Biscuit : ಎಚ್ಚರ, ತಿನ್ನುವ ಮುನ್ನ ಪರೀಕ್ಷಿಸದಿದ್ದರೆ ಬಿಸ್ಕತ್​ನಲ್ಲಿ ಇದೂ ಇರಬಹುದು!

biscut
Published on

ಹೈದರಾಬಾದ್​: ವ್ಯಕ್ತಿಯೊಬ್ಬ ಕ್ರೀಮ್ ಬಿಸ್ಕತ್​(Biscuit) ಖರೀದಿಸಿ ಮನೆಗೆ ತಂದು ತನ್ನ ಮಗುವಿಗೆ ನೀಡಿದ್ದಾನೆ. ಆದರೆ ಆ ಬಿಸ್ಕತ್​ನಲ್ಲಿ ತೆಳುವಾದ ಕಬ್ಬಿಣದ ತಂತಿ ಪತ್ತೆಯಾಗಿದೆ. ಮಗು ಆ ಬಿಸ್ಕೆಟ್ ತಿಂದರೆ ದೊಡ್ಡ ಅವಘಡವೇ ಸಂಭವಿಸುತ್ತು. ಆದರೆ ಆತ ಸಕಾಲದಲ್ಲಿ ಎಚ್ಚೆತ್ತು ಅದನ್ನು ನೋಡಿದ್ದ. ಬಳಿಕ ಅದನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾನೆ. ಇದೀಗ ವೀಡಿಯೋ ವೈರಲ್ ಆಗಿದೆ.

ತೆಲಂಗಾಣದ ಕಾಮರೆಡ್ಡಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಈ ಭಾಗದ ವ್ಯಕ್ತಿಯೊಬ್ಬ ಸ್ಥಳೀಯ ಅಂಗಡಿಯಿಂದ ಬಿಸ್ಕತ್​ ಖರೀದಿಸಿದ್ದಾನೆ. ಆತನ ಮಗುವಿಗೆ ಕೊಟ್ಟಾಗ ಅದು ತಿನ್ನಲು ಪ್ರಾರಂಭಿಸಿದೆ. ಆಗ ಅದರಿಂದ ತೆಳುವಾದ ಕಬ್ಬಿಣದ ತಂತಿ ಹೊರಬಂದಿದೆ.

ಹೀಗಾಗಿ ಆ ವ್ಯಕ್ತಿ ಇದನ್ನು ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾನೆ. ಆತ ಅದರಲ್ಲಿ ಹೀಗೆ ಹೇಳಿದ್ದಾನೆ. ಎಲ್ಲಾ ಪೋಷಕರನ್ನು ಎಚ್ಚರಿಸಲು ನಾನು ಈ ವೀಡಿಯೊವನ್ನು ಮಾಡುತ್ತಿದ್ದೇನೆ. ದಯವಿಟ್ಟು ನಿಮ್ಮ ಮಕ್ಕಳಿಗೆ ತಿಂಡಿ ಕೊಡುವಾಗ ಜಾಗರೂಕರಾಗಿರಿ. ಒಳಗಡೆ ಏನಿದೆ ಅಂತ ಒಮ್ಮೆ ನೋಡಿ'' ಎಂದು ಹೇಳಿದ್ದಾನೆ.

ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ ಕೆಲವೇ ಕ್ಷಣಗಳಲ್ಲಿ ವಿಡಿಯೋ ವೈರಲ್ ಆಗಿದೆ. ಸಾವಿರಾರು ಮಂದಿ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. ಈ ವಿಡಿಯೋವನ್ನು ನೂರಾರು ಮಂದಿ ಲೈಕ್ ಮಾಡಿದ್ದಾರೆ. ಈ ವಿಡಿಯೋ ನೋಡಿದ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಜಾಗ್ರತೆಯಿಂದ ತಿಂದರೆ ಏನು ಗತಿ?, ಸಂಬಂಧಿಸಿದ ಕಂಪನಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net