೆಗಳನ್ನು (Military Targets) ಗುರಿಯಾಗಿಸಿಕೊಂಡ ಇಸ್ರೇಲ್ ಕ್ಷಿಪಣಿ, ಇದೀಗ ಮಿಲಿಟರಿ ಪಡೆಯನ್ನು ಧ್ವಂಸಗೊಳಿಸಿದೆ.
ಅಕ್ಟೋಬರ್ 01ರಂದು ಇರಾನ್ ನಡೆಸಿದ್ದ ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳಲು ಕಾದು ಕುಳಿತ್ತಿದ್ದ ಇಸ್ರೇಲ್, ಇಂದು ಇರಾನ್ನ ಸೇನಾ ನೆಲೆಯನ್ನೇ ಪ್ರಮುಖ ಟಾರ್ಗೆಟ್ ಮಾಡಿಕೊಂಡು, ಟೆಹ್ರಾನ್ ಹಾಗೂ ಅನೇಕ ನಗರ ಪ್ರದೇಶಗಳ ಮೇಲೆ ಕ್ಷಿಪಣಿ ದಾಳಿ ನಡೆಸಿದೆ.
ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗಿದೆ...