More

    ಶತಕ ದಾಟಿದ ಪೆಟ್ರೋಲ್ ದರ; ಕೇಕ್​ ಕತ್ತರಿಸಿ ಶೋಕಾಚರಣೆ ಮಾಡಿದ ಕಾಂಗ್ರೆಸ್ ನಾಯಕರು

    ಬೆಂಗಳೂರು: ಪೆಟ್ರೋಲ್, ಡೀಸೆಲ್​ ಬೆಲೆಯಲ್ಲಿ ಏರಿಕೆ ಕಂಡುಬರುತ್ತಿದ್ದು, ಒಂದು ಲೀಟರ್​ ಪೆಟ್ರೋಲ್ ದರ 100 ರೂಪಾಯಿ ಗಡಿ ದಾಟಿ ದಾಖಲೆ ಬರೆದಿದೆ. ಆ ಹಿನ್ನೆಲೆಯಲ್ಲಿ ರಾಜ್ಯ ಕಾಂಗ್ರೆಸ್ ನಾಯಕರು ಕೆಪಿಸಿಸಿ ಕಚೇರಿಯಲ್ಲಿ ಕೇಕ್​ ಕತ್ತರಿಸಿ ಶೋಕಾಚರಣೆ ಮಾಡಿದ್ದಾರೆ.

    ಪೆಟ್ರೋಲ್​ ಬೆಲೆ ಏರಿಕೆ ಕುರಿತಾಗಿ ಬುಧವಾರದಂದು ಕೆಪಿಸಿಸಿ ಕಚೇರಿಯಲ್ಲಿ ಕೈ ನಾಯಕರು ಜಂಟಿ ಸುದ್ದಿಗೋಷ್ಠಿ ನಡೆಸಿದ್ದಾರೆ. ಸೈಕಲನ್ನೂ ಇಟ್ಟುಕೊಂಡೇ ಸುದ್ದಿಗೋಷ್ಠಿ ನಡೆಸಲಾಗಿದೆ. ಈ ಸಮಯದಲ್ಲಿ ಮಾತನಾಡಿದ ಮಾಜಿ ಸಚಿವ ಕಷ್ಣಭೈರೇಗೌಡ, “ಪೆಟ್ರೋಲ್,ಡಿಸೇಲ್ ಬೆಲೆ ಏರುತ್ತಲೇ ಇದೆ. ದೇಶದ ಇತಿಹಾಸದಲ್ಲೇ ಕಂಡರಿಯದ ಏರಿಕೆಯಾಗಿದೆ. ಶತಕದ ಗಡಿಯನ್ನ ಪೆಟ್ರೋಲ್ ದರ ದಾಟಿದೆ. ಯಾರೂ ಮಾಡದ ಸಾಧನೆ ಪ್ರಧಾನಿ ಮಾಡಿದ್ದಾರೆ. ಇದನ್ನ ಸಂಭ್ರಮಿಸಬೇಕಾ,ಶೋಕಾಚರಿಸಬೇಕಾ ಗೊತ್ತಿಲ್ಲ” ಎಂದು ಹೇಳಿದ್ದಾರೆ.

    ಆದರೆ ಈ ಬೆಲೆ ಏರಿಕೆಯನ್ನು ಬಿಜೆಪಿ ಸಮರ್ಥಿಸುತ್ತಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಬೆಲೆ ಏರಿಕೆಯಾಗಿದೆ ಎಂದು ಹೇಳುತ್ತಿದ್ದಾರೆ. 2012-13ರಲ್ಲಿ ಕ್ರೂಡ್ ಆಯಿಲ್ ಬೆಲೆ 125 ಡಾಲರ್ ಇತ್ತು. ಆಗ ಪೆಟ್ರೋಲ್ ಬೆಲೆ 70 ರೂಪಾಯಿ ಇತ್ತು. ಆದರೆ ಅಂದು ಪೆಟ್ರೋಲ್ ಬೆಲೆ ಹೆಚ್ಚು ಮಾಡಿರಲಿಲ್ಲ. ಇಂದು ವಿಶ್ವಮಟ್ಟದಲ್ಲಿ ಕ್ರೂಡ್ ಆಯಿಲ್ ಬೆಲೆ 70 ಡಾಲರ್ ಇದೆ. ಆದರೂ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾಗುತ್ತಲೇ ಇದೆ. ಇದೀಗ ನೂರರ ಗಡಿಯನ್ನ ದಾಟಿದೆ. 3,50,000 ಕೋಟಿ ರೂಪಾಯಿ ಆದಾಯ ಪೆಟ್ರೋಲ್​ನಿಂದ ಬಂದಿದೆ. ಕೇಂದ್ರ ಸರ್ಕಾರಕ್ಕೆ ಆದಾಯ ಹರಿದು ಬರ್ತಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಲೆ ಇಳಿಕೆಯಾಗಿದೆ. ಆದರೆ ಇಲ್ಲಿ ಮಾತ್ರ ತೆರಿಗೆ ಬೆಲೆ ಗಗನಕ್ಕೆ ಹೋಗಿದೆ ಎಂದು ಅವರು ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.

    ಇದೇ ವೇಳೆ ಮಾತನಾಡಿದ ಮಾಜಿ ಸಚಿವ ಪ್ರಿಯಾಂಕ ಖರ್ಗೆ, “ಬಿಜೆಪಿಯವರದ್ದು ಯಾವಾಗಲೂ ಒಂದೇ ಜಪ. 50 ವರ್ಷದಲ್ಲಿ ಮಾಡದ ಸಾಧನೆ ನಾವು ಮಾಡಿದ್ದೇವೆ ಅಂತಾರೆ. ಇವತ್ತು ಬಿಜೆಪಿಯವರ ಮಾತು ಒಪ್ಪಬೇಕಿದೆ. ನಾವು ಇದ್ದಾಗ ಇಷ್ಟು ನಿರುದ್ಯೋಗ ಇರಲಿಲ್ಲ. ಬಡತನದ ರೇಖೆ ಈಗಿದ್ದಷ್ಟು ಆಗ ಕುಸಿದಿರಲಿಲ್ಲ. ಜಿಎಸ್ಟಿ, ನೋಟ್ ಬ್ಯಾನ್ ಎಲ್ಲವೂ ಜನರಿಗೆ ಅರ್ಥವಾಗಿದೆ. ಈಗ ಜ‌ನ ಕಷ್ಟ ನಷ್ಟಗಳನ್ನ ಅರಿತಿದ್ದಾರೆ. ನಾವಿದ್ದಾಗ ಪೆಟ್ರೋಲ್ ಬೆಲೆ 60 ರೂಪಾಯಿ ದಾಟಿರಲಿಲ್ಲ. ಇವರ ಅವಧಿಯಲ್ಲಿ ಪೆಟ್ರೋಲ್ ಏರುತ್ತಲೇ ಇದೆ. ಕ್ರೂಡ್ ಆಯಿಲ್ ಬೆಲೆ ಕಡಿಮೆ ಇದ್ರೂ ಶತಕ ಬಾರಿಸಿದೆ. ಕಾಂಗ್ರೆಸ್ ಅವಧಿಯಲ್ಲಿ ತೆರಿಗೆ 45% ದಾಟಿರಲಿಲ್ಲ. ಈಗ ಬರಿ ತೆರಿಗೆಯೇ 69% ದಾಟುತ್ತಿದೆ ಎಂದು ಹೇಳಿದರು.

    ಎಲ್ಲ ವ್ಯಾಪಾರದ ಮೇಲೆ ಇದರ ಹೊಡೆತ ಬಿದ್ದಿದೆ. ಸಾರಿಗೆ, ಆಟೋ ಮೊಬೈಲ್ ಎಲ್ಲದರ ಮೇಲೂ ಬಿದ್ದಿದೆ. ಡೀಸೆಲ್ ಏರಿದರೆ ಅಗತ್ಯ ಸರುಕುಗಳ ಬೆಲೆ ಹೆಚ್ಚಲಿದೆ. ಆಗ ಇದರ ಹೊರೆ ಶ್ರೀಸಾಮಾನ್ಯರು ಹೊರಬೇಕು. ಇವತ್ತು ಜನರ ಆದಾಯ ಕಡಿಮೆಯಾಗಿದೆ. ಸಾರಿಗೆ ಕ್ಷೇತ್ರದ ಮೇಲೆ ಇದರ ಹೊರೆ ಹೆಚ್ಚು ಬಿದ್ದಿದೆ. ಸರಕು ಸಾಗಿಸಲು 15% ಹೆಚ್ಚು ಬೇಡಿಕೆ ಇಡ್ತಿದ್ದಾರೆ. ಲಾರಿ ಯಾರ್ಡ್​ಗಳಲ್ಲಿ ಜಗಳ ಪ್ರಾರಂಭವಾಗಿದೆ. ಎಪಿಎಂಸಿಯವರ ಜತೆ ಲಾರಿಯವರು ಜಗಳ ಮಾಡ್ತಿದ್ದಾರೆ. ಪ್ರತಿ ಟ್ರಿಪ್​ಗೆ 50 ರೂ ಕೇಳ್ತಿದ್ದಾರೆ. ಪ್ರತಿ ಕೆಜಿಗೆ 25ರಿಂದ 50 ಪೈಸೆ ಹೆಚ್ಚಳವಾಗ್ತಿದೆ. ಹೋಲ್ ಸೇಲ್ ನಿಂದ ರಿಟೇಲ್ ಗೆ ಬಂದಾಗ ಇನ್ನಷ್ಟು ಹೆಚ್ಚಾಗ್ತಿದೆ. ರಿಟೇಲ್ ನವರು ಪ್ರತಿ ಕೆಜಿಗೆ 8 ರೂ ಹೆಚ್ಚಳವಾಗುತ್ತದೆ. ಡಿಸೇಲ್ ಬೆಲೆ ಏರಿದರೆ ಇದರ ಮೇಲೆ ಪರಿಣಾಮ ಬೀರುತ್ತದೆ ಎಂದು ಖರ್ಗೆ ಅವರು ಕೇಂದ್ರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

    ಮನೆಬಾಗಿಲಿಗೆ ಆನಂದಯ್ಯನವರ ಆಯುರ್ವೇದ ಔಷಧ: ಟಿಟಿಡಿಯಿಂದ ದೇಶಾದ್ಯಂತ ಪೂರೈಕೆಗೆ ಮುಂದಾದ ಸರ್ಕಾರ

    16 ವರ್ಷದ ಬಾಲಕಿಗೆ ಕಾಮೋತ್ತೇಜಕ ನೀಡಿ 8 ವರ್ಷಗಳ ಕಾಲ ರೇಪ್​ ಮಾಡಿದ ಕಾಮುಕ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts