Israel: ತೀವ್ರಗೊಂಡ ವೈಮಾನಿಕ ದಾಳಿ.. ಬೀರುಟ್​ ಮೇಲೆ ಬಾಂಬ್​ಗಳ ಸುರಿಮಳೆ - 100ಕ್ಕೂ ಹೆಚ್ಚು ಸಾವು

hijbulla
isrel bomb
Published on

ಜೆರೂಸಲೇಂ: ಲೆಬನಾನ್​ನ ರಾಜಧಾನಿ ಬೀರುಟ್​ನಲ್ಲಿ ಹಿಜ್ಬುಲ್ಲಾದ ನಾಯಕ ಹಸನ್ ನಸ್ರಲ್ಲಾನನ್ನು ಇಸ್ರೇಲ್(Israel) ಕೊಂದ ನಂತರ ಈ ಪ್ರದೇಶವು ಮತ್ತಷ್ಟು ದಾಳಿಗಳಿಗೆ ಗುರಿಯಾಗಿದೆ.

ಬೀರುಟ್​ ಮೇಲೆ ಇಸ್ರೇಲ್​(Israel) ವಾಯುದಾಳಿ ಉಲ್ಬಣಗೊಂಡಿದ್ದು, ಹಿಜ್ಬುಲ್ಲಾ ಗುರಿಗಳ ಮೇಲೆ ಭಾರಿ ವೈಮಾನಿಕ ದಾಳಿ ನಡೆಸಲಾಗಿದೆ. ಇಸ್ರೇಲಿ ಬಾಂಬ್ ದಾಳಿಯಲ್ಲಿ ಕನಿಷ್ಠ 105 ಜನರು ಸಾವನ್ನಪ್ಪಿದ್ದಾರೆ ಮತ್ತು 359 ಜನರು ಗಾಯಗೊಂಡಿದ್ದಾರೆ ಎಂದು ಲೆಬನಾನ್​ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.

ಸೆಪ್ಟೆಂಬರ್ 29 ರಂದು ಬೀರುಟ್ ನಲ್ಲಿ ಹಿಜ್ಬುಲ್ಲಾ ನಾಯಕ ಹಸನ್ ನಸ್ರಲ್ಲಾ ಅವರನ್ನು ಕೊಂದ ಇಸ್ರೇಲ್​ ಹಿಜ್ಬುಲ್ಲಾ ನೆಲೆಗಳನ್ನೇ ಗುರಿಯಾಗಿಸಿಕೊಂಡು ವೈಮಾನಿಕ ದಾಳಿ ತೀವ್ರಗೊಳಿಸಿದೆ. ಇದರೊಂದಿಗೆ ಲೆಬನಾನ್ ಮತ್ತೊಂದು ರಕ್ತಸಿಕ್ತ ಅಧ್ಯಾಯಕ್ಕೆ ಸಾಕ್ಷಿಯಾಗಿದೆ.

ಪಟ್ಟುಬಿಡದ

ಭಾನುವಾರ ಮತ್ತು ರಾತ್ರಿಯಿಡೀ ಸೋಮವಾರದವರೆಗೆ ಲೆಬನಾನ್‌ನಾದ್ಯಂತ ವಾಯು ದಾಳಿಗಳು ನಡೆದ ಬಗ್ಗೆ ವರದಿಯಾಗಿವೆ. ಗುರಿಗಳು ಬೀರುಟ್​ ಹೃದಯಭಾಗವನ್ನೇ ಕೇಂದ್ರೀಕರಿಸಿವೆ ಇದು ಯುದ್ಧ ಖಚಿತವಾಗುವುದರ ಸೂಚನೆಯಾಗಿದೆ ಎನ್ನಲಾಗುತ್ತಿದೆ.

ಡಜನ್‌ಗಟ್ಟಲೆ ಹಿಜ್ಬುಲ್ಲಾ ನೆಲೆಗಳ ಮೇಲೆ ದಾಳಿ ಮಾಡಿರುವುದಾಗಿ ಇಸ್ರೇಲ್ ಹೇಳಿದರೆ, ದಕ್ಷಿಣ ಲೆಬನಾನ್, ಬೆಕಾ ಕಣಿವೆ, ಬಾಲ್‌ಬೆಕ್-ಹೆರ್ಮೆಲ್ ಗವರ್ನರೇಟ್ ಮತ್ತು ಬೀರುಟ್​ ನ ದಕ್ಷಿಣ ಉಪನಗರಗಳಲ್ಲಿ ಮನೆಗಳು ಮತ್ತು ಕಟ್ಟಡಗಳ ಮೇಲೆ ಬಾಂಬ್ ದಾಳಿ ನಡೆದಿದೆ ಎಂದು ಲೆಬನಾನಿನ ಅಧಿಕಾರಿಗಳು ಹೇಳಿದ್ದಾರೆ.

ಲೆಬನಾನಿನ ರಾಜಕಾರಣಿಗಳು ದಾಳಿಗಳನ್ನು "ಹತ್ಯಾಕಾಂಡ" ಎಂದು ವಿವರಿಸಿದ್ದಾರೆ. ಸೋಮವಾರ ಮುಂಜಾನೆ, ಮಧ್ಯ ಬೀರುಟ್​ನ ಕೋಲಾ ಸೇತುವೆ ಪ್ರದೇಶದಲ್ಲಿ ಇಸ್ರೇಲಿ ದಾಳಿ ನಡೆದ ವರದಿಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net