ಮಗ ಮದುವೆಯಾಗಿಲ್ಲವೆಂದು ತುಂಡು ತುಂಡಾಗಿ ಕತ್ತರಿಸಿ ಎಸೆದ ಅಪ್ಪ ಅಮ್ಮ! ಮಗಳು, ಅಳಿಯನನ್ನೂ ಹಾಗೇ ಕೊಂದರು!

iran
Published on

ಟೆಹ್ರಾನ್: ಮಗನಿಗೆ ವಯಸ್ಸಾಗಿದೆ, ಆದರೂ ಅವನು ಮದುವೆಯಾಗಲು ಸಿದ್ಧನಾಗುತ್ತಿಲ್ಲ ಎನ್ನುವ ಒಂದೇ ಒಂದು ಕಾರಣಕ್ಕೆ ಅಪ್ಪ ಅಮ್ಮನೇ ಮಗನನ್ನು ಕೊಂದು, ತುಂಡರಿಸಿ ಚರಂಡಿಗೆ ಎಸೆದ ಘಟನೆ ಇರಾನ್​ನಲ್ಲಿ ನಡೆದಿದೆ. ಈ ಪ್ರಕರಣದ ತನಿಖೆ ವೇಳೆ ಇನ್ನಷ್ಟು ರೋಚಕ ಕಥೆಗಳು ಹೊರಬಿದ್ದಿದ್ದು, ಆರೋಪಿ ಸ್ಥಾನದಲ್ಲಿರುವ ದಂಪತಿ ತಮ್ಮ ಮಗಳು ಮತ್ತು ಅಳಿಯನನ್ನೂ ಅದೇ ರೀತಿ ಕೊಚ್ಚಿ ಕೊಂದಿರುವ ವಿಚಾರ ಬೆಳಕಿಗೆ ಬಂದಿದೆ.

ಇರಾನ್​ನ ಅಕ್ಬರ್ ಖೊರ್ರಾಮ್ಡಿನ್(81) ಮತ್ತು ಆತನ 74 ವರ್ಷದ ಪತ್ನಿ ಬಂಧಿತ ಆರೋಪಿಗಳು. ಅವರ ಮಗನಿಗೆ 47 ವರ್ಷಗಲಾಗಿದ್ದು, ಸಿನಿಮಾ ಕ್ಷೇತ್ರದಲ್ಲಿ ಕೆಲಸ ಮಾಡಿಕೊಂಡಿದ್ದ ಆತ ಮದುವೆಗೆ ಒಪ್ಪಿರಲಿಲ್ಲವಂತೆ. ಎಷ್ಟು ಹೇಳಿದರೂ ಮದುವೆಯಾಗಿಲ್ಲ ಎನ್ನುವ ಸಿಟ್ಟಿಗೆ ದಂಪತಿ ಅವರ ಮಗನನ್ನೇ ಕೊಂದಿದ್ದಾರೆ. ಮಗನ ಶವವನ್ನು ತುಂಡು ತುಂಡಾಗಿರಿಸಿ ಅದನ್ನು ಚರಂಡಿಗೆ ಎಸೆದಿದ್ದಾರೆ. ಈ ಕೊಲೆ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ದಂಪತಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ.

ವಿಚಾರಣೆ ವೇಳೆ ತಾವು ಇನ್ನೂ ಎರಡು ಕೊಲೆ ಮಾಡಿರುವುದಾಗಿ ದಂಪತಿ ಒಪ್ಪಿಕೊಂಡಿದ್ದಾರೆ. ದಂಪತಿಯ ಮಗಳು ಡ್ರಗ್ಸ್​ ಸೇವಿಸುತ್ತಿದ್ದಳಂತೆ ಹಾಗೂ ಆಕೆಯ ಬಾಯ್​ಫ್ರೆಂಡ್​ನನ್ನು ಮನೆಗೆ ಕರೆದುಕೊಂಡು ಬರುತ್ತಿದ್ದಳಂತೆ. ಆ ಕಾರಣಕ್ಕಾಗಿ ಅವಳನ್ನು ಕೊಲೆ ಮಾಡಲಾಗಿದೆ. ಅಳಿಯ ದಂಪತಿಯೊಂದಿಗೆ ಸರಿಯಾಗಿ ನಡೆದುಕೊಳ್ಳುತ್ತಿರಲಿಲ್ಲ ಎಂದು ಆತನನ್ನೂ ಇದೇ ರೀತಿ ಕೊಂದು ಚರಂಡಿಗೆ ಎಸೆದಿದ್ದರಂತೆ. ಈ ವಿಚಾರ ಕೇಳಿದ ಪೊಲೀಸರು ಶಾಕ್​ ಆಗಿದ್ದಾರೆ. ದಂಪತಿಗೆ ಇನ್ನೂ ಇಬ್ಬರು ಮಕ್ಕಳಿದ್ದು, ಅವರು ಸೇಫ್​ ಆಗಿರುವುದಾಗಿ ಹೇಳಲಾಗಿದೆ. ಸದ್ಯ ಆರೋಪಿ ದಂಪತಿ ಕಳೆದ ಮೂರು ವಾರಗಳಿಂದ ಪೊಲೀಸ್ ಸೆರೆವಾಸದಲ್ಲಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net