

ನವದೆಹಲಿ: ರಾಷ್ಟ್ರದ ನೌಕಾಪಡೆಯ ಮಾಹಿತಿ ಸಂಗ್ರಹಿಸಲು ಪಾಕಿಸ್ತಾನದ ಬೇಹುಗಾರಿಕೆ ಸಂಸ್ಥೆ ಐಎಸ್ಐ ಮಹಿಳೆಯರನ್ನು ಬಳಸಿಕೊಂಡಿದೆ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ ತನಿಖೆಯಿಂದ ಪತ್ತೆಯಾಗಿದೆ.
ಆಂಧ್ರಪ್ರದೇಶ ಪೊಲೀಸ್ ಮತ್ತು ಕೇಂದ್ರ ಗುಪ್ತಚರ ಸಂಸ್ಥೆ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಡಿಸೆಂಬರ್ನಲ್ಲಿ ಬಂಧಿತರಾದ 10 ಮಂದಿ ನಾವಿಕರನ್ನು ವಿಚಾರಣೆಗೊಳಪಡಿಸಿದ ವೇಳೆ ಈ ಮಾಹಿತಿ ಬಹಿರಂಗಗೊಂಡಿದೆ.
ಮಹಿಳೆಯರೊಂದಿಗೆ ಸಂಪರ್ಕ ಸಾಧಿಸಿದ್ದ ಸಿಬ್ಬಂದಿ ತಮ್ಮ ಉದ್ಯೋಗ ಹಾಗೂ ಇತರ ಮಾಹಿತಿಗಳನ್ನು ಮಾತ್ರ ಹಂಚಿಕೊಂಡಿದ್ದಾರೆ. ಮಾಹಿತಿ ಹಂಚಿಕೊಂಡ ಸಿಬ್ಬಂದಿಗೆ ಹಣ ಪಾವತಿಯಾಗಿದೆ. ನೌಕಾಪಡೆಯ ಸೂಕ್ಷ್ಮ ಹಾಗೂ ಗೌಪ್ಯತೆ ಮಾಹಿತಿಗಳನ್ನು ಅವರು ಹಂಚಿಕೊಂಡಿಲ್ಲ ಎಂದು ತನಿಖೆಯಿಂದ ತಿಳಿದು ಬಂದಿದೆ.
ದೇಶವಿಶಾಖಪಟ್ಟಣಂನ ಈಸ್ಟರ್ನ್ ನೇವಲ್ ಕಮಾಂಡ್ ಹಾಗೂ ಮುಂಬೈನ ವೆಸ್ಟರ್ನ್ ಕಮಾಂಡ್ನ ಹಡಗುಗಳು ಅಥವಾ ಜಲಾಂತರ್ಗಾಮಿ ನೌಕೆಗಳ ಸಿಬ್ಬಂದಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆಯೇ ಎಂಬುದನ್ನು ಕೂಡ ವಿಚಾರಣೆಗೆ ಒಳಪಡಿಸಲಾಗಿದೆ. ಮಾಹಿತಿ ಹಂಚಿಕೊಂಡಿರುವ ಸಿಬ್ಬಂದಿ 2015ರ ನಂತರ ನೌಕಾಪಡೆಗೆ ಸೇರಿದ್ದಾರೆ ಎಂದು ತಿಳಿದು ಬಂದಿದೆ. (ಏಜೆನ್ಸೀಸ್)