ಹುಲಿ ಹುಲ್ಲು ತಿನ್ನಲ್ಲ ಅನ್ನೋದು ಸುಳ್ಳು? ಬೆಕ್ಕು-ನಾಯಿಗಳಿಗೂ ಬೇಕು ಹಸಿರು ಗರಿಕೆ: ಯಾಕೆ ಗೊತ್ತಾ? | Tigers eating grass

Tigers, Dogs and cat eating grass
ಮಾಂಸಾಹಾರಿ ಪ್ರಾಣಿಗಳೂ ಹುಲ್ಲು ತಿನ್ನುವುದು ಏಕೆ?
Published on: 

Animal Behavior: ‘ಹುಲಿ ಹುಲ್ಲು ತಿನ್ನಲ್ಲ’ ಎನ್ನುವ ಮಾತಿದೆ. ಈ ಮಾಂಸಾಹಾರಿ ಪ್ರಾಣಿಗಳಾದ ಹುಲಿ, ನಾಯಿ ಮತ್ತು ಬೆಕ್ಕುಗಳು ಮಾಂಸ ಬಿಟ್ಟು ಹುಲ್ಲು ತಿನ್ನುವುದನ್ನು ಎಲ್ಲಾದರೂ ನೋಡಿದ್ದೀರಾ? 'ಇವೇನು ಮಾಂಸ ಬಿಟ್ಟು ಹುಲ್ಲು ಮೇಯ್ತಿವೆಯಲ್ಲಾ' ಅಂತ ನಿಮಗೂ ಅನಿಸಿರಬಹುದು. ಆದರೆ ಇವು ಹಸಿವಿಗಾಗಿ ಹುಲ್ಲು ತಿನ್ನಲ್ಲ, ಬದಲಿಗೆ ತಮ್ಮ ಆರೋಗ್ಯ ಕಾಪಾಡಿಕೊಳ್ಳೋಕೆ ತಿನ್ನುತ್ತವೆ.

ಹುಲ್ಲು ತಿನ್ನಲು ಪ್ರಮುಖ ಕಾರಣಗಳು ಇಲ್ಲಿವೆ ನೋಡಿ

1. ಹೊಟ್ಟೆ ಸ್ವಚ್ಛ ಮಾಡಿಕೊಳ್ಳಲು

ಮಾಂಸಾಹಾರಿ ಪ್ರಾಣಿಗಳು ಮಾಂಸ ತಿನ್ನುವಾಗ ಅದರ ಜತೆಗೆ ಪ್ರಾಣಿಗಳ ಕೂದಲು, ಗರಿ ಹಾಗೂ ಸಣ್ಣ ಸಣ್ಣ ಮೂಳೆಗಳು ಹೊಟ್ಟೆ ಸೇರುತ್ತವೆ. ಇವು ಸುಲಭವಾಗಿ ಜೀರ್ಣವಾಗುವುದಿಲ್ಲ. ಇಂತಹ ಸಮಯದಲ್ಲಿ ಇವು ಹುಲ್ಲನ್ನು ತಿಂದು ವಾಂತಿ ಮಾಡಿಕೊಳ್ಳುತ್ತವೆ. ಇದರಿಂದ ಹೊಟ್ಟೆಯಲ್ಲಿ ಸಿಲುಕಿಕೊಂಡಿದ್ದ ತ್ಯಾಜ್ಯವೆಲ್ಲ ಹೊರಬಂದು ಹೊಟ್ಟೆ ಕ್ಲೀನ್ ಆಗುತ್ತದೆ.

2. ಹೊಟ್ಟೆ ನೋವು ಅಥವಾ ಅಜೀರ್ಣ ನಿವಾರಣೆಗೆ

ಪ್ರಾಣಿಗಳಿಗೆ ಹೊಟ್ಟೆ ಉಬ್ಬರ, ಅಜೀರ್ಣ ಅಥವಾ ಹೊಟ್ಟೆ ನೋವು ಬಂದಾಗ ಅವು ನೈಸರ್ಗಿಕ ಔಷಧಿಯಂತೆ ಹುಲ್ಲನ್ನು ತಿನ್ನುತ್ತವೆ. ಹುಲ್ಲು ಅವುಗಳ ಜೀರ್ಣಾಂಗವ್ಯೂಹವನ್ನು ಉತ್ತೇಜಿಸಿ, ಆರಾಮ ಸಿಗುವಂತೆ ಮಾಡುತ್ತದೆ.

3. ಪೋಷಕಾಂಶಗಳ ಕೊರತೆ ನೀಗಿಸಲು

ಹುಲ್ಲಿನಲ್ಲಿ ನಾರು (Fibre) ಮತ್ತು ಕೆಲವೊಂದು ಅಗತ್ಯ ವಿಟಮಿನ್‌ಗಳು ಇರುತ್ತವೆ. ತಮ್ಮ ದೈನಂದಿನ ಆಹಾರದಲ್ಲಿ ಈ ಪೋಷಕಾಂಶಗಳ ಕೊರತೆ ಉಂಟಾದಾಗ ಪ್ರಾಣಿಗಳು ಹುಲ್ಲನ್ನು ತಿನ್ನುತ್ತವೆ.

 cat eating grass
ಹುಲ್ಲು ತಿನ್ನುತ್ತಿರುವ ಬೆಕ್ಕು

ಬೆಕ್ಕು ಮತ್ತು ನಾಯಿಗಳು ಕೂಡ ಹುಲ್ಲು ತಿನ್ನುತ್ತವೆಯೇ?

ಹೌದು, ಬೆಕ್ಕು ಮತ್ತು ನಾಯಿಗಳು ಕೂಡ ಹುಲ್ಲು ತಿನ್ನುತ್ತವೆ. ಬೆಕ್ಕುಗಳು ತಮ್ಮ ಮೈಯನ್ನು ನೆಕ್ಕಿಕೊಳ್ಳುವಾಗ (Grooming) ಸಾಕಷ್ಟು ಕೂದಲು ಹೊಟ್ಟೆಗೆ ಹೋಗುತ್ತದೆ (Hairballs). ಇದನ್ನು ಹೊರಹಾಕಲು ಬೆಕ್ಕುಗಳು ಹುಲ್ಲು ತಿನ್ನುತ್ತವೆ. ಇನ್ನು ನಾಯಿಗಳು ತಮ್ಮ ಹೊಟ್ಟೆ ಕೆಟ್ಟಾಗ ಅಥವಾ ಕರಳಿನ ಕ್ರಿಯೆ ಸುಲಭವಾಗಲು ಹುಲ್ಲನ್ನು ಅಗಿಯುತ್ತವೆ.

ಇದನ್ನೂ ಓದಿ: ಸೂರತ್‌ನಲ್ಲಿ ಭೀಕರ ಅಗ್ನಿ ಅನಾಹುತ: ತ್ಯಾಜ್ಯ ಕೇಂದ್ರದಲ್ಲಿ ಆವರಿಸಿದ ದಟ್ಟ ಕಪ್ಪು ಹೊಗೆ! | Surat Fire Accident

ಒಟ್ಟಿನಲ್ಲಿ ಹೇಳಬೇಕೆಂದರೆ, ಈ ಪ್ರಾಣಿಗಳು ಹಸಿವಿನಿಂದ ಹುಲ್ಲು ತಿನ್ನುವುದಿಲ್ಲ. ತಮ್ಮ ಆರೋಗ್ಯವನ್ನು ತಾವೇ ಸರಿಮಾಡಿಕೊಳ್ಳಲು ಒಂದು ನೈಸರ್ಗಿಕ ಚಿಕಿತ್ಸೆಯಾಗಿ ಹುಲ್ಲನ್ನು ಬಳಸಿಕೊಳ್ಳುತ್ತವೆ.