More

    ಕರೊನಾ ಸೋಂಕಿತ ಬಾಲಿವುಡ್​ ಸಿಂಗರ್​ ಕನ್ನಿಕಾ ಇದ್ದಕ್ಕಿದ್ದಂತೆ ಇನ್​ಸ್ಟಾಗ್ರಾಂ ಪೋಸ್ಟ್​ ಡಿಲೀಟ್​ ಮಾಡಿದ್ದೇಕೆ?

    ನವದೆಹಲಿ: ಮಾರಕ ಕರೊನಾ ಸೋಂಕು ತಗುಲಿರುವುದಾಗಿ ಇನ್​ಸ್ಟಾಗ್ರಾಂ ಪೋಸ್ಟ್ ಮೂಲಕ ಘೋಷಣೆ ಮಾಡಿದ್ದ ಬಾಲಿವುಡ್​ ಪ್ರಖ್ಯಾತ ಗಾಯಕಿ ಕನ್ನಿಕಾ ಕಪೂರ್​ ಇದೀಗ ಆ ಪೋಸ್ಟ್​ ಅನ್ನೇ ಖಾತೆಯಿಂದ ಡಿಲೀಟ್​ ಮಾಡಿದ್ದಾರೆ.

    ಸೆಲೆಬ್ರಿಟಿಗಳಲ್ಲೇ ಕನ್ನಿಕಾ ಅವರದ್ದು ಮೊದಲ ಪ್ರಕರಣವಾಗಿದೆ. ಸೋಂಕು ತಗುಲಿದೆ ಎಂದು ತಿಳಿದುಬಂದಾಗಿನಿಂದ ಅವರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಟೀಕಾ ಪ್ರಹಾರಗಳು ಕೇಳಿಬರುತ್ತಿವೆ. ಲಂಡನ್​ನಿಂದ ಮರಳಿದ ಕನ್ನಿಕಾ ಸಾಕಷ್ಟು ಮುನ್ನೆಚ್ಚಾರಿಕಾ ಕ್ರಮಗಳನ್ನು ತೆಗೆದುಕೊಳ್ಳಲಿಲ್ಲ ಎಂಬ ಅಸಮಾಧಾನದ ಮಾತುಗಳು ಕೇಳಿಬರುತ್ತಿವೆ. ಹೀಗಾಗಿ ಪೋಸ್ಟ್​ ಡಿಲೀಟ್​ ಮಾಡಿದ್ದಾರೆ ಎಂದು ತಿಳಿದುಬಂದಿದೆ.

    ನಾನು ಮತ್ತು ನನ್ನ ಕುಟುಂಬ ಸಂಪೂರ್ಣವಾಗಿ ಕ್ವಾರಂಟೈನ್​ನಲ್ಲಿ ಇದ್ದೇವೆ. ವೈದ್ಯಕೀಯ ಸಲಹೆಯನ್ನು ಪಡೆದುಕೊಳ್ಳುತ್ತಿದ್ದೇವೆ. ನನ್ನೊಂದಿಗೆ ಸಂಪರ್ಕದಲ್ಲಿದ್ದ ಜನರನ್ನು ಪತ್ತೆಹಚ್ಚುವ ಕೆಲಸ ನಡೆಯುತ್ತಿದೆ ಎಂದು ಇನ್​ಸ್ಟಾಗ್ರಾಂನಲ್ಲಿ ಕನ್ನಿಕಾ ಬರೆದುಕೊಂಡಿದ್ದರು.

    ನಿನ್ನೆಯಷ್ಟೇ ಮೂರನೇ ಬಾರಿಯು ಕನ್ನಿಕಾ ಅವರಲ್ಲಿ ಕೋವಿಡ್​ 19 ಇರುವುದು ಧೃಡಪಟ್ಟಿದೆ. ಅಲ್ಲದೆ, ಕರೊನಾ ಸೋಂಕಿತ ಪ್ರಿನ್ಸ್​ ಚಾರ್ಲ್ಸ್​ ಅವರೊಂದಿಗಿನ ಕನ್ನಿಕಾ ಅವರ ಹಳೆಯ ಫೋಟೋ ವೈರಲ್​ ಆಗಿದ್ದು, ತೀವ್ರ ಟೀಕೆಗಳು ವ್ಯಕ್ತವಾಗುತ್ತಿವೆ.

    ಕನ್ನಿಕಾ ಎರಡು ವಾರಗಳ ಹಿಂದಷ್ಟೇ ಯುಕೆ ಇಂದ ಭಾರತಕ್ಕೆ ವಾಪಾಸ್ಸಾದರು. ಮಾರ್ಚ್​ 9ರಂದು ಲಂಡನ್​ನಿಂದ ಮುಂಬೈಗೆ ಮರಳಿದ ಕನ್ನಿಕಾ ಬಳಿಕ ಕೆಲ ಕಾರ್ಯಕ್ರಮಗಳಲ್ಲಿ ಭಾಗಿಯಾಗಲು ಲಖನೌಗೆ ತೆರಳಿದರು. ಈ ಕಾರ್ಯಕ್ರಮದಲ್ಲಿ ಅನೇಕ ರಾಜಕಾರಣಿಗಳು ಸಹ ಭಾಗಿಯಾಗಿದ್ದರು. ಸೋಂಕಿನ ಬಗ್ಗೆ ಮುಚ್ಚಿಟ್ಟ ಆರೋಪದ ಮೇಲೂ ಕನ್ನಿಕಾ ವಿರುದ್ಧ ಪ್ರಕರಣ ದಾಖಲಾಗಿದೆ. (ಏಜೆನ್ಸೀಸ್​)

    ಸಿಎಂ ಯೋಗಿ ಆದಿತ್ಯನಾಥ್​ ಸೂಚನೆಯಂತೆ ಬಾಲಿವುಡ್​ ಸಿಂಗರ್​ ಕನ್ನಿಕಾ ಕಪೂರ್​ ವಿರುದ್ಧ ಎಫ್​ಐಆರ್​ ದಾಖಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts