ಐಆರ್‌ಸಿಟಿಸಿಯ ಚಾರ್ಧಾಮ್ ಯಾತ್ರೆ

Published on

ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್ ಲಿಮಿಟೆಡ್ (ಐ್ಕಇಇ), ಕರ್ನಾಟಕದ ಪ್ರವಾಸಿಗಳಿಗಾಗಿ ಅಕ್ಟೋಬರ್‌ನಲ್ಲಿ ಬೆಂಗಳೂರಿನಿಂದ ವಿಮಾನದ ಮೂಲಕ ತೀರ್ಥಯಾತ್ರೆಯನ್ನು ಆಯೋಜಿಸುತ್ತಿದೆ.

*14.10.2024 ರಂದು ಚಾರ್ಧಾಮ್ ವಿಮಾನ ಪ್ರವಾಸ.
13 ದಿನಗಳ ಚಾರ್ಧಾಮ್ ಯಾತ್ರೆಯು ಹರಿದ್ವಾರ, ಯಮುನೋತ್ರಿ, ಗಂಗೋತ್ರಿ, ಕೇದಾರನಾಥ, ಬದರಿನಾಥ್, ದೇವಪ್ರಯಾಗ ಮತ್ತು ಋಷಿಕೇಶವನ್ನು ಒಳಗೊಂಡಿದೆ. ಪ್ಯಾಕೇಜ್ ಬೆಲೆ ಪ್ರತಿ ವ್ಯಕ್ತಿಗೆ ರೂ.62,330 ರಿಂದ ಪ್ರಾರಂಭವಾಗುತ್ತದೆ. ಬೆಂಗಳೂರಿನಿಂದ ದೆಹಲಿಗೆ ಮತ್ತು ಹಿಂತಿರುಗಲು ವಿಮಾನ ಟಿಕೆಟ್‌ಗಳು, ಉತ್ತಮ ಗುಣಮಟ್ಟದ ಹೋಟೆಲ್‌ಗಳಲ್ಲಿ ವಸತಿ, ದೃಶ್ಯವೀಕ್ಷಣೆ ಮತ್ತು ವರ್ಗಾವಣೆಗಾಗಿ ವಾಹನ ವ್ಯವಸ್ತೆ, ದಕ್ಷಿಣ ಭಾರತೀಯ ಸಸ್ಯಾಹಾರಿ ಊಟ, ಪ್ರಯಾಣ ವಿಮೆ, ಪ್ರವಾಸದ ಬೆಂಗಾವಲು ಸೇವೆ ಮತ್ತು ಅನ್ವಯವಾಗುವ ತೆರಿಗೆಗಳನ್ನು ಇ ಪ್ಯಾಕೇಜ್ ಒಳಗೊಂಡಿದೆ.

*18.10.2024 ರಂದು ಗುಜರಾತ್ ವಿಮಾನ ಪ್ರವಾಸ.
8 ದಿನಗಳ ಗುಜರಾತ್ ಪ್ರವಾಸವು ದ್ವಾರಕಾ, ಪೋರಬಂದರ್, ಸೋಮನಾಥ್, ಭಾವನಗರ, ಅಹಮದಾಬಾದ್, ಕೆವಾಡಿಯಾ ಮತ್ತು ವಡೋದರವನ್ನು ಒಳಗೊಂಡಿದೆ. ಪ್ಯಾಕೇಜ್ ಬೆಲೆ ಪ್ರತಿ ವ್ಯಕ್ತಿಗೆ ರೂ.41,150 ರಿಂದ ಪ್ರಾರಂಭವಾಗುತ್ತದೆ. ದ್ವಾರಕಾದೀಶ್ ದೇವಾಲಯ, ನಾಗೇಶ್ವರದ ಜ್ಯೋತಿರ್ಲಿಂಗ, ಕೀರ್ತಿ ಮಂದಿರ, ಸುದಾಮ ದೇವಾಲಯ, ಭಾಲ್ಕಾ ತೀರ್ಥ ದೇವಾಲಯ, ಸೋಮನಾಥ ಜ್ಯೋತಿರ್ಲಿಂಗ, ನಿಷ್ಕಲಂಕ್ ಮಹಾದೇವ ದೇವಾಲಯ, ಸಬರಮತಿ ಆಶ್ರಮ, ಅಕ್ಷರಧಾಮ ದೇವಾಲಯ ಮತ್ತು ಏಕತೆಯ ಪ್ರತಿಮೆಯನ್ನು ಇ ಪ್ರವಾಸದಲ್ಲಿ ಸೇರಿಸಲಾಗಿದೆ. ವಿಮಾನ ಟಿಕೆಟ್‌ಗಳು, 3 ಸ್ಟಾರ್ ಸೌಲಭ್ಯದ ಹೋಟೆಲ್‌ಗಳಲ್ಲಿ ಬೆಳಗಿನ ಉಪಾಹಾರ
ಮತ್ತು ಭೋಜನದೊಂದಿಗೆ ವಸತಿ, ಹವಾ ನಿಯಂತ್ರಿತ ವಾಹನ ದಲ್ಲಿ ಪ್ರವಾಸ ಮತ್ತು ದೃಶ್ಯವೀಕ್ಷಣೆ, ಪ್ರಯಾಣ ವಿಮೆ, ಪ್ರವಾಸ ವ್ಯವಸ್ಥಾಪಕರು ಮತ್ತು ಅನ್ವಯವಾಗುವ ತೆರಿಗೆಗಳನ್ನು ಇ ಪ್ಯಾಕೇಜ್ ಒಳಗೊಂಡಿದೆ.

*22.10.2024 ವಾರಣಾಸಿ-ಗಯಾ-ಅಯೋಧ್ಯೆ-ಪ್ರಯಾಗರಾಜ್ ವಿಮಾನ ಪ್ರವಾಸ.
6 ದಿನಗಳ ಪ್ರವಾಸದಲ್ಲಿ, ವಾರಣಾಸಿಯ ಕಾಶಿ ವಿಶ್ವನಾಥ ದೇವಾಲಯ ಮತ್ತು ಅನ್ನಪೂರ್ಣ ದೇವಾಲಯ, ಗಯಾದ ಮಹಾಭೋಧಿ ದೇವಾಲಯ ಮತ್ತು ವಿಷ್ಣುಪಾದ ದೇವಾಲಯ, ಅಯೋಧ್ಯೆಯ ಶ್ರೀರಾಮ ದೇವಾಲಯ ಮತ್ತು ಹನುಮಾನ್ ಗರ್ಹಿ, ಪ್ರಯಾಗ್‌ರಾಜ್‌ನಲ್ಲಿರುವ ತ್ರಿವೇಣಿ ಸಂಗಮ ಮತ್ತು ಪಾತಾಳಪುರಿ ದೇವಾಲಯಕ್ಕೆ ಭೇಟಿ ನೀಡಲಾಗುತ್ತದೆ. ಪ್ಯಾಕೇಜ್ ಬೆಲೆ ಪ್ರತಿ
ವ್ಯಕ್ತಿಗೆ ರೂ.36,990 ರಿಂದ ಪ್ರಾರಂಭವಾಗುತ್ತದೆ. ವಿಮಾನ ಟಿಕೆಟ್‌ಗಳು, 3 ಸ್ಟಾರ್ ಸೌಲಭ್ಯದ ಹೋಟೆಲ್‌ಗಳಲ್ಲಿ ಬೆಳಗಿನ ಉಪಾಹಾರ ಮತ್ತು ಭೋಜನದೊಂದಿಗೆ ವಸತಿ, ಹವಾ ನಿಯಂತ್ರಿತ ವಾಹನ ದಲ್ಲಿ ಪ್ರವಾಸ ಮತ್ತು ದೃಶ್ಯವೀಕ್ಷಣೆ, ಪ್ರಯಾಣ ವಿಮೆ, ಪ್ರವಾಸ ವ್ಯವಸ್ಥಾಪಕರು ಮತ್ತು ಅನ್ವಯವಾಗುವ ತೆರಿಗೆಗಳನ್ನು ಇ ಪ್ಯಾಕೇಜ್ ಒಳಗೊಂಡಿದೆ.

ಹೆಚ್ಚಿನ ಮಾಹಿತಿ ಮತ್ತು ಬುಕಿಂಗ್‌ಗಳಿಗಾಗಿ, ಐ್ಕಇಇ ಅನ್ನು ಸಂಪರ್ಕಿಸಿ ಅಥವಾ ಡಿಡಿಡಿ.ಜ್ಟ್ಚಿಠ್ಚಿಠಿಟ್ಠ್ಟಜಿಞ.್ಚಟಞ ಗೆ ಭೇಟಿ ನೀಡಿ.
ಐ್ಕಇಇ ಬೆಂಗಳೂರು-8595931292/9003140710

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net