ತೆಲಂಗಾಣ ಸಿಎಂ ಎಚ್ಚರಿಕೆ ಸಂದೇಶ ಕೇಳಿ ನಿಬ್ಬೆರಗಾದ ಬಾಲಿವುಡ್​ ನಟಿ ಸೋನಮ್​ ಕಪೂರ್​!

Sonam
Published on

ಹೈದರಾಬಾದ್​: ಮಹಾಮಾರಿ ಕರೊನಾ ವೈರಸ್​ ಸೋಂಕು ತಡೆಗಟ್ಟಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಲಾಕ್​ಡೌನ್​ ಸೇರಿದಂತೆ ಅನೇಕ ಕ್ರಮಗಳನ್ನು ತೆಗದುಕೊಂಡಿವೆ. ಈ ಮಧ್ಯೆ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್​ ರಾವ್​ ಹೇಳಿಕೆಗೆ ಬಾಲಿವುಡ್​ ನಟಿ ಸೋನಮ್​ ಕಪೂರ್​ ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಕರೊನಾ ನಿಯಂತ್ರಣಕ್ಕೆ ಹೇರಲಾಗಿರುವ ಲಾಕ್​ಡೌನ್​ ಅನ್ನು ಉಲ್ಲಂಘಿಸಿದರೆ ಆರ್ಮಿಯನ್ನು ಕರೆಯಿಸಿ ಕಂಡಲ್ಲಿ ಗುಂಡಿಕ್ಕುವ ಆದೇಶವನ್ನು ನೀಡಬೇಕಾಗುತ್ತದೆ ಎಂದು ಸಿಎಂ ಚಂದ್ರಶೇಖರ್​ ರಾವ್​ ಅವರು ಆದೇಶ ಉಲ್ಲಂಘಿಸುತ್ತಿರುವ ಜನರಿಗೆ ನಿನ್ನೆ ಎಚ್ಚರಿಕೆ ನೀಡಿದ್ದಾರೆ.

ತೆಲಂಗಾಣ ಸಿಎಂ ಹೇಳಿಕೆಗೆ ಟ್ವೀಟ್​ ಮೂಲಕ ಪ್ರತಿಕ್ರಿಯಿಸಿರುವ ಸೋನಮ್​, ನಿಜಕ್ಕೂ ನಾನು ಗೊಂದಲಕ್ಕೀಡಾದೆ... ಇದು ಸಾಮಾನ್ಯವೇ? ಎಂದು ಆಶ್ಚರ್ಯವನ್ನು ವ್ಯಕ್ತಪಡಿಸಿದ್ದಾರೆ.

ಕರೊನಾ ತಡೆಗಟ್ಟಲು ತೆಲಂಗಾಣದಲ್ಲಿ ಬೆಳಗ್ಗೆ 7 ರಿಂದ ಸಂಜೆ 6 ಗಂಟೆಯವರೆಗೆ ಕರ್ಪ್ಯೂ ಹೇರಲಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net