ಸಲ್ಮಾನ್ ಖಾನ್ ಮನೆಯಿಂದ ಮತ್ತೊಬ್ಬ ಸ್ಟಾರ್ ಬಾಲಿವುಡ್​​ಗೆ ಎಂಟ್ರಿ!

salman
Published on

ಮುಂಬೈ: ಬಾಲಿವುಡ್ ಇಂಡಸ್ಟ್ರಿಯಲ್ಲಿ ಕಪೂರ್, ಖಾನ್ ಮತ್ತು ಭಟ್ ಕುಟುಂಬಗಳದ್ದೇ ಮಾತು. ಪ್ರತಿ ವರ್ಷ ಈ ಕುಟುಂಬದ ಒಬ್ಬರಲ್ಲ ಒಬ್ಬರು ಸ್ಟಾರ್ಸ್ ಖಂಡಿತ ಇಂಡಸ್ಟ್ರಿಗೆ ಎಂಟ್ರಿ ಕೊಡ್ತಾರೆ. ಆದ್ದರಿಂದಲೇ ಹಲವು ಬಾರಿ ನೆಪೊಟಿಸಂ ಆರೋಪ ಕೇಳಿ ಬಂದಿದೆ.

ಇತ್ತೀಚೆಗಷ್ಟೇ ಸಲ್ಮಾನ್ ಖಾನ್ ತಮ್ಮ ಕುಟುಂಬದಿಂದ ನಟಿಯೊಬ್ಬರನ್ನು ಇಂಡಸ್ಟ್ರಿಗೆ ಪರಿಚಯಿಸಿದ್ದರು. ಈಗ ಸಲ್ಮಾನ್ ಖಾನ್ ಅರ್ಬಾಜ್ ಖಾನ್ ಮತ್ತು ಮಲೈಕಾ ಅರೋರಾ ಅವರ ಪುತ್ರ ಅರ್ಹಾನ್ ಅವರನ್ನು ಕೂಡ ಇಂಡಸ್ಟ್ರಿಗೆ ಪರಿಚಯಿಸಲಿದ್ದಾರೆ ಎಂಬ ಸುದ್ದಿ ಬರುತ್ತಿದೆ. ಇದೀಗ ಈ ಸುದ್ದಿಯ ಬಗ್ಗೆ ಅರ್ಹಾನ್ ತಂದೆ ಅರ್ಬಾಜ್ ಖಾನ್ ಅವರನ್ನು ಕೇಳಿದಾಗ ಅವರು ಏನು ಹೇಳಿದ್ದಾರೆ ಗೊತ್ತಾ?

ಅರ್ಹಾನ್ ಬಾಲಿವುಡ್‌ಗೆ ಎಂಟ್ರಿ ಕೊಡ್ತಾರಾ?
ಅರ್ಹಾನ್ ಖಾನ್ ಕೂಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಲಿದ್ದಾರೆಯೇ ಎಂದು ಕೇಳಿದಾಗ, ಅರ್ಬಾಜ್ ಖಾನ್ ಇದನ್ನು ನಿರಾಕರಿಸಿದರು. ಅಷ್ಟೇ ಅಲ್ಲ, ಹೌದು, ಈ ವದಂತಿ ನನ್ನ ಕಿವಿಗೂ ತಲುಪಿದೆ. ಆದರೆ ಇನ್ನೂ ಅದರಲ್ಲಿ ಯಾವುದೇ ಸತ್ಯವಿಲ್ಲ ಎಂದು ಹೇಳಿದರು. ಅರ್ಹಾನ್ ನಟನೆಯನ್ನು ಇಷ್ಟಪಡುತ್ತಿದ್ದರೂ ಪ್ರಸ್ತುತ ತರಬೇತಿ ಪಡೆಯುತ್ತಿದ್ದಾರೆ ಎಂದರು.

ಅರ್ಹಾನ್ ತರಬೇತಿ ಪಡೆಯುತ್ತಿರುವ ಆಧಾರದ ಮೇಲೆ, ಅವರು ಚಿತ್ರರಂಗಕ್ಕೆ ಬರಲು ಬಯಸುತ್ತಾರೆ ಎಂಬುದು ಖಚಿತವಾಗಿದೆ. ಫಿಲ್ಮ್ ಸ್ಕೂಲ್ ನಲ್ಲಿ ತರೆಬೇತಿ ಪಡೆಯುತ್ತಿರುವ ಅರ್ಹಾನ್ ಇತರ ಕೆಲಸದ ಜೊತೆಗೆ ಅಲ್ಲಿ ನಟನೆಯನ್ನೂ ಅಭ್ಯಾಸ ಮಾಡುತ್ತಿದ್ದಾರೆ. ಸದ್ಯ ತಮ್ಮ ವೃತ್ತಿಜೀವನದತ್ತ ಗಮನ ಹರಿಸಿದ್ದಾರೆ ಎಂಬುದು ತಿಳಿದುಬಂದಿದೆ.

ಅರ್ಬಾಜ್ ಅವರು ಹೇಳುವಂತೆ, "ಅರ್ಹಾನ್ ಚಿಕ್ಕ ಹುಡುಗ. ಈಗ 22 ವರ್ಷ. ಸದ್ಯ ತಮ್ಮ ಫ್ಯೂಚರ್ ಪ್ಲಾನ್ ಮಾಡುತ್ತಿದ್ದು, ತುಂಬಾ ಶ್ರಮಶೀಲ, ಪ್ರಾಮಾಣಿಕ ಮತ್ತು ಡೆಡಿಕೇಟೆಡ್ ಮಗು. ಎಲ್ಲವೂ ಸರಿಯಾಗಿ ನಡೆದರೆ, ಅವನ ಅದೃಷ್ಟ ಅವನ ಕಡೆಗಿದೆ, ಅವನ ಪ್ರಯತ್ನದಿಂದಾಗಿ ಅವನು ಯಶಸ್ವಿಯಾಗುತ್ತಾನೆ ಎಂದು ನನಗೆ ಖಾತ್ರಿಯಿದೆ" ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net