ಹುಡುಕಿದ್ರೂ ಸಿಗ್ತಿಲ್ಲ ನಟ ಪ್ರಭಾಸ್​ ಇನ್​ಸ್ಟಾಗ್ರಾಂ ಖಾತೆ!; ಇದು ಹ್ಯಾಕರ್​ಗಳ ಕೈಚಳಕವೆ?

Untitled design - 2023-10-15T161147.418
Published on

ಆಂಧ್ರಪ್ರದೇಶ: ಟಾಲಿವುಡ್​ನ ರೆಬೆಲ್​ ಸ್ಟಾರ್​, ಡಾರ್ಲಿಂಗ್​ ಪ್ರಭಾಸ್​ ಅಭಿನಯದ ಪ್ಯಾನ್​ ಇಂಡಿಯಾ ಸಿನಿಮಾ 'ಸಲಾರ್'​ ಈ ವರ್ಷದ ಕೊನೆಯ  ವಾರದಲ್ಲಿ ಬಿಡುಗಡೆಗೂ ಸಜ್ಜಾಗಿದ್ದು, ಈ ಮಧ್ಯೆ ಫ್ಯಾನ್ಸ್​ ತಮ್ಮ ನೆಚ್ಚಿನ ನಟನಿಂದ ಯಾವುದಾದರೂ ಹೊಸ ಅಪ್ಡೇಟ್​ ಸಿಗಲಿದೆಯಾ? ಕುತೂಹಲಕಾರಿ ಸಂಗತಿಗಳು ಅಥವಾ ಫೋಟೋ ಹಂಚಿಕೊಳ್ಳಲಿದ್ದಾರಾ ಎಂದು ಯೋಚಿಸುವಷ್ಟರಲ್ಲೇ ದೊಡ್ಡ ಶಾಕ್​ವೊಂದು ಎದುರಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ನಟ ಪ್ರಭಾಸ್​ ಹೆಚ್ಚಾಗಿ ಸಕ್ರಿಯರಾಗಿರುವುದಿಲ್ಲ. ಆದ್ರೆ, ಸಿನಿಮಾ ಕುರಿತಂತೆ ತಮ್ಮ ಇನ್​​ಸ್ಟಾಗ್ರಾಂ ಮತ್ತು ಇತರೆ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಆಗಾಗ್ಗೆ ಅಭಿಮಾನಿಗಳೊಂದಿಗೆ ಮಾಹಿತಿ ಹಂಚಿಕೊಳ್ಳುತ್ತಾರೆ.

ಇದೀಗ ನಟನ ಇನ್​ಸ್ಟಾಗ್ರಾಂ ಖಾತೆಯಲ್ಲಿ ಹೊಸ ಅಪ್ಡೇಟ್​ ಏನಿದೆ ಎಂದು ಚೆಕ್ ಮಾಡಲು ಹೋದಾಗ ಅಚ್ಚರಿಯೊಂದು ಎದುರಾಗಿದ್ದು, ಪ್ರಭಾಸ್​ ಅಧಿಕೃತ ಖಾತೆ ನಾಪತ್ತೆಯಾಗಿದೆ. ಇದು ಡಿಯಾಕ್ಟಿವೇಟ್​ ಆಗಿರಬಹುದಾ ಅಥವಾ ಹ್ಯಾಕರ್​ಗಳ ಕೈಚಳಕ ಇರಬಹುದಾ? ಎಂಬ ಪ್ರಶ್ನೆಗಳು ಸದ್ಯ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಈ ಕಾರಣಗಳನ್ನು ಮೀರಿ ಸ್ವತಃ ಪ್ರಭಾಸ್​ ಅವರೇ ತಮ್ಮ ಖಾತೆಯನ್ನು ಡಿಯಾಕ್ಟಿವೇಟ್​ ಮಾಡಿರಬಹುದೇ ಎಂದು ಹಲವು ಬಳಕೆದಾರರು ಊಹಿಸಿದ್ದಾರೆ. ಸದ್ಯ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರಬೀಳದೆ ಇದ್ದರೂ ಖುದ್ದಾಗಿ ಪ್ರಭಾಸ್​ ಸ್ಪಷ್ಟನೆ ಕೊಡಲಿದ್ದಾರಾ ಎಂಬುದನ್ನು ನಿರೀಕ್ಷಿಸಬೇಕಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net