

Rude Behaviour With Air Hostess: ಸಿಂಗಾಪುರದಿಂದ ವಿಶಾಖಪಟ್ಟಣಕ್ಕೆ ಹಾರುತ್ತಿದ್ದ ವಿಮಾನದಲ್ಲಿ ಪ್ರಯಾಣಿಕರೊಬ್ಬರು ತಮ್ಮ 4 ಗಂಟೆಯ ಪ್ರಯಾಣದಲ್ಲಿ ಅವರಿಗಾದ ಅನಪೇಕ್ಷಿತ ಅನುಭವವನ್ನು ಹಂಚಿಕೊಂಡಿದ್ದು, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.
40 ರ ಹರೆಯದ ವ್ಯಕ್ತಿಯೊಬ್ಬ ವಿಮಾನದಲ್ಲಿ ಪ್ರಯಾಣಿಸುವ ವೇಳೆ ಅಲ್ಲಿನ ಏರ್ ಹೋಸ್ಟೇಟ್ ಜೊತೆ ಅನುಚಿತವಾಗಿ ವರ್ತಿಸಿದನು. ಅಷ್ಟೇ ಅಲ್ಲ. ವಿಮಾನದಲ್ಲಿ ಅಸಭ್ಯ ವರ್ತನೆ ನಡೆಸಿ ಅಲ್ಲಿನ ಪ್ರಯಾಣಿಕರಿಗೆ ತೊಂದರೆ ನೀಡಿದ್ದಾನೆ. ನಂತರ ವಿಮಾನವು ವಯಾಜಾಗ್ನಲ್ಲಿ ಇಳಿದ ತಕ್ಷಣ ಈತನನ್ನು ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿಗಳು ವಶಕ್ಕೆ ಪಡೆದರು ಎಂದು ರೆಡ್ಡಿಟ್ ಬಳಕೆದಾರೊಬ್ಬರು ಹೇಳಿದ್ದಾರೆ.
ಸಿಂಗಾಪುರದಿಂದ ವೈಜಾಗ್ಗೆ 4 ಗಂಟೆಗಳ ವಿಮಾನ ಪ್ರಯಾಣ. ಇಲ್ಲಿ ಓರ್ವ ತೆಲಗು ವ್ಯಕ್ತಿ ಅವನ ಪತ್ನಿಯೊಂದಿಗೆ ಕೊನೆಯ ಸೀಟಿನಲ್ಲಿ ಕೂತಿದ್ದನು. ವಿಮಾನ ಸುರಕ್ಷತಾ ಪ್ರಕಟನೆಗಳು ಪ್ರಾರಂಭವಾದಾಗ ಆರೋಪಿ ನೀರು ತುಂಬಿಸಿಕೊಡುವಂತೆ ವಿನಂತಿಸಿದರು. ಅದಕ್ಕೆ ಪ್ರತಿಕ್ರಯಿಸಿದ ಗಗನಸಖಿ ಪ್ರಕಟನೆಗಳು ನಡೆಯುತ್ತಿವೆ ಸ್ವಲ್ಪ ಸಮಯ ಕಾಯಿರಿ ಎಂದು ವಿನಂತಿಸಿದರು. ಈ ಮಾತಿಗೆ ಆ ವ್ಯಕ್ತಿ ಕೋಪದಿಂದ ಓಹ್, ನಾವು ಭಾರತೀಯರು, ಅದಕ್ಕಾಗಿಯೇ ನೀವು ಹೀಗೆ ವರ್ತಿಸುತ್ತಿದ್ದೀರಿ, ಸರಿಯೇ? ಎಂದು ಆರೋಪ ಮಾಡಿದ್ದಾನೆ.
ಇನ್ನು ರೆಡ್ಡಿಟ್ ಬಳಕೆದಾರ ಸೂಚಿಸುವಂತೆ ಈತ ಪದೇ ಪದೇ ವಾಶ್ ರೂಂ ಗೆ ಹೋಗುತ್ತಿದ್ದನು. ನಂತರ ಇನ್ನೊಬ್ಬ ಪ್ರಯಾಣಿಕ ವಾಶ್ರೂಂ ಗೆ ಹೋದಾಗ ಅಲ್ಲಿ ಉಸಿರುಗಟ್ಟಿದ ಅನುಭವ ಆಗಿರುವುದರ ಬಗ್ಗೆ ದೂರು ನೀಡಿದರು. ಏರ್ ಹೋಸ್ಟೇಸ್ ಪರಿಸ್ಥಿತಿಯನ್ನು ಪರಿಶೀಲಿಸಿದಾಗ ಅಲ್ಲಿ ಆರೋಪಿ ವಾಂತಿ ಮಾಡಿ ಶೌಚಾಲಯವನ್ನು ಗಲೀಜು ಮಾಡಿದ್ದಾನೆ ಎಂದು ಅರಿತುಕೊಂಡಿದ್ದಾರೆ. ಹೀಗೆ ಅವರು ತೆಲಗು ವ್ಯಕ್ತಿಗೆ ವಾಂತಿ ಮಾಡಲು ಚೀಲ ನೀಡಿದರು. ಆದರೆ, ಆತ ಅದನ್ನು ನಿರಾಕರಿಸಿದನು ಎಂದು ತಿಳಿಸಿದ್ದಾರೆ.
ಆ ವ್ಯಕ್ತಿ "ನಾನು ಚೆನ್ನಾಗಿದ್ದೇನೆ, ನಾನು ಚೆನ್ನಾಗಿದ್ದೇನೆ. ನನಗೆ ಇದೆಲ್ಲಾ ಬೇಕಾಗಿಲ್ಲ" ಎಂದು ಹೇಳುತ್ತಲೇ ಇದ್ದ. ನಂತರ ಆ ವ್ಯಕ್ತಿ ಈ ವಿಮಾನ ಎಲ್ಲಿಗೆ ಹೋಗುತ್ತಿದೆ ಎಂದು ನಿನಗೆ ತಿಳಿದಿದೆಯೇ, ಎಂದು ಗಗನಸಖಿಗೆ ಕೇಳಿದನು. ಅದಕ್ಕೆ ಏರ್ ಹೋಸ್ಟೆಸ್, "ನೀವು ವಿಮಾನವನ್ನು ಎಲ್ಲಿಗೆ ಬುಕ್ ಮಾಡಿದ್ದೀರಿ ಎಂದು ಕೇಳಿದಳು. ಅದಕ್ಕೆ ಅಸಭ್ಯವಾಗಿ ಪ್ರತಿಕ್ರಿಯಿಸದ ಈತ ನಾನು ಯಾರೆಂದು ನಿನಗೆ ತಿಳಿದಿಲ್ಲ, ನಾನು ನಿನ್ನ ಮೇಲೆ ಮೊಕದ್ದಮೆ ಹೂಡುತ್ತೇನೆ ಎಂದು ಹೇಳಿ ಬೆದರಿಕೆ ಹಾಕಿದನು. ಆಗ ಏರ್ ಹೋಸ್ಟೆಸ್ ಮೌನವಾಗಿದ್ದು, ತನ್ನ ಕೆಲಸವನ್ನು ಮಾಡಲು ಪ್ರಾರಂಭಿಸಿದಳು.
ವಿಮಾನವು ವೈಜಾಗ್ಗೆ ತಲುಪಿದ ನಂತರ, ವಿಮಾನ ಸಿಬ್ಬಂದಿ ಪ್ರಯಾಣಿಕರನ್ನು ಕುಳಿತುಕೊಳ್ಳಲು ಕೇಳಿಕೊಂಡರು. ಈ ವೇಳೆ ಈ ಒಳಗೆ ಬಂದ ಸಿಬ್ಬಂದಿ ಆತನನ್ನು ಪೊಲೀಸರ ಬಳಿ ಕರೆದೊಯ್ದಿದ್ದಾರೆ. ಅವನ ವರ್ತನೆಯಿಂದ ಅಸಹ್ಯಗೊಂಡ ಬಳಕೆದಾರ ಎಲ್ಲಾ ಪ್ರಯಾಣಿಕರ ಪರವಾಗಿ, ಕ್ಷಮೆಯಾಚಿಸಿ ಎಲ್ಲಾ ಭಾರತೀಯರು ಅವನಂತೆ ಅಲ್ಲ ಎಂದು ಸ್ಪಷ್ಟಪಡಿಸಿದನು.ಇದಾದ ಬಳಿಕ ಆ ವ್ಯಕ್ತಿಯನ್ನು ಸ್ಕೂಟ್ ಏರ್ಲೈನ್ಸ್ನಿಂದ ಐದು ವರ್ಷಗಳ ಕಾಲ ಪ್ರಯಾಣಿಸಲು ನಿಷೇಧಿಸಲಾಗಿದೆ ಎಂದು ಬಳಕೆದಾರ ಹಂಚಿಕೊಂಡಿದ್ದಾನೆ. (ಏಜೆನ್ಸೀಸ್)